ಬೆಳಗಾವಿ: ಪ್ರವಾದಿ ಮೊಹಮ್ಮದ ಪೈಗಂಬರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ನಾಯಕಿ ನುಪೂರ ಶರ್ಮ ಅವರ ಪ್ರತಿಕೃತಿ ಮಾಡಿ ನಗರದ ನಡುರಸ್ತೆಯಲ್ಲಿ ಗಲ್ಲಿಗೇರಿಸಿದ ಘಟನೆ ನಡೆದಿದೆ.
ನಗರದ ಪೋರ್ಟ್ ರಸ್ತೆಯಲ್ಲಿ ನುಪೂರ ಶರ್ಮಾ ಅವರ ಪ್ರತಿಕೃತಿಗೆ ಸೀರೆ ಹಾಕಿ ನಡು ರಸ್ತೆಯಲ್ಲಿ ತಂತಿಗೆ ಗಲ್ಲಿಗೇರಿಸಲಾಗಿದೆ. ಗುರುವಾರ ರಾತ್ರಿ ಈ ಪ್ರತಿಕೃತಿ ಜೋತು ಬಿಡಲಾಗಿದೆ. ಈ ರಸ್ತೆಯಲ್ಲಿ ಓಡಾಡುತ್ತಿರುವವರಿಗೆ ಭಯವಾಗುತ್ತಿದೆ. ಈ ಬಗ್ಗೆ ಹಿಂದೂ ಸಂಘಟನೆಗಳ ಮುಖಂಡರು, ಈ ಪ್ರತಿಕೃತಿಯನ್ನು ಪೊಲೀಸರು ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ಅದನ್ನು ಸ್ವತಃ ತೆರವು ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
