ಬೆಳಗಾವಿ-ಚಿರತೆಯ ಓಡಾಟಕ್ಕೆ ಗಡಿ ಗಡ,ಗಡ ಅಂತಾ ನಡಗುತ್ತಿದೆ,ಬೆಳಗಾವಿಯಲ್ಲಿ ಚಿರತೆ ಬಿಟ್ರೆ,ಇಲ್ಲಿ ಬೇರೆ ವಿಚಾರವೇ ಇಲ್ಲ.
ನಗರಕ್ಕೆ ಚಿರತೆ ನುಗ್ಗಿದ ನಂತರ 22 ಶಾಲೆಗಳಿಗೆ ನಿರಂತರವಾಗಿ ರಜೆ ಫಿಕ್ಸ್ ಆಗಿದೆ,ಜನರ ನೆಮ್ಮದಿ ಹಾಳಾಗಿದ್ದರೆ,ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ,ಚಿರತೆ ಅಡಗಿ ಕುಳಿತಿರುವ ಗಾಲ್ಫ್ ಮೈದಾನದ ಸುತ್ತ ಮುತ್ತಲಿನ ಬಡಾವಣೆಗಳು ಭೀತಿಯಲ್ಲಿ ಬದುಕುವಂತಾಗಿದೆ.
ಚಿರತೆ ಪತ್ತೆಗಾಗಿ ಶಿವಮೊಗ್ಗದ ಸಕ್ರೆಬೈಲನಿಂದ ಬೆಳಗಾವಿಗೆ ಎರಡು ಆನೆಗಳು ಬಂದಿವೆ.ಗಜಪಡೆಯಿಂದ ಇಂದು ನಡೆದ,ಆಪರೇಷನ್ ಚೀತಾ ಇಂದು ಕೂಡ ಫೇಲ್.ಆಗಿದೆ.ಅರಣ್ಯ ಇಲಾಖೆಯ ತಂತ್ರಗಾರಿಕೆ ಇವತ್ತು ಕೂಡ ಠುಸ್ ಆಗಿದೆ.
ಬಲೆಗೆ ಬೀಳದೆ ಜಾರಿಕೊಳ್ಳುತ್ತಿರುವ ಜಾಣ ಚಿರತೆ.ಒಮ್ಮೆಲೆ ಕಾಣಿಸಿ ಮಾಯವಾಗುತ್ತಿದೆ.ಚಿರತೆಯ ಕಣ್ಣಾಮುಚ್ಚಾಲೆ ಆಟಕ್ಕೆ ಅರಣ್ಯ ಇಲಾಖೆ ಹೈರಾಣಾಗಿದೆ.ಕಳೆದೇರೆಡು ದಿನಗಳಿಂದ ಗಜಪಡೆ ಮೂಲಕ ಶೋಧ ಕಾರ್ಯ ನಡೆಯುತ್ತಿದೆ.ಗಜಪಡೆಗೂ ಕಾಣಿಸದೇ ಮರೆಯಾಗುತ್ತಿರುವ ಕಾಡು ಮೃಗ ಚಿರತೆ ಕಾರ್ಯಪಡೆಗೆ ಕೈಕೊಡುತ್ತಿದೆ.
ಇಂದು ಕೂಡ 8 ಮೈಲಿ ಸುತ್ತಿದ ಗಜಪಡೆ ನಿರಾಸೆಯಿಂದ ಮರಳಿದೆ.ಡ್ರೋನ್ ಕ್ಯಾಮೆರಾ, ಸಿಡಿ ಮದ್ದು, ನುರಿತ ಹಂದಿ ಹಿಡಿಯುವ ತಂಡ ಆಯ್ತು.ಪ್ರಾಣಿ ಹಿಡಿಯುವ ಎಕ್ಸ್ಪರ್ಟ್ ಅರಣ್ಯ ಸಿಬ್ಬಂದಿಗಳು ಬಂದ್ರೂ ಸಹ ಚಿರತೆ ಡೊಂಡ್ ಕೇರ್ ಎನ್ನುತ್ತಿದೆ.