ಬೆಳಗಾವಿ- ಬೆಳಗಾವಿಯ ಕಲಕಂಬಾ ನಿವಾಸಿ.ಅಲೆಮಾರಿ ಜನಾಂಗದಲ್ಲಿ ಜನಿಸಿದ ತನುಜಾ ಮನೆಯಲ್ಲಿ ಕಿತ್ತುತಿನ್ನುವ ಬಡತನ. ತಂದೆ-ತಾಯಿಗಳು ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.6ಜನ ಮಕ್ಕಳಲ್ಲಿ ಇವಳು 2ನೇಯವಳು.ಹೀಗಿರುವಾಗ ಮನೆಯಲ್ಲಿ ಇವಳಿಗೆ ಓದು ಕಷ್ಟವಾಗುತ್ತದೆ ಅಂತಾ 2011ರಲ್ಲಿ ನಗರದ ವಡಗಾಂವನಲ್ಲಿರುವ ಡೊನ್ ಬೋಸ್ಕೊ ಚಿನ್ನರ ತಂಗುಧಾಮಕ್ಕೆ ಸೇರಿಸಿದ್ರು.ಆದ್ರೆ ಒಂದು ವರ್ಷ ಓದಿದ ನಂತ್ರ ತನ್ನ ಬಡಾವಣೆಯಲ್ಲಿನ ಶಾಲೆಗೆ ದಾಖಲಾದ್ಲು. ಹೀಗಿರುವಾಗಲೇ ಅಲೆಮಾರಿ ಜನಾಂಗದಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಹಜವಾಗಿಯೇ 12ನೇ ವಯಸ್ಸಿಗೆ ಬಾಲಕಿಗೆ ಮದುವೆ ಮಾಡಲು ಮನೆಯಲ್ಲಿ ನಿಶ್ಚಿಯಿಸಿದ್ದರು. ಹುಡುಗನ್ನೊಬ್ಬನ ಜೊತೆಗೆ ನಿಶ್ಚಿತಾರ್ಥವನ್ನೂ ಮಾಡಿದ್ದರು.ಮೂರು ವರ್ಷಗಳ ನಂತ್ರ ಮದುವೆ ಮಾಡಿಕೊಳ್ಳುವುದಾಗಿಯೂ ನಿಶ್ಚಿಯವಾಗಿತ್ತು. ಒಲ್ಲದ ಮನಸ್ಸಿನಿಂದಲೇ ನಿಶ್ಚಿತಾರ್ಥ ಮಾಡಿಕೊಂಡ ಬಾಲಕಿ ನೇರವಾಗಿ ಮತ್ತೆ ಮೊದಲು ಓದಿದ್ದ ಶಾಲೆಗೆ ಬಂದು ಸೇರಿಕೊಂಡ್ಲು. ಓದು ಮುಂದುವರೆಸಿದ್ಲು.ಮನೆಯಲ್ಲಿ ನಡೆದ ನಿಶ್ಚಿತಾರ್ಥ ಹಾಗೂ ತಾನು ಮುಂದೆ ಓದುವ ಕುರಿತು ಶಾಲೆಯ ಮುಖ್ಯಸ್ಥರ ಬಳಿ ಹೇಳಿಕೊಂಡಿದ್ದಳು.ಇದರಿಂದಾಗಿ ಸಿಸ್ಟರ್ ಅನೀತಾ ಬಾಲಕಿಯ ಕೌನ್ಸಲಿಂಗ್ ನಡೆಸಿದ್ರು.
ಹೀಗಿರುವಾಗ ಬಾಲಕಿಗೆ ಬಾಲ್ಯವಿವಾಹದ ಕುರಿತು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಕುರಿತ ಜಾಗೃತಿ ಮೂಡಿಸುವ ನಾಟಕದಲ್ಲಿ ಅಭಿನೇಯಿಸುವ ಅವಕಾಶ ಒದಗಿ ಬಂದಿತ್ತು. ಆ ನಾಟಕದಲ್ಲಿ ಅವಳಿಗೆ ಬಾಲ್ಯವಿವಾಹಕ್ಕೊಳಗಾಗುವ ಬಾಲಕಿಯರನ್ನ ರಕ್ಷಣೆ ಮಾಡುವ ಅಧಿಕಾರಿ ಪಾತ್ರ. ಹೀಗಾಗಿ ನಾಟಕದಲ್ಲಿ ಅಭಿನೇಯಿಸಿದ ನಂತ್ರ ಬಾಲ್ಯವಿವಾಹದ ಬಗ್ಗೆ ಬಾಲಕಿಗೆ ತಿಳುವಳಿಕೆ ಬಂತು. ಆಗಲೇ ಎರಡು ವರ್ಷ ಗತಿಸಿತ್ತು. ಇನ್ನೇನು ಮದುವೆ ಮಾಡಬೇಕೆಂದು ಮನೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿರುವಾಗ ಬಾಲಕಿ ತನ್ನ ತಂದೆ-ತಾಯಿಗೆ ತಾನು ಈಗಲೇ ಮದುವೆ ಮಾಡಿಕೊಳ್ಳುವುದಿಲ್ಲ. ನಾನು ಓದಬೇಕು ಅಂತಾ ಹೇಳಿದ್ದಾಳೆ. ಅಷ್ಟೇ ಅಲ್ಲ ಬಾಲ್ಯವಿವಾಹದಿಂದ ಆಗುವ ಅನಾಹುತಗಳು, ಇದನ್ನ ಮಾಡಿದ್ರೆ ಇರುವ ಶಿಕ್ಷೆಗಳ ಕುರಿತು ಪೋಷಕರಿಗೆ ತಿಳುವಳಿಕೆ ನೀಡಿದ್ದಾಳೆ.
ಬಾಲಕಿ ಹೇಳಿದ್ದನ್ನ ಕೇಳಿಸಿಕೊಂಡ ಪೋಷಕರು ಆಯ್ತು ಅಂತಾ ಹೇಳಿದ್ದಾರೆ. ಸದ್ಯ ನಿಶ್ಚಿತಾರ್ಥವಾಗಿರುವುದರಿಂದ ಮದುವೆ ಮುರಿದುಕೊಳ್ಳುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ. ಆಗಲೇ ಪೊಷಕರು ತಮ್ಮ ಸಮಾಜದ ಮುಖಂಡರನ್ನ ಕರೆದು ಮಗಳು ಮದುವೆಗೆ ನಿರಾಕರಿಸುತ್ತಿದ್ದಾಳೆ ಅಂತಾ ತಿಳಿಸಿದ್ದಾರೆ. ಆದ್ರೆ ಸಮಾಜದ ಮುಖಂಡರು ಇದೇನು ಹುಡುಗಾಟಿಕೆ ಅಂತಾ ಗದರಿಸಿದ್ದಾರೆ. ಆಗ ಈ ಬಾಲಕಿಯೇ ಸಭೆಯಲ್ಲಿ ಎಲ್ಲರೆದುರು ತಾವು ಬಾಲ್ಯವಿವಾಹ ಮಾಡಿಕೊಳ್ಳುವುದಿಲ್ಲ ಅಂತಾ ದಿಟ್ಟತನದಿಂದಲೇ ಉತ್ತರ ಕೊಟ್ಟಿದ್ದಾಳೆ.ಇದನ್ನ ಕಂಡ ಮುಖಂಡರೇ ಶಾಕ್ ಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಬಾಲಕಿಯ ಆಸೆಯಂತೆ ಇಡೀ ಮದುವೆಯನ್ನ ಮುರಿದುಕೊಂಡಿದ್ದಾರೆ. ಸದ್ಯ ಮಗಳ ಈ ದೈರ್ಯ, ತಿಳುವಳಿಕೆಯಿಂದ ಬಡ ಪೋಷಕರಿಗೆ ಖುಷಿಯಾಗಿದೆ. ಮಗಳು ನಮ್ಮ ಕಣ್ಚು ತೆರೆಸಿದ್ದಾಳೆ ಅಂತಾ ಹೆಮ್ಮಪಟ್ಟುಕೊಳ್ಳುತ್ತಿದ್ದಾರೆ