Home / Breaking News / ಅನಾರೋಗ್ಯದ ನಡುವೆಯೇ.. ಪ್ರಧಾನಿ ಕೇರ್ ಗೆ 1ಲಕ್ಷ ರೂ. ದೇಣಿಗೆ ನೀಡಿದ ಬೆಳಗಾವಿಯ ಅಜ್ಜಿ

ಅನಾರೋಗ್ಯದ ನಡುವೆಯೇ.. ಪ್ರಧಾನಿ ಕೇರ್ ಗೆ 1ಲಕ್ಷ ರೂ. ದೇಣಿಗೆ ನೀಡಿದ ಬೆಳಗಾವಿಯ ಅಜ್ಜಿ

ಬೆಳಗಾವಿ- ಅನಾರೋಗ್ಯವಿದೆ. ಮೇಲೆದ್ದು ನಡೆದಾಡಲು ಆಗದ ಸ್ಥಿತಿ ಅವಳದ್ದು, ಇದರ ಮದ್ಯದಲ್ಲಿಯೇ 85ರ ವಯಸ್ಸಿನ ಅಜ್ಜಿಗೆ ಈಗ ದೇಶದ ಜನರ ಆರೋಗ್ಯದ ಚಿಂತೆ.ಇದೇ ಕಾರಣಕ್ಕಾಗಿ ಜನರ ಆರೋಗ್ಯಕ್ಕಾಗಿ ತಾನು ಕೂಡಿಟ್ಟ 1ಲಕ್ಷ ರೂ. ಹಣವನ್ನ ಪ್ರಧಾನಮಂತ್ರಿ ಕೇರ್ ಗೆ ದೇಣಿಗೆ ನೀಡುವ ಮೂಲಕ ಎಲ್ಲ ಗಮನ ಸೆಳೆದಿದ್ದಾಳೆ.

ಇಷ್ಟಕ್ಕೂ ಈ ಮಹಾಉಪಕಾರಿ ಅಜ್ಜಿಯ ಹೆಸರು ನಳನಿ ಕೆಂಭಾವಿ. ಬೆಳಗಾವಿ ನಗರದ ಟಿಳಕವಾಡಿ ಬಡಾವಣೆ ನಿವಾಸಿ.ಇಳಿ ವಯಸ್ಸಿನಲ್ಲೂ ಅಜ್ಜಿಯ ದೇಶ ಪ್ರೇಮ ಒಂಚೂರು ಮರೆಯಾಗಿಲ್ಲ. ಕೊರೊನಾದಿಂದ ದೇಶದಲ್ಲಿ ನೂರಾರು ಜನಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಡೀ ದೇಶವೇ ಸಂಕಷ್ಟದಲ್ಲಿದೆ. ಇಂತಹ ಸಂದರ್ಭಗಳಲ್ಲಿ ತನ್ನ ಅನಾರೋಗ್ಯವಿದ್ರೂ ಅನಾರೋಗ್ಯದಿಂದ ಬಳಲುತ್ತಿರುವ ವೈದ್ಯಕೀಯ ಚಿಕಿತ್ಸೆಗಾಗಿ ತಾನು ಕೂಡಿಟ್ಟ 1ಲಕ್ಷ ರೂ.ಚೆಕ್ ನ್ನು ಇವತ್ತು ಪ್ರಧಾನಿ ಕೇರ್ ಗೆ ನೀಡಿದ್ದಾಳೆ. ತಾನು ಎದ್ದೇಳಲು ಸಾಧ್ಯವಾಗದ ಹಿನ್ನೆಲೆ ಸಮಾಜ ಸೇವಕ ವಿಜಯ್ ಮೋರೆ ಮೂಲಕ ಜಿಲ್ಲಾಧಿಕಾರಿಗಳಿಗೆ ತಲುಪಿಸುವ ಕೆಲಸ ಮಾಡಿದ್ದಾಳೆ. ಅಜ್ಜಿ ನೀಡಿದ ಹಣವನ್ನು ಇವತ್ತು ವಿಜಯ್ ಮೋರೆ ಜಿಲ್ಲಾಧಿಕಾರಿಗಳಿಗೆ ನೀಡಿದರು.

ಅಜ್ಜಿ ನೀಡಿದ ಚೆಕ್ ನೀಡುತ್ತಿದ್ದಂತೆ ಆಶ್ಚರ್ಯ ಚಿಕಿತರಾದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ , ಅಜ್ಜಿಗೆ ಜಿಲ್ಲಾಡಳಿತದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಅಜ್ಜಿಗೆ ಆಯಸ್ಸು, ಆರೋಗ್ಯ ಕರುಣಿಸಲಿ ಅಂತಾ ಹಾರೈಸಿದರು.

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *