ನಾಯಿ, ಕಚ್ವಿ ಮಗು ಸಾವು,10 ಲಕ್ಷ ₹ ಪರಿಹಾರ ಕೊಡುವಂತೆ ಹೈಕೋರ್ಟ್ ಆರ್ಡರ್….
ಬೆಳಗಾವಿ-ಬೀದಿ ನಾಯಿಗಳ ದಾಳಿಗೆ ಮಗು ಬಲಿಯಾಗಿತ್ತು ಈ ಕುರಿತು ಮಹತ್ವ್ ತೀರ್ಪು ನೀಡಿರುವ ಹೈಕೋರ್ಟ್ ಮೃತಪಟ್ಟ ಮಗುವಿನ ಕುಟುಂಬದವರಿಗೆ 10 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಬೀದಿ ನಾಯಿ ದಾಳಿಯಿಂದ ಮೃತಪಟ್ಟ ಮಗು ಅಬ್ಬಾಸ ಗೆ ಒಂದು ತಿಂಗಳೊಳಗಾಗಿ 10 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಬೆಳಗಾವಿ ಜಿಲ್ಲಾ ಪಂಚಾಯತಿಗೆ ಸೂಚನೆ ನೀಡಿದೆ.
ಬೆಳಗಾವಿ ತಾಲೂಕಿನ ಬಾಳೇಕುಂದ್ರಿಯಲ್ಲಿ ಬೀದಿ ನಾಯಿ ದಾಳಿಗೆ ಬಲಿಯಾಗಿದ್ದ ಎರಡೂ ವರ್ಷದ ಬಾಲಕನ ತಂದೆ ಪರಿಹಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳನ್ನು ನಿಯಂತ್ರಣ ಮಾಡಿ ಅವುಗಳ ರಕ್ಷಣೆ ಮಾಡುವುದು ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಯದ್ದು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಮನೆಯ ಹಿಂದೆ ಬಹಿರ್ದಸೆಗೆ ಹೋದ ಬಾಲಕ ಅಬ್ಬಾಸ್ ನನ್ನು ಕಳೆದ ನಾಲ್ಕೈದು ವರ್ಷದ ಹಿಂದೆ ಬೀದಿ ನಾಯಿ ದಾಳಿಗೆ ಬಲಿಯಾಗಿದ್ದ ಈಗ ಹೈಕೋರ್ಟ್ ಜಿಪಂಗೆ ಆ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಬೇಕೆಂದು ಸೂಚನೆ ನೀಡಿದೆ.
ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು. ಅವು ಹೆಚ್ಚಾಗದಂತೆ ಸಂತಾನ ಹರಣ ಮಾಡಬೇಕು. ಬೀದಿ ನಾಯಿ ಹಾವಳಿಯಿಂದ ಜಿಲ್ಲೆಯ ಜನರ ರಕ್ಷಣೆ ಮಾಡಬೇಕೆಂಬದು ಜನರ ಒತ್ತಾಸೆಯಾಗಿದೆ.