ಮತದಾರರ ಪಟ್ಟಿಗೆ ಆಧಾರ್ ಜೋಡಣೆ: ವಿಶೇಷ ಅಭಿಯಾನ ಸೆ.4 ರಂದು
ಬೆಳಗಾವಿ,ಸೆ.3(ಕರ್ನಾಟಕ ವಾರ್ತೆ) : ಭಾರತ ಚುನಾವಣೆ ಆಯೋಗದ ಸುಧಾರಣೆಗಳನ್ವಯ ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತವಾಗಿ ಆಧಾರ ಸಂಖ್ಯೆ ಜೋಡಣೆ ಮಾಡಲು ಸೆಪ್ಟೆಂಬರ್ 4 ರಂದು ವಿಶೇಷ ಆಂದೋಲನವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಮತದಾರರು ತಮ್ಮ ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್)ಗೆ ಆಧಾರ ಮಾಹಿತಿಯೊಂದಿಗೆ ದೃಢೀಕರಿಸಲು ಅಥವಾ ಆಧಾರ್ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದಿದ್ದಲ್ಲಿ ಮನ್ರೇಗಾ ಉದ್ಯೋಗ ಕಾರ್ಡು/ ಬ್ಯಾಂಕ್; ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕಗಳು / ಕಾರ್ಮಿಕ ಮಂತ್ರಾಲಯದ ಯೋಜನೆಯಡಿಯಲ್ಲಿ ನೀಡಲಾದ ಆರೋಗ್ಯ ವಿಮೆ , ಸ್ಮಾರ್ಟ್ ಕಾರ್ಡು , ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್ , ಎನ್.ಪಿ.ಆರ್ ಅಡಿಯಲ್ಲಿ ಆರ್.ಜಿ.ಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್ , ಇಂಡಿಯನ್ ಪಾಸ್ ಪೋರ್ಟ್ ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ ರಾಜ್ಯ ಸರ್ಕಾರ ಸಾರ್ವಜನಿಕ ವಲಯದ ಉದ್ದಿಮೆಗಳು, ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಒದಗಿಸಿ ದೃಢೀಕರಿಸಿ ಮತದಾರರ ಪಟ್ಟಿಗೆ ಆಪ್ ಡೇಟ್ ಮಾಡಿಸಬಹುದು.
ಮತಗಟ್ಟಿಗಳಲ್ಲಿ ಆಯಾ ಮತಗಟ್ಟಿ ವ್ಯಾಪ್ತಿಯ ಪ್ರದೇಶದಲ್ಲಿ ಸಂಬಂಧಪಟ್ಟ ನೋಂದಾಯಿತ ಮತದಾರಿಂದ ಆಧಾರ್ ಕಾರ್ಡ್, ಇತರೆ ದಾಖಲೆಗಳ ಜೋಡಣೆ ಕಾರ್ಯವನ್ನು ನಡಿಸಲಿದ್ದು, ಆಯಾ ವ್ಯಾಪ್ತಿಯ ಎಲ್ಲ ಮತದಾರರು ಇದರ ಸದುಪಯೋಗ ಪಡಿಸಿಕೊಂಡು ಸ್ವತಃ ವೋಟರ್ ಹೆಲ್ಪ್ ಲೈನ್ ಆಪ್ (VHA) ನ್ನು ಬಳಸಿಕೊಂಡು ದಾಖಲೆಗಳನ್ನು ಅಪಡೇಟ್ ಮಾಡಲು ಅಥವಾ ನಮೂನೆ-6ಬಿ ಆಧಾರ್ ಕಾರ್ಡ್, ಇತರೆ ದಾಖಲಾತಿಗಳನ್ನು ನೀಡಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ದಾಖಲಾತಿಗಳ ಜೋಡಣೆಯನ್ನು ಮಾಡಿಸಿ ಮತದಾರರು ಪಟ್ಟಿಯಲ್ಲಿನ ವಿವರವನ್ನು ದೃಢಿಕರಿಸಿಕೊಳ್ಳಬಹುದು.
ಈ ಸದಾವಕಾಶವನ್ನು ಮತದಾರರು ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***