Breaking News

ಗಾಳಿಪಟ, ಹನ್ನೊಂದು ವರ್ಷದ ಬಾಲಕನ ಸಾವಿಗೆ ಕಾರಣವಾಯ್ತು…

ಬೆಳಗಾವಿ- ಈಗ ಶಾಲೆಗೆ ದಸರಾ ರಜೆ ಹೀಗಾಗಿ ಶಾಲಾ ಮಕ್ಕಳು ಮನೆಯಲ್ಲಿ ಇರುವದು ಸಹಜ, ಮನೆ ಕೆಲಸಕ್ಕೆ ತೆರಳುತ್ತಿದ್ದ ತಾಯಿ ತನ್ನ ಜೊತೆ ಮಗನನ್ನು ಕರೆದುಕೊಂಡು ಹೋಗಿದ್ದಳು, ಆದ್ರೆ ಅಲ್ಲಿ ಯಡವಟ್ಟಾಗಿ ಬಾಲಕನ ಜೀವ ಉಳಿಯಲ್ಲಿಲ್ಲ.

ಬೆಳಗಾವಿ ಉಜ್ವಲ ನಗರದ ನಿವಾಸಿ ದಫೇದಾರ್ ಎಂಬ ಮಹಿಳೆ ಮನೆ ಕೆಲಸಕ್ಕೆ ಅಶೋಕ ನಗರಕ್ಕೆ ಹೋಗುವಾಗ ಜೊತೆಗೆ ತನ್ನ ಮಗ ಅರಮಾನ್ ನನ್ನು ಕರೆದುಕೊಂಡು ಹೋಗಿದ್ದಳು,ತಾಯಿ ಮನೆ ಕೆಲಸದಲ್ಲಿ ತೊಡಗಿರುವಾಗ ಮಗ ಟೆರಿಸ್ ಮೇಲೆ ಗಾಳಿಪಟ ಹಾರಿಸುವಾಗ ನಿಯಂತ್ರಣ ತಪ್ಪಿ ಟೆರೆಸ್ ಮೇಲಿಂದ ಬಿದ್ದು ಸಾವನ್ನೊಪ್ಪಿದ ಘಟನೆ ನಡೆದಿದೆ.

ಈ ಘಟನೆ ಅಶೋಕ ನಗರದಲ್ಲಿ ನಡೆದಿದೆ.ಅರ್ಮಾನ್ ಬಶೀರ್ ದಫೇದಾರ್( 11) ಮೃತ ಬಾಲಕನಾಗಿದ್ದಾನೆ. ಆಯತಪ್ಪಿ ಕಟ್ಟಡದ ಟೆರೀಸ್ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಅರ್ಮಾನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು,ಆದ್ರೆ ನಿನ್ನೆ ಬುಧವಾರ ರಾತ್ರಿಯೇ ಬಾಲಕ ಮೃತಪಟ್ಟಿದ್ದು ಬೆಳಗಾವಿಯ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Belagavi: A boy who had suffered severe injuries after falling from terrace succumbed to injuries on Wednesday night.
Deceased has been identified as Arman Bashir Dafedar (11) resident of Ujwal Nagar here. He had been accompanying his mother for work at Ashok Nagar. While flying kite on the terrace of the house, he lost balance and fell suffering severe injuries. Arman succumbed during treatment.
Mal-Maruti police have registered a case.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *