ಬೆಳಗಾವಿ-ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆ, ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ 330 ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬೆಳಗಾವಿ ವಿಭಾಗದ ಡಿಟಿಒ ಕೆ.ಕೆ. ಲಮಾಣಿ ಅವರು ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದು,ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ ಬಸ್‌ಗಳನ್ನು ಬಾರ್ಡರ್‌ನಲ್ಲಿ ನಿಲುಗಡೆ ಮಾಡಲಾಗಿದೆ. ಬಸ್ ಸೇವೆ ಸ್ಥಗಿತದಿಂದಬೆಳಗಾವಿ ವಿಭಾಗಕ್ಕೆ ನಿತ್ಯ 10 ಲಕ್ಷ, ಚಿಕ್ಕೋಡಿ ವಿಭಾಗಕ್ಕೆ 20 ಲಕ್ಷ ನಿತ್ಯ ನಷ್ಟ ವಾಗುತ್ತಿದೆ ಎಂದು ಲಮಾಣಿ ಹೇಳಿದ್ದಾರೆ.
ಮದುವೆ ಸೀಜನ್ ಆದ ಕಾರಣಕ್ಕೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ,ಚಿಕ್ಕೋಡಿ ವಿಭಾಗದಿಂದ 250 ಬಸ್ ಹಾಗೂ ಬೆಳಗಾವಿ ವಿಭಾಗದ 80 ಸೇರಿ 330 ಬಸ್ ಸೇವೆ ಸ್ಥಗಿತಗೊಂಡಿದೆ.ಕ್ಲಿಯರನ್ಸ್ ಸಿಗುವ ಭರವಸೆ ಇದ್ದು, ಅನುಮತಿ ಸಿಕ್ಕನಂತರ ಮತ್ತೇ ಉಭಯ ರಾಜ್ಯಗಳ ನಡುವೆ ಸಂಚಾರ ಆರಂಭ ವಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಹಲವು ಬಸ್ ನಿಲ್ದಾಣಗಲ್ಲಿ ಕರ್ನಾಟಕ ಬಸ್ ನಿಲುಗಡೆ ಮಾಡಲಾಗಿದೆ.ಬೆಳಗಾವಿ ಜಿಲ್ಲೆಯ ಹಲವಾರು ಬಸ್ ನಿಲ್ಧಾಣಗಳಲ್ಲಿ ಮಹಾರಾಷ್ಟ್ರದ ಬಸ್ ಗಳು ನಿಂತಿವೆ.