Breaking News
Home / ಬೆಳಗಾವಿ ನಗರ / ಪಾಠಶಾಲೆಯ ಮೂಲಕ ಧರ್ಮಜಾಗೃತಿ ನಡೆಯಲಿ – ಸಿದ್ದಸೇನ ಶ್ರೀ.

ಪಾಠಶಾಲೆಯ ಮೂಲಕ ಧರ್ಮಜಾಗೃತಿ ನಡೆಯಲಿ – ಸಿದ್ದಸೇನ ಶ್ರೀ.

ಬೆಳಗಾವಿ.ಅ.10: ಇಂದು ಎಲ್ಲೆಡೆ ಧರ್ಮದ ಅಭಾವ ಎದ್ದು ಕಾಣುತ್ತಿದ್ದು, ಇಂದಿನ ಮಕ್ಕಳಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆವಿದೆ. ಹಾಗಾಗಿ ಪ್ರತಿಯೊಂದು ಬಸದಿಯಲ್ಲಿ ಪಾಠಶಾಲೆಗಳನ್ನು ನಡೆಸುವ ಮೂಲಕ ಧರ್ಮಜಾಗೃತಿಯ ಅಭಿಯಾನವನ್ನು ನಡೆಸಬೇಕಾಗಿದೆ ಎಂದು ಜೈನ ಮುನಿ 108 ಚಾಲಾಚಾರ್ಯ ಶ್ರೀ. ಸಿದ್ದಸೇನ ಮುನಿಗಳು ಹೇಳಿದರು.
ಅನಗೋಳದ ಶ್ರೀ.ಆದಿನಾಥ ಸಾಂಸ್ಕøತಿಕ ಭವನದಲ್ಲಿ ಮಂಗಳವಾರದಂದು ಮುಕಟ ಸಪ್ತಮಿ ನಿಮಿತ್ಯ ಹಮ್ಮಿಕೊಳ್ಳಲಾದ ಕಲ್ಯಾಣ ಮಂದಿರ ಪೂಜಾ ವಿಧಾನದ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದ ಅವರು, ಇಂದಿನ ಮಕ್ಕಳಲ್ಲಿ ಧರ್ಮದ ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದೆ. ಧರ್ಮವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳನ್ನು ಧಾರ್ಮಿಕ ಪಾಠಶಾಲೆಗೆ ಕಳುಹಿಸಿ ಅವರಲ್ಲಿ ಧರ್ಮದ ಜಾಗೃತಿ ಮೂಡಿಸುವ ಕಾರ್ಯಕ್ಕೆ ಪ್ರೇರಣೆ ನೀಡಬೇಕೆಂದು ಅವರು ಹೇಳಿದರು.
ಕಲ್ಯಾನ ಮಂದಿರ ಪೂಜಾ ವಿಧಾನದಲ್ಲಿ ಸುಮಾರು 300 ಕ್ಕೂ ಹೆಚ್ಚು ಭಕ್ತಾದಿಗಳು ಭಾವವಹಿಸಿ ಪೂಜಾ ಕಾರ್ಯಗಳನ್ನು ಕೈಗೊಂಡರು. ಈ ಸಂದರ್ಭದಲ್ಲಿ ರಾಜೇಂದ್ರ ಹನಮಣ್ಣವರ, ಜಯಗೌಡ ಪಾಟೀಲ, ಪುಷ್ಪಕ ಹನಮಣ್ಣವರ, ಅಭಯ ಅವಲಕ್ಕಿ ಪ್ರಮೋದ ಪಾಟೀಲ, ಧನಪಾಲ ಪಾಟೀಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *