Breaking News
Home / Breaking News / ಮರಾಠಾ ಸಮುದಾಯದ ಸಂಘಟನೆಗಾಗಿ ಹೊಸ ವರಸೆ…!!

ಮರಾಠಾ ಸಮುದಾಯದ ಸಂಘಟನೆಗಾಗಿ ಹೊಸ ವರಸೆ…!!

ಬೆಳಗಾವಿ- ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಮಾಜದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಗಮನಿಸಿರುವ ಇತರ ಸಮಾಜಗಳ ನಾಯಕರು ಪಂಚಮಸಾಲಿ ಸಮಾಜದ ಹೋರಾಟದಿಂದ ಪ್ರೇರಣೆ ಪಡೆದು ತಮ್ಮ ಸಮಾಜಗಳಿಗೂ ನ್ಯಾಯ ದೊರಕಿಸಿಕೊಡಲು ಮುಂದಾಗಿದ್ದಾರೆ‌.

ಪಂಚಮಸಾಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಬೃಹತ್‌ ಸಮಾವೇಶಗಳು ನಡೆಯುತ್ತಿವೆ.ಈ ಸಮಾವೇಶಗಳಲ್ಲಿ ಆಯಾ ಕ್ಷೇತ್ರದ ಪಂಚಮಸಾಲಿ ಸಮಾಜದ ನಾಯಕರನ್ನು ಪ್ರಮೋಟ್ ಮಾಡಲಾಗುತ್ತಿದೆ. ಪಂಚಮಸಾಲಿ ಸಮಾಜದ ಹೋರಾಟ,ಸಂಘಟನೆ,ಯನ್ನು ಗಮನಿಸಿರುವ ಮರಾಠಾ ಸಮಾಜದ ನಾಯಕರು ಈಗ ಮರಾಠಾ ಸಮಾಜದ ಸ್ವಾಮಿಗಳನ್ನು ಭೇಟಿಯಾಗಿ,ಮರಾಠಾ ಸಮಾಜದ ಮೀಸಲಾತಿಗಾಗಿ ಹೋರಾಟ ನಡೆಯಬೇಕು,ಮರಾಠಾ ಸಮುದಾಯದ ಮತದಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಮರಾಠಾ ಐಕ್ಯತಾ ಸಮಾವೇಶಗಳನ್ನು ನಡೆಸುವಂತೆ ಮರಾಠಾ ಸಮುದಾಯದ ನಾಯಕರು ಮರಾಠಾ ಸಮಾಜದ ಶ್ರೀಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಳಗಾವಿಯ ಬಿಜೆಪಿ ನಾಯಕರಾದ, ಕಿರಣ ಜಾಧವ ಮತ್ತು ನಾಗೇಶ್ ಮನ್ನೋಳಕರ ಅವರು ಬೆಂಗಳೂರಿನ ಗವಿಪುರಂ ದಲ್ಲಿರುವ ಗೋಸಾವಿ ಮಠದ, ಶ್ರೀ ಶ್ರೀ, ಮಂಜುನಾಥ ಸ್ವಾಮಿಜಿಗಳನ್ನು ಭೇಟಿಯಾಗಿ,ಶ್ರೀಗಳ ಜೊತೆಗೆ ಮರಾಠಾ ಸಮಾಜದ ಮೆಲ್ಕಾಣಿಸಿದ ಎಲ್ಲ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹಲವಾರು ಕ್ಷೇತ್ರಗಳಲ್ಲಿ ಮರಾಠಾ ಸಮಾಜದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ‌.ಕೆಲವೊಂದು ಕ್ಷೇತ್ರಗಳಲ್ಲಿ ಮರಾಠಾ ಸಮಾಜದ ಮತದಾರರು ನಿರ್ಣಾಯಕರಾಗಿದ್ದು ಅಂತಹ ಕ್ಷೇತ್ರಗಳಲ್ಲಿ ಮರಾಠಾ ಸಮಾಜದ ಬಂಧುಗಳಲ್ಲಿ ಐಕ್ಯತೆ ಮೂಡಿಸುಸಲು,ಮರಾಠಾ ಸಮುದಾಯದ ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರೀಗಳು ಸಮಾವೇಶಗಳನ್ನು ನಡೆಸಿದರೆ.ಮರಾಠಾ ಸಮಾಜದ ನಾಯಕರು ಸಮಾವೇಶಗಳಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಾರೆ ಎಂದು ಕಿರಣ ಜಾಧವ ಮತ್ತು ನಾಗೇಶ್ ಮನ್ನೋಳಕರ ಶ್ರೀಗಳಿಗೆ ಭರವಸೆ ನೀಡಿದ್ದೇವೆ. ಸಮಾಜದ ಮೀಸಲಾತಿ ಮತ್ತು ಸಮಾಜದ ಸಂಘಟನೆಗಾಗಿ ಶ್ರೀಗಳು ಯಾವುದೇ ಕಾರ್ಯಕ್ರಮ ನಡೆಸಿದರೂ ಅದಕ್ಕೆ ಎಲ್ಲ ರೀತಿಯ ಸಹಾಯ ಮಾಡುವದಾಗಿ ಅವರು ಶ್ರೀಗಳ ಎದುರು ಹೇಳಿಕೊಂಡಿದ್ದಾರೆ.

ಮರಾಠಾ ಸಮಾಜದ ಇಬ್ಬರು ನಾಯಕರು ಮರಾಠಾ ಸಮುದಾಯದ ಶ್ರೀಗಳನ್ನು ಭೇಟಿಯಾಗಿ ಶ್ರೀಗಳಿಂದ ಆಶೀರ್ವಾದ ಪಡೆದಿದ್ದಾರೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *