Breaking News
Home / Uncategorized / ಬೆಳಗಾವಿಗೆ ಡೈರೆಕ್ಟರ್ ಜನರಲ್ ಸಿ. ರಾಜೀವ ಭೇಟಿ

ಬೆಳಗಾವಿಗೆ ಡೈರೆಕ್ಟರ್ ಜನರಲ್ ಸಿ. ರಾಜೀವ ಭೇಟಿ

ಬೆಳಗಾವಿ: ಕರ್ನಾಟಕ, ಗೋವಾ ಹಾಗೂ ಬೆಂಗಳೂರು ವಿಭಾಗದ ಎನ್.ಸಿ.ಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್, ಏರ್ ಕಮಾಂಡರ್ ಸಿ. ರಾಜೀವ ಅವರು ಬೆಳಗಾವಿಯಲ್ಲಿ ಆಯೋಜಿಸಿರುವ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಹಾಗೂ ಸಮುದಾಯ ಮಟ್ಟದ ತಲ ಸೇನಾ ಶಿಬಿರದಲ್ಲಿ ಇಂದು ಪಾಲ್ಗೊಂಡಿದರು.
ಬೆಳಗಾವಿಯ ಜಾಧವ ನಗರದಲ್ಲಿ ಗ್ರುಪ್ ಕಮಾಂಡರ್ ಕರನಲ್ ಕ್ರೀಪಾಲ್ ಸಿಂಗ್ ಹಾಗೂ 25 ಮತ್ತು 26 ನೇಯ ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯೋಜಿಸಿರುವ. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಪ್ರಶಸ್ತಿಗಳನ್ನು ಕೆಡೆಟ್‍ಗಳಿಗೆ ವಿತರಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಯಂಮ ಮತ್ತು ದೇಶ ಭಕ್ತಿ ಹೆಚ್ಚಬೇಕು. ಅದಕ್ಕಾಗಿ ಸರ್ಕಾರ ವಿವಿಧ ವಿಭಾಗಗಳನ್ನು ಶಾಲಾ ಮಟ್ಟದಿಂದ ಕಾಲೇಜುವರೆಗೆ ಆರಂಭಿಸಿ, ತರಬೇತಿ ನೀಡುತ್ತಿದೆ.
ಎನ್.ಸಿ.ಸಿ ಕ್ಯಾಂಪ್‍ಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಭವಿಷ್ಯತ್ತಿನ ಜೀವನದಲ್ಲಿ ಎಂತಹ ತೊಂದರೆಗಳು ಬಂದರು ಸಮಚಿತ್ತದಿಂದ ಮತ್ತು ಧೈರ್ಯದಿಂದ ಎದುರಿಸುತ್ತಾರೆ. ಆ ಶಕ್ತಿ ಮತ್ತು ಜಾಣತನವನ್ನು ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ನೀಡುತ್ತದೆ ಎಂದು ಸಿ.ರಾಜೀವ ಹೇಳಿದರು.
ಶಿಬಿರದಲ್ಲಿ ಕೆಡೆಟ್‍ಗಳಿಗೆ ಕ್ರಾಸಿಂಗ್, ಫೈರಿಂಗ್ ಮತ್ತು ಮ್ಯಾಪ್ ರಿಡಿಂಗ್ ದಂತಹ ಕೋರ್ಸ್‍ಗಳ ತರಬೇತಿಯನ್ನು ನೀಡಲಾಯಿತ್ತು.
ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕ ಕರ್ನಲ್ ಯೋಗೇಶ ಸೋಲಂಕಿ, ಕರ್ನಲ್ ಕ್ರಿಪಾಲ್ ಸಿಂಗ್, ಅಧಿಕಾರಿಗಳಾದ ಸುನೀಲ ಪಾಟೀಲ, ವಾಯ್.ಎಸ್.ರೇಡು, ಸಬಿಂದರ್ ವರದಿ, ಕೆ.ಬೆನಾಳಕರ್, ಎಚ್.ಎಸ್.ಕುಲಕರ್ಣಿ ಹಾಜರಿದ್ದರು.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *