Home / Uncategorized (page 2)

Uncategorized

ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ವೇರೀ ಗುಡ್ – ಡಿಸಿಎಂ 

ಬೆಳಗಾವಿ, -ಕೋವಿಡ್-೧೯ ಸಂದರ್ಭದಲ್ಲಿಯೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.100ಕ್ಕೆ ನೂರರಷ್ಟು ಪ್ರವೇಶ ಮತ್ತು ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ಗಳಿಸುತ್ತಿರುವ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಾಧನೆಯ ಬಗ್ಗೆ ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಅಶ್ವಥ್ ನಾರಾಯಣ ಸಿ.ಎನ್‌. ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮಂಗಳವಾರ …

Read More »

ಗಂಡನನ್ನು ಕೊಂದು,ಮನೆಯ ಅಂಗಳದಲ್ಲಿ ಸಮಾಧಿ ಮಾಡಿದವಳು,ಈಗ ಪಂಜರದಲ್ಲಿ….!

ಬೆಳಗಾವಿ- ಅನೈತಿಕ ಸಂಬಂಧದ ಬಗ್ಗೆ ಗಂಡ ಪ್ರಶ್ನೆ ಮಾಡಿದ್ದಕ್ಕೆ ಗಂಡನನ್ನು ಕೊಂದು ಮನೆಯ ಅಂಗಳದಲ್ಲೇ ಸಮಾಧಿ ಮಾಡಿದ ಪತ್ನಿಯನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಗಂಡನ ಕೊಲೆಗೆ ಪತ್ನಿಗೆ ಸಾಥ್ ಕೊಟ್ಟ ಮೂವರು ಸೇರಿದಂತೆ ಒಟ್ಟು ನಾಲ್ಕು ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಪತಿಯನ್ನು ಕೊಲೆಗೈದು ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿಯಿಂದ ತಗ್ಗಾ ತೆಗೆಸಿ ಶವವನ್ನು ಮನೆಯ ಅಂಗಳದಲ್ಲೇ ಹೂತು ಹಾಕಿದ್ದ ಪತ್ನಿ …

Read More »

ಪೀರನವಾಡಿ ವಿವಾದ ಎಡಿಜಿಪಿ ಸಂಧಾನ ಸಕ್ಸೆಸ್…..!

. ಬೆಳಗಾವಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನೆ ವಿವಾದ ಸಂಬಂಧಿಸಿದಂತೆ ಇಂದು ಬೆಳಗಾವಿಯಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ ಅವರು ನಡೆಸಿದ, ಸಂಧಾನಸಭೆ ಸಕ್ಸಸ್ ಆಗಿದೆ ಎಡಿಜಿಪಿ ಅಮರಕುಮಾರ ಪಾಂಡೆ ಅವರು ನಡೆಸಿದ ಕನ್ನಡಿಗರ – ಮರಾಠಿಗ ಭಾಷಿಕ ಮುಖಂಡರ ಜೊತೆ ನಡೆದ ಸಭೆ ಸಫಲವಾಗಿದೆ. ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು ಪ್ರಸ್ತಾಪವಾಗಿ ವಿವಾದಕ್ಕೆ ಬಹುತೇಕ …

Read More »

ಸಚಿವ ರಮೇಶ್ ಜಾರಕಿಹೊಳಿ ಸಂಧಾನ ಸಕ್ಸೆಸ್,ರಾಮದುರ್ಗ ಸಂತ್ರಸ್ತರ ಪ್ರತಿಭಟನೆ ವಾಪಸ್….!

ಬೆಳಗಾವಿ- ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ನೆರೆ ಸಂತ್ರಸ್ತರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.ಇಂದು ಸಚಿವ ರಮೇಶ್ ಜಾರಕಿಹೊಳಿ ಮನವೊಲಿಕೆ ಹಿನ್ನಲೆಯಲ್ಲಿ ರೈತರು ಪ್ರತಿಭಟನೆ ವಾಪಸ್ ಪಡೆದುಕೊಂಡಿದ್ದು ಜಾರಕಿಹೊಳಿ ಸಂಧಾನ ಸಕ್ಸೇಸ್ ಆಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಹಶಿಲ್ದಾರ ಕಚೇರಿ ಮುಂದೆ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಭೇಟಿ ನೀಡಿದ ಸಚಿವ ರಮೇಶ್ ಜಾರಕಿಹೊಳಿ,ಸಿಎಂ ಸೂಚನೆ ಹಿನ್ನಲೆ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುತ್ತಿದ್ದೇನೆ.ಸಿಎಂ ಭೇಟಿಯಾಗಿ ಪರಿಹಾರಕ್ಕೆ ಮನವಿ ಮಾಡಿ ನೆರೆ …

Read More »

ಸಂಗೊಳ್ಳಿ ರಾಯಣ್ಣನ ಮೂರ್ತಿ ಸಮಸ್ಯೆ ಇತ್ಯರ್ಥಕ್ಕೆ,ಡಿಸಿ ಮುತವರ್ಜಿ ವಹಿಸಲಿ

ಬೆಳಗಾವಿ- ಪೀರನವಾಡಿಯಲ್ಲಿ ಕ್ರಾಂತಿವೀರ,ಶೂರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ವಿವಾದ ಬಗೆ ಹರಿಸಲು ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಕರವೇ ಜಿಲ್ಲಾದ್ಯಕ್ಷ ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಕರವೇ ಪದಾಧಿಕಾರಿಗಳು, ಐತಿಹಾಸಿಕ ಬೆಳಗಾವಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷ್ ಅಧಿಕಾರಿಗಳನ್ನೇ ನಡುಗಿಸಿದ ಕ್ರಾಂತಿವೀರ,ಶೂರ,ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಪೀರನವಾಡಿಯ ಮುಖ್ಯ ಸರ್ಕಲ್ ನಲ್ಲಿ ಪ್ರತಿಷ್ಠಾಪನೆ ಮಾಡುವ ಕುರಿತು ರಾಯಣ್ಣನ ಅಭಿಮಾನಿಗಳು …

Read More »

ರದ್ದಾದ ಯೋಜನೆಗೆ ಮತ್ತೇ ಲೀಫ್ಟ್….ಶಾಸಕ ಅಭಯ ಪಾಟೀಲರಿಂದ ಬೆಳಗಾವಿಗೆ ಸ್ಪೇಷಲ್ ಗೀಫ್ಟ್….!

ಬೆಳಗಾವಿ-ಬೆಳಗಾವಿ ಮಹಾನಗರದ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ಶಾಸಕ ಅಭಯ ಪಾಟೀಲ ಅವರು ಸದ್ದಿಲ್ಲದೇ ಬೆಳಗಾವಿಯಿಂದ ಕೈಬಿಟ್ಟು ಹೋಗಿದ್ದ ನಿರಂತರ ನೀರು 24/7 ಮಹತ್ವದ ನೀರಿನ ಯೋಜನೆಗೆ ಮಂಜೂರಾತಿ ಪಡೆದು ಈ ಯೋಜನೆಯನ್ನು ಅನುಷ್ಠಾನ ಗೊಳಿಸುವ ಹಂತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ವರ್ಷಗಳ ಹಿಂದೆಯೇ ಬೆಳಗಾವಿ ಮಹಾನಗರಕ್ಕೆ 24/7 ಕುಡಿಯುವ ನೀರಿನ ಯೋಜನೆ ಮಂಜೂರಾಗಿತ್ತು ಕಾರಣಾಂತರಗಳಿಂದ ಈ ಯೋಜನೆ ರದ್ದಾಗಿ ಅನುದಾನವೂ ವಾಪಸ್ ಹೋಗಿತ್ತು,ಈ ಬೆಳವಣಿಗೆಯನ್ನು ಸಹಿಸದ ಶಾಸಕ ಅಭಯ ಪಾಟೀಲ …

Read More »

ಬೆಳಗಾವಿಯ ನರ್ಸ್ ಗೆ ವೈದ್ಯಕೀಯ ಶಿಕ್ಷಣ ಸಚಿವರಿಂದ ಅಭಿನಂದನೆ

ಬೆಳಗಾವಿ-ಕೋವಿಡ್ ಸೋಂಕಿತೆಗೆ ಯಶಸ್ವಿ ಹೆರಿಗೆ ಮಾಡಿಸಿದ ನರ್ಸ್‌ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌ಗೆ ಸಚಿವ ಡಾ.ಕೆ.ಸುಧಾಕರ್ ಅಭಿನಂದ‌ನೆ ಸಲ್ಲಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದ,ಸೋಂಕಿತೆಗೆ ಧೈರ್ಯ ತುಂಬಿ ಹೆರಿಗೆ ಮಾಡಿಸಿದ ನರ್ಸ್ ಕಾರ್ಯ ಶ್ಲಾಘನೀಯ’ ಎಂದು.ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ ಸಚಿವ ಡಾ.ಕೆ.ಸುಧಾಕರ್ ಬೆಳಗಾವಿ ಜಿಲ್ಲೆಯ ನರ್ಸ್ ಕಾರ್ಯವನ್ನು ಕೊಂಡಾಡಿದ್ದಾರೆ. ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮಂಗಳವಾರ ಸೊಂಕಿತರ ಸಂಖ್ಯೆ ಮತ್ತೆ ಜಂಪ್, ಇಂದು 23 ಸೊಂಕಿತರ ಪತ್ತೆ

ಬೆಳಗಾವಿ – ಮಹಾಮಾರಿ ಕೊರೋನಾ ಭೀತಿಗೆ ಬೆಳಗಾವಿ ಜಿಲ್ಲೆ ಬೆಚ್ಚಿ ಬಿದ್ದಿದೆ.ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಂಪ್ ಆಗುತ್ತಲೇ ಇದ್ದು ಇಂದು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 23 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಮಂಗಳವಾರ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 23 ಸೊಂಕಿತರು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1096 ಕ್ಕೆ ತಲುಪಿದೆ ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಒಟ್ಟು 1096 ಸೊಂಕಿತರು ಪತ್ತೆಯಾಗಿದ್ದು ಅದರಲ್ಲಿ 426ಸೊಂಕಿತರು ಗುಣಮುಖರಾಗಿದ್ದಾರೆ 640 …

Read More »

ಇಂದು ಬೆಳಗಾವಿಯಲ್ಲಿ ಮತ್ತೊಂದು ಬಲಿ ಪಡೆದ ಮಹಾಮಾರಿ

ಪೋಟೋ ಶಿರ್ಷಿಕೆ. ಬೆಳಗಾವಿಯ ಕಂಗ್ರಾಳ ಗಲ್ಲಿಗೂ ಅಂಬ್ಯುಲೆನ್ಸ ದೌಡಾಯಿಸಿದ್ದು ಇಲ್ಲಿಯೂ ಸೊಂಕಿತ ಪತ್ತೆಯಾದ ಶಂಕೆ ಇದೆ. ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಮರಣಮೃದಂಗ ಮುಂದುವರೆದಿದೆ ಈ ಕಿಲ್ಲರ್ ವೈರಸ್ ಗೆ ಬೆಳಗಾವಿಯ ಮತ್ತೊಬ್ಬ ವ್ಯೆಕ್ತಿ ಬಲಿಯಾಗಿದ್ದಾನೆ. ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿ ಟೇಲರಿಂಗ್ ಉದ್ಯೋಗ ಮಾಡುತ್ತಿದ್ದ ಹಿಂಡಲಗಾ ರಕ್ಷಕ ಕಾಲೋನಿಯ ನಿವಾಸಿಯಾಗಿದ್ದ 58 ವರ್ಷದ ವ್ಯೆಕ್ತಿಯೊಬ್ಬ  ಮೃತಪಟ್ಟಿದ್ದಾನೆ.ಈತನ ರಿಪೋರ್ಟ್ ಪಾಸಿಟೀವ್ ಎಂದು ದೃಡವಾಗಿದೆ ಎಂದು ನಂಬಲರ್ಹ ಮೂಗಳು ಖಚಿತಪಡಿಸಿವೆ. ಕೆಲ ದಿನಗಳ …

Read More »

ಡೋಂಟ್ ವರೀ….ಐ ಯಮ್ ಸ್ವಾರೀ……!

ಬೆಳಗಾವಿ- ಕೊರೋನಾ ಕಾಲಿಟ್ಟಾಗ,ವೈದ್ಯಕೀಯ ಸಿಬ್ಬಂದಿಗೆ ಸರ್ಕಾರ ಕೊರೋನಾ ವಾರಿಯರ್ಸ್ ಅಂತಾ ಬಿರುದು ಕೊಟ್ಟಿತು,ಕ್ಯಾಂಡಲ್ ಹಚ್ಚಿತು,ಚಪ್ಪಾಳೆ ಬಾರಿಸಿತು,ದಿನ ಕಳೆದಂತೆ ಗೌಡರ ಕುದ್ರೆ ಬರ್ತಾ, ಬರ್ತಾ ,ಕತ್ತೆ ಆಯಿತು ಎನ್ನುವ ಹಾಗೆ ಸರ್ಕಾರ ಈಗ ಬದಲಾಗಿದೆ.ಕೋವಿಡ್ ಟೆಸ್ಟ್ ಮಾಡುವ ವೈದ್ಯಕೀಯ ಸಿಬ್ಬಂಧಿಗೆ ,ಹೊಟೇಲ್ ವಸತಿಯಿಂದ ಹೊರಹಾಕಿ,ಅವರಿಗೆ ಊಟದ ವ್ಯೆವಸ್ಥೆ ಮಾಡದೇ,ಅವರನ್ನು ಅತಂತ್ರರನ್ನಾಗಿ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪ್ರತಿ ದಿನ ಶಿಪ್ಟ ಮೇಲೆ ಬೆಳಗಾವಿಯ ಕೋವಿಡ್ ಲ್ಯಾಬ್ ನಲ್ಲಿ ಕೆಲಸ ಮಾಡುವ ವೈದ್ಯಕೀಯ …

Read More »