ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ .ಶಿವಯೋಗಿ ಸಿ.ಕಳಸದ, ಭಾಆಸೇ, ರವರು, ಸ್ಮಾರ್ಟ್ ಸಿಟಿಯಿಂದ ಕೈಗೊಂಡಿರುವ ಬೆಳಗಾವಿ ಸಿಟಿ ಬಸ್ ಟರ್ಮಿನಸ್ ಗೆ ಭೇಟಿ ನೀಡಿ ಕಾಮಗಾರಿ ಪರಿವೀಕ್ಷಣೆ ನಡೆಸಿದರು.
ಹಾಗೆಯೇ ಎನ್‌ಡಬ್ಲ್ಯುಕೆಆರ್‌ಟಿಸಿ ನಿರ್ಮಿಸುತ್ತಿರುವ ಬೆಳಗಾವಿ ಬಸ್ ನಿಲ್ದಾಣವನ್ನು ಪರಿಶೀಲಿಸಿದ ಅವರು ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಚರ್ಚಿಸಿದರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸದರಿ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಮಹಿಳಾ ಕೊಠಡಿ, ಬೇಬಿ ಕೇರ್ ಕೇಂದ್ರ, ಪಾರ್ಸೆಲ್ ಮತ್ತು ಕೊರಿಯರ್‌ಗಳ ಸೇವೆಗಳ ಕೇಂದ್ರ, ಛಾವಣಿಗಳಿಗೆ ಸೋಲಾರ್‌ಪ್ಯಾನಲ್, ಏಕ ಬಳಕೆ ಪ್ಲಾಸ್ಟಿಕ್ ಮರುಬಳಕೆ ಯಂತ್ರ ಅಳವಡಿಕೆ ಮತ್ತು ಬಸ್ ನಿಲ್ದಾಣದಿಂದ ವಾಣಿಜ್ಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಸೂಚಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ