ಬೆಳಗಾವಿ-ಅಧಿವೇಶನಕ್ಕೂ ಮುನ್ನವೇ ಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ ಮರಾಠಿ ಭಾಷಿಕ ಪುಂಡರು,ಅಧಿವೇಶನಕ್ಕೆ ಬರುತ್ತಿದ್ದ ವಾಹನ ಮೇಲೆ ಕಲ್ಲು ತೂರಿ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆ.
ನಿನ್ನೆ ರಾತ್ರಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರ ನೇತ್ರತ್ವದಲ್ಲಿ ಕರ್ನಾಟಕ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಂಧಾನ ಸಭೆ ನಡೆದ ಬೆನ್ನಲ್ಲಿಯೇ,ನಿನ್ನೆ ರಾತ್ರಿ ಬೆಳಗಾವಿ ಹೊರವಲಯದ ಸುವರ್ಣಸೌಧದ ಎದುರೇ ಈ ಘಟನೆ ನಡೆದಿದೆ ಬೆಂಗಳೂರಿನಿಂದ ಬೆಳಗಾವಿಗೆ ಚಳಿಗಾಲ ಅಧಿವೇಶನಕ್ಕೆ ಬರುತ್ತಿದ್ದ ವಾಹನ.
ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸೇರಿದ ವಾಹನಕ್ಕೆ ಕಲ್ಲು ತೋರಿ ವಿಕೃತಿ ಮೆರೆದಿರುವ ಮರಾಠಿ ಭಾಷಿಕ ಪುಂಡರು,ಕರ್ನಾಟಕ ಸರ್ಕಾರ ಎಂದು ಬರೆದ ವಾಹನ ಅಡ್ಡಗಟ್ಟಿ ಗೂಂಡಾವರ್ತನೆ ತೋರಿಸಿದ್ದಾರೆ.
ಬುಲೆರೋ ವಾಹನದ ಮೇಲೆ ಕಲ್ಲು ತೂರಿ ಬಳಿಕ ಚಾಲಕನ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ.
ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ವಾಹನ ಚಾಲಕನ್ ಚೇತನ್ ಎಂಬುವವರಿಗೂ ಜೀವ ಬೆದರಿಕೆ ಹಾಕಿವಾಹನದ ಜೊತೆಗೆ ಚಾಲಕನ ಮೇಲೂ ಹಲ್ಲೆ ಮಾಡಲು ಮುಂದಾದ ಪುಂಡರು ಬೆಳಗಾವಿಯ ಸುವರ್ಣವಿಧಾನಸೌಧದ ಎದುರೇ ಪುಂಡಾಟಿಕೆ ನಡೆಸಿದ್ದಾರೆ.
ತಕ್ಷಣವೇ ವಾಹನ ಚಲಾಯಿಸಿಕೊಂಡು ಪುಂಡರಿಂದ ತಪ್ಪಿಸಿಕೊಂಡು ಬಂದ ಚಾಲಕ,ಹಿರೇಬಾಗೇವಾಡಿ ಪೊಲೀಸರ ಗಮನಕ್ಕೆ ತಂದ್ರೂ ಪ್ರಕರಣ ಮುಚ್ಚಿ ಹಾಕುವ ಯತ್ನಿಸಲಾಗಿದೆ.ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಘಟನೆ ನಡೆದು ಹನ್ನೆರಡು ಗಂಟೆಯಾದ್ರೂ ಪ್ರಕರಣ ದಾಖಲಾಗಿಲ್ಲ.
ಹಿರೇಬಾಗೇವಾಡಿ ಪೊಲೀಸರ ಗಮನಕ್ಕೆ ತಂದ್ರೂ ದೂರು ಪಡೆದುಕೊಳ್ಳದ ಪೊಲೀಸರು ಮರಾಠಿ ಭಾಷಿಕ ಪುಂಡರ ರಕ್ಷಣೆಗೆ ಮುಂದಾಗಿದ್ದಾರೆ.
ವಾಹನ ಚಾಲಕನ ಚಿತ್ರ…
ವಾಹನದ ಗಾಜು ಬದಲಿಸುವಂತೆ ಹೇಳಿರುವ ಅಧಿಕಾರಿಗಳು.
ದೂರದ ಊರಿಂದ ಬಂದ ಸಿಬ್ಬಂದಿಗಳಿಗೆ ಅಧಿವೇಶನದ ಆರಂಭದಲ್ಲೇ ಶುರುವಾಯಿತು ಭಯ.
ಸೂಕ್ತ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಸಿಬ್ಬಂದಿಗಳ ಮನವಿ ಮಾಡಿದ್ದಾರೆ.