Breaking News

ಬೆಳಗಾವಿಯಿಂದ ಅಜ್ಮೇರ್ ಗೆ ಡೈರೆಕ್ಟ್ ವಿಮಾನ ಹಾರಾಟ….

ಬೆಳಗಾವಿ- ನವ್ಹೆಂಬರ್ 10 ರಿಂದ ಸೂರತ್ ಬೆಳಗಾವಿ ವಿಮಾನ ಹಾರಾಟ ಶುರುವಾಗಲಿದೆ

ಬೆಳಗಾವಿಯಿಂದ ಸೂರತ್- ಸೂರತ್ ನಿಂದ ಕಿಶನ್ ಗಡ ( ಅಜ್ಮೇರ ಹತ್ತಿರ) ವಿಮಾನ ಸೇವೆ ಒದಗಿಸಲು ಸ್ಟಾರ್ ಏರ್ DGCA ಯಿಂದ ಅನುಮತಿ ಪಡೆದುಕೊಂಡಿದೆ.

ನವ್ಹೆಂಬರ್ 10 ರಿಂದ ಆರಂಭವಾಗುವ ಈ ವಿಮಾನ ಸೇವೆ ವಾರದಲ್ಲಿ ನಾಲ್ಕು ದಿನ ಇರುತ್ತದೆ.ಸೋಮವಾರ,ಬುಧವಾರ,ಶುಕ್ರವಾರ,ಮತ್ತು ಭಾನುವಾರ ಬೆಳಗಾವಿ- ಸೂರತ್- ಕಿಶನ್ ಗಡ ವರೆಗೆ ವಿಮಾನ ಸೇವೆ ಲಭ್ಯವಿರುತ್ತದೆ.

ಮಧ್ಯಾಹ್ನ 12 ಗಂಟೆಗೆ ಬೆಳಗಾವಿಯಿಂದ ಸೂರತ್ ಗೆ ಟೇಕಪ್ ಆಗುವ ಸ್ಟಾರ್ ಏರ್ ವಿಮಾನ,1-20 ಕ್ಕೇ ಸೂರತ್ ತಲುಪುತ್ತದೆ,1-50 ಕ್ಕೆ ಸೂರತ್ ನಿಂದ ಟೇಕಪ್ ಆಗುವ ಇದೇ ವಿಮಾನ 3-10 ಕ್ಕೆ ಅಜ್ಮೇರ್ ಪಕ್ಕದಲ್ಲಿರುವ ಕಿಶನ್ ಗಡ ತಲುಪುತ್ತದೆ.

3-40 ಕ್ಕೆ ಮರಳಿ ಟೇಕಪ್ ಆಗಲಿರುವ ಈ ವಿಮಾನ ಸಂಜೆ 5-00 ಗಂಟೆಗೆ ಸೂರತ್ ನಲ್ಲಿ ಲ್ಯಾಂಡ್ ಆಗಿ 5-30 ಕ್ಕೆ ಪುನಹ ಸೂರತ್ ನಿಂದ ನಿರ್ಗಮಿಸಿ ಸಂಜೆ 6-50 ಕ್ಕೆ ಬೆಳಗಾವಿ ತಲುಪುತ್ತದೆ

ಬೆಳಗಾವಿಯಿಂದ ಅಜ್ಮೇರ್ ಖ್ವಾಜಾ ಗರೀಬನ್ ನವಾಜ್ ದರ್ಗಾಕ್ಕೆ ಹೋಗುವ ಭಕ್ತಾದಿಗಳಿಗೆ ಈ ವಿಮಾನ ಸೇವೆ ಅತ್ಯಂತ ಅನಕೂಲ ವಾಗಲಿದೆ.

ಬೆಳಗಾವಿ- ಅಹ್ಮದಾಬಾದ
ಬೆಳಗಾವಿ- ಬೆಂಗಳೂರು
ಬೆಳಗಾವಿ- ಇಂದೋರ್
ಬೆಳಗಾವಿ- ಮುಂಬೈಗೆ ಏರ್ ಸರ್ವಿಸ್ ನೀಡುತ್ತಿರುವ ಸ್ಟಾರ್ ಏರ್ ಈಗ ಬೆಳಗಾವಿ- ಸೂರತ್- ಕಿಶನ್ ಗಡ ಕನೆಕ್ಟ ಮಾಡುವ ಹೊಸ ಫ್ಲಾಯಿಟ್ ಆರಂಭಿಸಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *