ಬೆಳಗಾವಿ-ಇತಿಹಾಸದಲ್ಲೇ ಮೊದಲ ಬಾರಿಗೆ ಅಗ್ನಿವೀರವಾಯುವಿನಲ್ಲಿ ಯುವತಿಯರ ಆಯ್ಕೆಯಾಗಿದೆ ಈ ಆಯ್ಕೆ ಪ್ರಕ್ರಿಯೆ ನಡೆದೊದ್ದು ಕ್ರಾಂತಿಯ ನೆಲ,ಐತಿಹಾಸಿಕ ಬೆಳಗಾವಿಲ್ಲಿ ಅನ್ನೋದು ಹೆಮ್ಮೆಯ ಸಂಗತಿಯಾಗಿದೆ.
ಇಂದು ಮೊದಲ ಬ್ಯಾಚ್ ನ ನಿರ್ಗಮನ ಪಥಸಂಚಲನ ಬೆಳಗಾವಿಯ ಸಾಂಬ್ರಾದಲ್ಲಿ ನಡೆಯಿತು.ಮೊದಲ ಬಾರಿ ವಾಯುಸೇನೆಯಲ್ಲಿ ಅಗ್ನಿವೀರವಾಯು ಗೆ ಆಯ್ಕೆಯಾದ ಯುವತಿಯರು.ಮೊದಲ ಬ್ಯಾಚ್ ನಲ್ಲಿ 153 ಯುವತಿಯರ ಆಯ್ಕೆಯಾಗಿದ್ದಾರೆ.ಬೆಳಗಾವಿಯ ಏರ್ಮನ್ ಟ್ರೈನಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದ ಯುವತಿಯರು ಸೇನಾನಿಗಳಾಗಿದ್ದು ವಿಶೇಚ
22 ವಾರಗಳ ಕಾಲ ಯುವಕರ ಜತೆಗೆ ಕಠಿಣ ತರಬೇತಿ ಪಡೆದ ಯುವತಿಯರುಇಂದು ನಿರ್ಗಮನ ಪಥಸಂಚಲನದ ಮೂಲಕ ವಾಯುಸೇನೆಗೆ ಸೇರ್ಪಡೆಯಾಅಗಿದ್ದಾರೆ.
2280 ಯುವಕರು, 153ಜನ ಯುವತಿಯರ ಆಯ್ಕೆಯಾಗಿತ್ತು.ಆರು ತಿಂಗಳ ತರಬೇತಿ ಬಳಿಕ ಎಲ್ಲರಿಗೂ ಕರ್ತವ್ಯಕ್ಕೆ ಸೇರ್ಪಡೆ ಮಾಡಲಾಗುತ್ತದೆ.
ಆಕರ್ಷಕ ಪಥಸಂಚಲನದ ಮೂಲಕ ಗಮನ ಸೆಳೆದ ಪ್ರಶಿಕ್ಷಣಾರ್ಥಿಗಳು.ಏರ್ ಮಾರ್ಷಲ್ ರಾಧಾಕೃಷ್ಣನ್ ರದ್ದೀಶ್ ಅವರಿಂದ ಗೌರವ ಸ್ವೀಕಾರ ಮಾಡಿದ್ರು.
ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ಬಹುಮಾನ ವಿತರಣೆ. ಮಕ್ಕಳು ಯಶಸ್ವಿ ತರಬೇತಿ ಮುಗಿಸಿ ಹೊರ ಬರ್ತಿದ್ದಂತೆ ತಬ್ಬಿಕೊಂಡು ಕಣ್ಣೀರಿಟ್ಟ ಕುಟುಂಬಸ್ಥರು.
ತಂದೆ ತಾಯಿ ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ ಪ್ರಶಿಕ್ಷಣಾರ್ಥಿಗಳು.ಈ ಎಲ್ಲ ದೃಶ್ಯಗಳು ಎಲ್ಲರ ಗಮನ ಸೆಳೆದವು.