Breaking News
Home / Breaking News / ನಿಂತ ಲಾರಿಗೆ ಗುದ್ದಿದ ಕಾರು ಓರ್ವನ ಸಾವು,ನಾಲ್ವರಿಗೆ ಗಂಭೀರ ಗಾಯ…

ನಿಂತ ಲಾರಿಗೆ ಗುದ್ದಿದ ಕಾರು ಓರ್ವನ ಸಾವು,ನಾಲ್ವರಿಗೆ ಗಂಭೀರ ಗಾಯ…

ಬೆಳಗಾವಿ: ಬೆಳಂಬೆಳಗ್ಗೆ ಯರಗಟ್ಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಕಾರಿನಲ್ಲಿದ್ದ ತಂದೆ-ಮಗ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಪಟ್ಟಣದಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ‌ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಸಾವನ್ನಪ್ಪಿದವರು.ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಭೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕದಲ್ಲಿ ಮೃತ ಲಾರಿ ಚಾಲಕ ಲಾರಿಯನ್ನು ಸೈಡ್ ಗೆ ಹಾಕಿ ಲಾರಿಯಲ್ಲಿದ್ದ ಸರಕಿಗೆ ಹಗ್ಗ ಕಟ್ಟಿ ಪ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರಿನ ನಿಯಂತ್ರಣ ‌ತಪ್ಪಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿ ಚಾಲಕನಿಗೆ ಗುದ್ದಿದೆ.

ಈ ವೇಳೆ ಅಪಘಾತ ರಭಸಕ್ಕೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಲಾರಿಗೆ ಕಾರು ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಅಮರೆಗೌಡ ಮಾಲಿಪಾಟೀಲ (58) ಗೌಡಪ್ಪಗೌಡ ಮಾಲಿಪಾಟೀಲ (25) ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ‌.ಅದರಲ್ಲಿ ವೀರಭದ್ರಗೌಡ ಡಬಿ (32), ಹನುಮಂತ ಬೆಟಗೇರಿ (23) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ‌.ಅವರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳು ರಾಯಚೂರ ಜಿಲ್ಲೆಯ ಸಿಂಧನೂರು ಪಟ್ಟಣದವರು ಎಂಬ ಮಾಹಿತಿ ದೊರೆತಿದೆ. ಮುರಗೋಡ ಪೊಲೀಸ್ ಠಾಣೆ ‌ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *