Breaking News
Home / Uncategorized

Uncategorized

ಕಾರ್ಮಿಕರಿಗೆ ಸಹಾಯಧನ: ಬ್ಯಾಂಕ್ ವಿವರ ಸಲ್ಲಿಸಲು ಸೂಚನೆ

  ಬೆಳಗಾವಿ,  ಕೋರೋನ ವೈರಸ್ ಹರುಡುತ್ತಿರುವ ಹಿನ್ನಲೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ.೧,೦೦೦/-ಗಳ ಸಹಾಯ ಧನ ಬಿಡುಗಡೆಗಾಗಿ ಕಾರ್ಮಿಕರ ಬ್ಯಾಂಕ್ ಖಾತೆಯ ವಿವರವನ್ನು ಸಲ್ಲಿಸುವಂತೆ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನಾ ವೈರಸ್ ಎಲ್ಲಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ದಿನಾಂಕ: ೨೫/೦೩/೨೦೨೦ ರಂದು ರಾಜ್ಯಾದ್ಯಾಂತ ಲಾಕಡೌನ್ ಘೋಷಿಸಿರುವುದರಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳು ಸ್ಥಗಿತ ಗೊಂಡಿದ್ದು, ಇಲ್ಲಿ ಕೆಲಸ ನಿರ್ವಹಿಸುವ ನೋಂದಾಯಿತ ಕಟ್ಟಡ ಮತ್ತು …

Read More »

ಪಿಎಂ ಮೋದಿ ಅವರಿಂದ ಗೋವಾ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ,ಕದಂಬ ವಾಹನದಲ್ಲಿ ಗೋವಾ ಕನ್ನಡಿಗರು ವಾಪಸ್….!!!

*ಗೋವಾ ಸರ್ಕಾರಕ್ಕೆ ಪ್ರದಾನಿ ಮೋದಿ ಅವರಿಂದ ಖಡಕ್ ವಾರ್ನಿಂಗ್ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಬೆಳಗಾವಿಗೆ ಬಂತು ಗೋವಾ ಕದಂಬ* *ಬೆಳಗಾವಿ ಸುದ್ಧಿ* ಬೆಳಗಾವಿ ಗೋವಾದಲ್ಲಿರುವ ಕನ್ನಡಿಗ ಕಾರ್ಮಿಕರು ಅತಂತ್ರ ಪ್ರಕರಣಕ್ಕೆ ಸಮಂಧಿಸಿದಂತೆ ಗೋವಾ ಕನ್ನಡಿಗರ ಬಗ್ಗೆ ಮಾದ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಪ್ರದಾನಿ ನರೇಂದ್ರ ಮೋದಿ ಅವರು ಗೋವಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗೋವಾ ಸರ್ಕಾರಕ್ಕೆ ಕೇಂದ್ರದಿಂದ ತರಾಟೆ ಬೆನ್ನಲ್ಲೇ ಕನ್ನಡಿಗರ ರಕ್ಷಣೆಗೆ ಗೋವಾ ಸರ್ಕಾರ ಧಾವಿಸಿದೆ. ಕಣಕುಂಬಿ ಚೆಕ್ ಪೋಸ್ಟ್ …

Read More »

ಡೋಂಟ್ ವರಿ ,ಬಿ ಹ್ಯಾಪಿ,ಬೆಳಗಾವಿಯ ಐದೂ ರಿಪೋರ್ಟಗಳು ನೆಗೆಟಿವ್…ಆದರೂ ಎಚ್ಚರ..ಎಚ್ಚರ..!!

ಬೆಳಗಾವಿ ಜಿಲ್ಲೆ: ಐದೂ ಪ್ರಕರಣಗಳ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೨೩(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಐದೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಒಟ್ಟಾರೆ ಐದು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ಲಭಿಸಿರುವ ವರದಿ ಪ್ರಕಾರ ಎಲ್ಲ ಐದೂ ಮಾದರಿಗಳ ಫಲಿತಾಂಶ …

Read More »

ಕೇವಲ ಡಿಕೆ ಶಿವಕುಮಾರ್ ಅವರನ್ನು ಅಭಿನಂಧಿಸಿ ,ಸತೀಶ್ ಸಲೀಂ ಅವರನ್ನು ಮರೆತ ಲಕ್ಷ್ಮೀ ಹೆಬ್ಬಾಳಕರ

ಕೇವಲ ಡಿಕೆ ಶಿವಕುಮಾರ್ ಅವರನ್ನು ಅಭಿನಂಧಿಸಿ ,ಸತೀಶ್ ಸಲೀಂ ಅವರನ್ನು ಮರೆತ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ- ಇಂದು ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅದ್ಯಕ್ಷರಾಗಿ ಸತೀಶ್ ಜಾರಕಿಹೊಳಿ,ಖಂಡ್ರೆ, ಮತ್ತು ಸಲೀಂ ಅಹ್ಮದ ಅವರು ಕೆಪಿಸಿಸಿ ಅದ್ಯಕ್ಷರಾಗಿ ನೇಮಕಗೊಂಡರೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕೇವಲ ಡಿ ಕೆ ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ ‌ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅದ್ಯಕ್ಷರಾಗಿ ನೇಮಕವಾದ ಮೇಲೆ ಡಿಕೆಶಿ ಟ್ರಬಲ್ ಶೂಟರ್, ಎಂದು …

Read More »

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್….

ಹಿರೇಬಾಗೇವಾಡಿ ಯಲ್ಲಿ ಬೈಕ್ ಕಳ್ಳನ ಅರೆಸ್ಟ್…. ಬೆಳಗಾವಿ – ಹಿರೇಬಾಗೇವಾಡಿ ಪೋಲೀಸರು ಬೈಕ್ ಕಳ್ಳನನ್ನು ಬಂಧಿಸಿ ಐದು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. ತಿಗಡಿ ಗ್ರಾಮದ ಆಜಾದ ಕಿಲ್ಲೇದಾರ ಎಂಬಾತನನ್ನು ಬಂಧಿಸಿರುವ ಪೋಲೀಸರು ಐದು ಬೈಕ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Read More »

ಮಹಾದಾಯಿ ವಿಚಾರದಲ್ಲಿ ಸದ್ಯಕ್ಕೆ ಸಂಬ್ರಮ ಬೇಡ- ರಮೇಶ್ ಜಾರಕಿಹೊಳಿ

ಬೆಳಗಾವಿ- ಕೇಂದ್ರ ಸರ್ಕಾರ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಜಲಸಂಪನ್ಮೂಲ ಸಚಿವರನ್ನು ಸ್ವಾಗತಿಸಲು ಬೆಳಗಾವಿಯ ರಾಣಿ ಚನ್ಬಮ್ಮ ಏರ್ಪೋರ್ಟಿನಲ್ಲಿ ನೂರಾರು ರೈತರು ಆಗಮಿಸಿದ್ದರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದ್ರು, ಬೆಳಗಾವಿ ಏರ್‌ಪೋರ್ಟ್ ಎದುರು ರಮೇಶ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ. ಕನ್ನಡಪರ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರಿಂದ ಕ್ಷೀರಾಭಿಷೇಕ.ಆಡಲಾಯಿತು. ವಿಮಾನ ನಿಲ್ದಾಣದಲ್ಲಿ ರೈತರಿಂದ ಸಚಿವರಿಗೆ ಅಭಿನಂದನೆ ಸಲ್ಲಿಸಲಾಯಿತು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ …

Read More »

ಬೆಳಗಾವಿ ಉದ್ಯೋಗ ಮೇಳಕ್ಕೆ 200 ಕಂಪನಿಗಳು, 10 ಸಾವಿರ ಉದ್ಯೋಗದಾತರು ಬರುವ ನಿರೀಕ್ಷೆ- ಡಿಸಿ

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಎರಡು ದಿನಗಳ ಬೃಹತ್ಪ್ರಾದೇಶಿಕ ಉದ್ಯೋಗ ಮೇಳವನ್ನು ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯ ಶಿವಬಸವ ನಗರದಲ್ಲಿರುವ ಎಸ್.ಜಿ. ಬಾಳೇಕುಂದ್ರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕಾಲೇಜ್ ಆವರಣದಲ್ಲಿ ಫೆ.28 ಶುಕ್ರವಾರ ಹಾಗೂ 29 ಶನಿವಾರ ಉದ್ಯೋಗ ಮೇಳ ನಡೆಯಲಿದೆ. ಬೆಳಗಾವಿ, …

Read More »

ಮಹದಾಯಿ ನೀರು ಹಂಚಿಕೆ: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಸಚಿವ ರಮೇಶ್ ಜಾರಕಿಹೊಳಿ

ಮಹದಾಯಿ ನೀರು ಹಂಚಿಕೆ: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ, ಫೆ.೨೦(ಕರ್ನಾಟಕ ವಾರ್ತೆ): ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಮಹದಾಯಿ ಯೋಜನೆಯ ನದಿ ನೀರು ಹಂಚಿಕೆ ವಿಚಾರದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲು ಸುಪ್ರಿಂ ಕೋರ್ಟ್ ಸಮ್ಮತಿಸಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಸರ್ಕಾರವು ಮಹದಾಯಿ ಯೋಜನೆ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲೇಬೇಕೆಂದು …

Read More »

ರಾಜ್ಯದ ಪ್ರಮುಖ ರಸ್ತೆಗಳಲ್ಲಿ ನಿಧಾನ ಚಲಿಸಿ ಯಾಕಂದ್ರೆ ಈ ಸುದ್ಧಿ ಓದಿ

ರಸ್ತೆ ವಾಹನ ಸಂಚಾರ ಗಣತಿ ಫೆ.೧೯ ರಿಂದ‌ ಬೆಳಗಾವಿ, ಫೆ.೧೭(ಕರ್ನಾಟಕ ವಾರ್ತೆ): “ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆವತಿಯಿಂದ ರಸ್ತೆ ವಾಹನ ಸಂಚಾರ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಈ ಗಣತಿ ಕಾರ್ಯವು ಫೆ. 19 ರ ಬೆಳಿಗ್ಗೆ 6 ಗಂಟೆಯಿಂದ ಫೆ.26 ರ ಬೆಳಿಗ್ಗೆ 6.00 ಗಂಟೆಯ ವರೆಗಿನ ಒಟ್ಟು 7 ದಿನಗಳ ಕಾಲ ಸತತವಾಗಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯ ಎಲ್ಲ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ …

Read More »

ರೈಲಿನಲ್ಲಿ ಪ್ರಯಾಣಿಕರನ್ನು ಬೆದರಿಸುತ್ತಿದ್ದ ಮೋಬೈಲ್ ಚೋರ್ ಅರೆಸ್ಟ್

ಬೆಳಗಾವಿ- ಬೆಳಗಾವಿ- ಮೀರಜ್ ಪ್ಯಾಸೇಂಜರ್ ರೈಲಿನಲ್ಲಿ ಪ್ರಯಾಣಿಕರನ್ನು ಬೆದರಿಸಿ ಮೋಬೈಲ್ ಕದಿಯುತ್ತಿದ್ದ ಖದೀಮ ಈಗ ರೈಲ್ವೆ ಪೋಲೀಸರ ಅತಿಥಿಯಾಗಿದ್ದಾನೆ. ಆನಂದ ಶಿಕಲಗಾರ ಮೀರಜ ಪಟ್ಟಣದ ನಿವಾಸಿಯಾಗಿದ್ದು ಈತ ಬೆಳಗಾವಿ- ಮೀರಜ್ ಪ್ಯಾಸೆಂಜರ್ ಟ್ರೇನ್ ದಲ್ಲಿ ಸಂಚರಿಸಿ ಪ್ರಯಾಣಿಕರನ್ನು ಬೆದರಿಸಿ ಮೋಬೈಲ್ ಕದ್ದು ಪರಾರಿಯಾಗುತ್ತಿರುವಾಗ ಸಾರ್ವಜನಿಕರು ಈ ಖದೀಮನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

Read More »