Breaking News
Home / Breaking News / ಅಕ್ಟೋಬರ್ 15 ಪ್ರಭಾಕರ ಕೋರೆ ಅವರಿಗೆ ಸ್ಪೇಷಲ್ ಡೇ…!!

ಅಕ್ಟೋಬರ್ 15 ಪ್ರಭಾಕರ ಕೋರೆ ಅವರಿಗೆ ಸ್ಪೇಷಲ್ ಡೇ…!!

ಇದೇ ತಿಂಗಳು ದಿ. 15 ರಂದು ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನಾಚರಣೆಯ ಅಮೃತ ಮಹೋತ್ಸವದಂಗವಾಗಿ ಪೂರ್ವಭಾವಿ ಸಭೆಯನ್ನು ಗ್ರಾಮೀಣ ಮುಖಂಡರೊಂದಿಗೆ ಇಂದು ಲಿಂಗರಾಜ ಕಾಲೇಜಿನ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.
ಮಾಜಿ ಶಾಸಕರು ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಈ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯೊಂದಿಗೆ ಹಿಂದುಳಿದ ಜನರಲ್ಲಿ ಶಿಕ್ಷಣದ ಅರಿವು ಮೂಡಿಸುತ್ತ, ಅವರ ಜೀವನದಲ್ಲಿ ಬೆಳಕಾಗಿ ಪರಿಣಮಿಸಿದ ಡಾ. ಪ್ರಭಾಕರ ಕೋರೆ ಅವರು ಈಗ 75 ಸಂವತ್ಸರಗಳನ್ನು ಪೂರೈಸುತ್ತಿದ್ದು, ಅವರ ಜನ್ಮದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲು ನಿರ್ದರಿಸಲಾಗಿದೆ. ಆದ್ದರಿಂದ ತಾವೆಲ್ಲರೂ ಈ ಸಮಾರಂಭವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಅವರು ಕೋರಿದರು.
ಈಗಾಗಲೇ ಎಲ್ಲ ಭಾಗಗಳ ಜನರು ತಮ್ಮ ಸ್ವಇಚ್ಚೆಯಿಂದ ಅಮೃತ ಮಹೋತ್ಸವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಬೆಳಗಾವಿ ನಗರ ಹಾಗೂ ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಕೇಂದ್ರದ ಪೆಟ್ರೋಲಿಯಂ ಹಾಗೂ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ, ಮಹಾರಾಷ್ಟ್ರದ ದೇವೆಂದ್ರ ಫಡ್ನವೀಸ, ರಾಜ್ಯದ ಸಚಿವರುಗಳು ಸೇರಿದಂತೆ ಹಲವರು ಆಗಮಿಸುತ್ತಿದ್ದಾರೆ. ಡಾ. ಪ್ರಭಾಕರ ಕೋರೆ ಅವರು ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ಎಲ್ಲರೂ ಆಶೀರ್ವಾದಿಸಬೇಕಾಗಿದೆ. ಸಮಾಜದ ಹಿರಿಯರು ಹಾಗೂ ಜನರು ಸೇರಿಕೊಂಡು ಅವರಿಗೆ ಇನ್ನಷ್ಟು ಶಕ್ತಿ ತುಂಬುವ ಕಾರ್ಯವನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ನಾವು ಅಮೃತಮಹೋತ್ಸವದ ಮೂಲಕ ಆ ಕರ‍್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ಹೆಸರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಡಾ. ಕೋರೆ ಅವರ ಜನ್ಮ ದಿನದಂಗವಾಗಿ ನಾವೆಲ್ಲರೂ ಕೂಡಿ ಕಾರ್ಯ ಮಾಡಿ, ಅದನ್ನು ಯಶಸ್ವಿಗೊಳಿಸೋಣ, ಎಲ್ಲರೂ ಸೇರಿಕೊಂಡು ಶೈಕ್ಷಣಿಕವಾಗಿ ಬೆಳಗಾವಿ ಜೊತೆಗೆ ಕೆಎಲ್‌ಇ ಹೆಸರು ಜಾಗತಿಕ ಮಟ್ಟದಲ್ಲಿ ಉತ್ತುಂಗಕ್ಕೇರಿದೆ. ಡಾ. ಪ್ರಭಾಕರ ಕೋರೆ ಅವರು ಕೇವಲ ಒಂದೇ ಭಾಷೆ, ಪ್ರದೇಶಕ್ಕೆ ಸೀಮಿತಗೊಂಡವರಲ್ಲ. ಎಲ್ಲರನ್ನೊಳಗೊಂಡು ಅಭಿವೃದ್ದಿ ಕರ‍್ಯ ಮಾಡುತ್ತಿದ್ದಾರೆ ಅವರಿಗೆ ಸದಾ ನಾವು ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಅನಿಲ ಬೆನಕೆ, ವಿಜಯ ಮೋರೆ, ಶಿವಾಜಿ ಸುಂಟಕರ ಅವರು ಮಾತನಾಡಿದರು. ಬುಡಾ ಅಧ್ಯಕ್ಷರಾದ ಸಂಜಯ ಬೆಳಗಾವಕರ, ರಂಜಿತ ಚವಾನ, ಮನೋಜ ಪಾವಶೆ, ದಿಗಂಬರ ಪವಾರ, ಪ್ರದೀಪ ಅಷ್ಟೇಕರ,ಶೇಖರ ಹಂಡೆ, ಕೃಷ್ಣಾ ಹುಂದರೆ, ನಾಗೇಶ ದೇಸಾಯಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *