ಸಾಧ್ಯವಾದ ಸಂಪರ್ಕ;
ಕುಟುಂಬಸ್ಥರು ನಿರಾಳ
ಬೆಳಗಾವಿ: ಅಮರನಾಥ ದರ್ಶನಕ್ಕೆ ತೆರಳಿದ್ದ ಇಲ್ಲಿನ ಮಹಿಳೆಯೊಬ್ಬರು ನಿನ್ನೆಯಿಂದ ಸಂಪರ್ಕಕ್ಕೆ ಲಭ್ಯವಾಗದ್ದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಈಗ ಕರೆ ಮಾಡಿ ಪತಿಯೊಂದಿಗೆ ಮಾತನಾಡಿದ್ದು, ಕುಟುಂಬ ವರ್ಗದಲ್ಲಿ ಒಂದಿಷ್ಟು ನಿರಾಳಭಾವ ಮೂಡಿದೆ.
ಬಸವನ ಕುಡಚಿಯ ದೇವರಾಜ ಅರಸ ಕಾಲೊನಿಯಲ್ಲಿ ವಾಸಿಸುತ್ತಿರುವ ಸೀಮಾ ಬೆಳಗೂರ ಎಂಬುವರು ಜು.5ರಂದು ಅಮರನಾಥ ದರ್ಶನಕ್ಕೆ ಹೋಗಿದ್ದರು. ಆದರೆ, ಎಷ್ಟೇ ಕರೆ ಮಾಡಿದರೂ ಕುಟುಂಬದವರಿಗೆ ಸಿಕ್ಕಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕುಟುಂಬದವರ ನಿದ್ದೆಗೆಡಿಸಿತ್ತು.
ಈಗಷ್ಟೇ ಪತ್ನಿ ಜೊತೆ ಮಾತನಾಡಿದೆ. ಕರೆ ಮಾಡಿ ಮಾತನಾಡಿದ್ದರಿಂದ ಖುಷಿಯಾಗಿದೆ. ಬೇಗ ಆರಾಮಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದೆವೆ ಎಂದು ಸುಧಾಕರ ಪ್ರತಿಕ್ರಿಯಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ