ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ಇಂದಿಗೆ ಒಂದು ವರ್ಷ ಕಳೆದರೂ ಅಧಿಕಾರದಿಂದ ವಂಚಿತರಾಗಿರುವ ಬೆಳಗಾವಿ ಪಾಲಿಕೆ ಸದಸ್ಯರು ಇವತ್ತು ಪಾಲಿಕೆ ಕಚೇರಿ ಎದುರು ಕೇಕ್ ಕಟ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಇಂದು ಕೆಲವು ಜನ ಪಾಲಿಕೆ ಸದಸ್ಯರು ಪಾಲಿಕೆ ಕಚೇರಿಯಲ್ಲಿ ಕೇಕ್ ಕಟ್ ಮಾಡಿ ವರ್ಷಾಚರಣೆ ಮಾಡಲು ಮುಂದಾದರು,ಆದ್ರೆ ಪಾಲಿಕೆ ಆಯುಕ್ತರು ಅದಕ್ಕೆ ಅನುಮತಿ ಕೊಡಲಿಲ್ಲ ಎಂದು ಹೇಳಿದ ಪಾಲಿಕೆ ಸದಸ್ಯರು ಪಾಲಿಕೆ ಕಚೇರಿ ಆವರಣದಲ್ಲೇ ಕೇಕ್ ಕಟ್ ಮಾಡಿ ಸರ್ಕಾರದ ವಿಳಂಬ ಧೋರಣೆಯ ವಿರುದ್ಧ ಕಿಡಿಕಾರಿದ್ರು..
ಚುನಾಯಿತರಾಗಿ ವರ್ಷ ಕಳೆದಿದೆ, ಇನ್ನುವರೆಗೆ ಮೇಯರ್ ಚುನಾವಣೆ ನಡೆದಿಲ್ಲ,ನಾವು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿಲ್ಲ.ನಮ್ಮನ್ನು ಆಯ್ಕೆ ಮಾಡಿದ ಜನ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ.ಅವರ ಸಮಸ್ಯೆ ಬಗೆಹರಿಸುವ ಅಧಿಕಾರವೂ ನಮಗಿಲ್ಲ.ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಅಧಿಕಾರ ನೀಡಿದ ಸರ್ಕಾರ ಇನ್ನುವರೆಗೆ ಮೇಯರ್ ಚುನಾವಣೆ ನಡೆಸಿಲ್ಲ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್, ಎಂಐಎಂ,ಹಾಗೂ ಕೆಲವು ಜನ ಪಕ್ಷೇತರ ನಗರ ಸೇವಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.ಬಿಜೆಪಿಯ ಪಾಲಿಕೆ ಸದಸ್ಯರು ಬಾಗವಹಿಸಲಿಲ್ಲ.