ವಾಕಿಂಗ್ ಮಾಡುವ ಮಹಿಳೆಯರು ಟಾರ್ಗೆಟ್….!!

ಬೆಳಗಾವಿ- ಬೆಳಗಾವಿ ಜಿಕ್ಲೆಯ ಗೋಕಾಕ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಲೂಟಿಕೋರನನ್ನು ಗೋಕಾಕ್ ಪೋಲೀಸ್ರು ಬಂಧಿಸಿದ್ದಾರೆ.

ಗೋಕಾಕಿನ ಕಡಬಗಟ್ಟಿ ಪ್ರದೇಶದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯ ಸುಮಾರು ಎರಡು ಲಕ್ಷ ರೂ ಮೌಲ್ಯದ ಮಂಗಳಸೂತ್ರ ದೋಚಿ ಪರಾರಿಯಾಗಿದ್ದ ದರೋಡೆಕೋರನನ್ನು ಪೋಲೀಸರು ಪತ್ತೆ ಮಾಡಿ ಆತನಿಂದ ಮಂಗಳಸೂತ್ರವನ್ನು ವಶಪಡಿಸಿಕೊಂಡಿದ್ದಾರೆ.

ಬಸವರಾಜ್ ರಾಮಣ್ಣಾ ಕರೆಯಪ್ಪಗೋಳ್ ಎಂಬಾತನನ್ನು ಬಂಧಿಸಿರುವ ಪೋಲೀಸರು ಈತನಿಂದ ಮಂಗಳಸೂತ್ರ ಮತ್ತು ಲೂಟಿಗೆ ಬಳಿಸುತ್ತಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.

ಗೋಕಾಕಿನ ಕಡಬಗಟ್ಟಿ ರಸ್ತೆಯಲ್ಲಿ ವಾಕಿಂಗ್ ಗೆ ಹೋಗುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಅವರಿಂದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಖದಿಮ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾನೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *