Breaking News
Home / Breaking News / ಬೆಳಗಾವಿ ಗಡಿವಿವಾದ ಅಮೀತ್ ಶಾ ಹೇಳಿದ್ದೇನು ಗೊತ್ತಾ..??

ಬೆಳಗಾವಿ ಗಡಿವಿವಾದ ಅಮೀತ್ ಶಾ ಹೇಳಿದ್ದೇನು ಗೊತ್ತಾ..??

ಗಡಿವಿವಾದ ಕುರಿತು ದಿಲ್ಲಿಯಲ್ಲಿ
ಗೃಹಸಚಿವ ಆಮಿತ ಶಹಾ ಸಮ್ಮುಖದಲ್ಲಿ
ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ
ಮುಖ್ಯಮಂತ್ರಿಗಳಾದ ಬಸವರಾಜ
ಬೊಮ್ಮಾಯಿ ಮತ್ತು ಏಕನಾಥ ಶಿಂಧೆ
ಅವರ ಮಧ್ಯೆ ನಡೆದ ಮಾತುಕತೆಯು
ಇಂದು ಸಂಜೆ 7 ರಿಂದ 8 ಗಂಟೆಯವರೆಗೆ
ನಡೆಯಿತು.
ಸಭೆಯ ನಿರ್ಣಯಗಳನ್ನು
ಶಹಾ ಅವರೇ ನಂತರ ಮಾಧ್ಯಮಗಳಿಗೆ
ತಿಳಿಸಿದರು.ಮಹತ್ವದ ಅಂಶಗಳು:
1) ಸರ್ವೋನ್ನತ ನ್ಯಾಯಾಲಯದ
ಮುಂದಿರುವ ಗಡಿವಿವಾದ ಪ್ರಕರಣದ
ತೀರ್ಪು ಬರುವವರೆಗೂ ಉಭಯ
ರಾಜ್ಯಗಳು ಪರಸ್ಪರರ ಪ್ರದೇಶಗಳನ್ನು
ಕೇಳುವಂತಿಲ್ಲ.
2)ಉಭಯ ರಾಜ್ಯಗಳ ತಲಾ ಮೂವರು
ಮಂತ್ರಿಗಳನ್ನೊಳಗೊಂಡ ಒಟ್ಟು ಆರು
ಸಚಿವರ ಸಮಿತಿ ರಚಿಸಿ ಸಮನ್ವಯ
ಸಾಧಿಸುವದು.
3)ಉಭಯ ರಾಜ್ಯಗಳ ಗಡಿಗಳಲ್ಲಿ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು
ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ
ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು
ರಚಿಸುವದು.
4)ಗಡಿವಿವಾದವನ್ನು ಸಂವಿಧಾನದ
ಪ್ರಕಾರವೇ ಪರಿಹರಿಸಬೇಕೇ ಹೊರತು
ಬೀದಿಗಳಲ್ಲಿ ಅಲ್ಲ ಎಂಬುದನ್ನು ಸಭೆಯಲ್ಲಿ
ಒಪ್ಪಿಕೊಳ್ಳಲಾಯಿತು.
ಸೌಹಾರ್ದಯುತ ವಾತಾವರಣದಲ್ಲಿ ನಡೆದ ಇಂದಿನ ಮಾತುಕತೆಯಲ್ಲಿ
ಉಭಯ ರಾಜ್ಯಗಳ ಮುಖ್ಯಮಂತ್ರಿಗಳು
ಸಕಾರಾತ್ಮಕವಾಗಿ ಸ್ಪಂದಿಸಿದರೆಂದು
ಆಮಿತ್ ಶಹಾ ಅವರು ಮಾಧ್ಯಮಗಳಿಗೆ
ಸಭೆಯ ನಂತರ ವಿವರಿಸಿದರು.

 

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *