ಬೆಳಗಾವಿ-ಸೋನಿ ಟಿವ್ಹಿಯಲ್ಲಿ ಸೂಪರ್ ಸ್ಟಾರ್ ಅಮೀತಾಬ ಬಚ್ಚನ್ ನಿರೂಪಿಸುವ ಕೌನ್ ಬನೇಗಾ ಕರೋಡ್ ಪತಿ ಇಂದು ಸೋಮವಾರದ ಎಪಿಸೋಡ್ ನಲ್ಲಿ ಬೆಳಗಾವಿ ಹೆಸರು ಪ್ರಸ್ತಾಪವಾಯಿತು.
1967 ರಲ್ಲಿ ಯಾವ ಪ್ರದೇಶದ ನಾಗರಿಕರು ಮಹಾರಾಷ್ಟ್ರ ರಾಜ್ಯಕ್ಕೆ ಸೇರ್ಪಡೆಯಾಗುವ ವಿಚಾರದಲ್ಲಿ ವಿರುದ್ಧವಾಗಿ ಮತ ಚಲಾಯಿಸಿದರು ಎಂಬ ಪ್ರಶ್ನೆಗೆ,ಬೆಳಗಾವಿ ಗೋವಾ,ಸೇರಿದಂತೆ ನಾಲ್ಕು ಪ್ರದೇಶಗಳ ಹೆಸರನ್ನು ಆಪಶ್ಯನ್ ನೀಡಲಾಗಿತ್ತು.
ಈ ಪ್ರಶ್ನೆಗೆ ಸರಿಯಾದ ಉತ್ತರ ಗೋವಾ ಆಗಿತ್ತು. ಆದ್ರೆ ಸೂಪರ್ ಸ್ಟಾರ್ ಅಮೀತಾಬ್ ಬಚ್ಚನ್ ಬೆಳಗಾವಿಯ ಹೆಸರು ಹೇಳಿದ್ರು.
ರಾಜ್ಯ ಸರ್ಕಾರ ಬೆಳಗಾಂವ ಬದಲಾಯಿಸಿ ಬೆಳಗಾವಿ ಎಂದು ಹೆಸರು ಬದಲಾಯಿಸಿದರೂ ರಾಜ್ಯದ ಹಲವಾರು ಜನ ನಾಯಕರು ಇವತ್ತಿಗೂ ಬೆಳಗಾಂ ಎಂದೇ ಹೇಳ್ತಾರೆ.ಬೆಳಗಾವಿ ಎಂದು ರಾಷ್ಟ್ರವೇ ಒಪ್ಪಿಕೊಂಡಿರುವಾಗ ರಾಜ್ಯದ ನಾಯಕರು ಬೆಳಗಾಂ ಎಂದೇ ಹೇಳುವದು ದುರ್ದೈವ..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ