Breaking News
Home / Uncategorized / ಪಲ್ಟಿಯಾದ ಕಾರು, ನಿಡಸೋಸಿ ಸ್ವಾಮಿಜಿ, ಪ್ರಾಣಾಪಾಯದಿಂದ ಪಾರು…

ಪಲ್ಟಿಯಾದ ಕಾರು, ನಿಡಸೋಸಿ ಸ್ವಾಮಿಜಿ, ಪ್ರಾಣಾಪಾಯದಿಂದ ಪಾರು…

ಬೆಳಗಾವಿ
ಧಾರವಾಡ-ಬೆಳಗಾವಿ ಹೊರವಲಯದ ತೇಗೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದ್ದು, ಕಾರ್ ಪಲ್ಟಿಯಾಗಿ ಕಾರ ನುಜ್ಜುಗುಜ್ಜಾದರೂ ಸಹ ಏರಬ್ಯಾಗ ಇದ್ದಿದ್ದರಿಂದ ಅದೃಷ್ಟವಶಾತ್ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಹಿಂದಿರುಗುವಾಗ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕಾರು ಅಪಘಾತವಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾಲಿಗೆ ಸ್ವಲ್ಪ ಏಟು ಬಿದ್ದಿದ್ದು, ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಚಾಲಕ ರಮೇಶ ಮಾಳಿ ಸೇರಿದಂತೆ ಇಬ್ಬರು ಆಪ್ತ ಸಹಾಯಕರು ಸಹ ಕಾರಿನಲ್ಲಿದ್ದರು. ಸಣ್ಣ ಪುಟ್ಟ ಗಾಯ ಹೊರತುಪಡಿಸಿದರೆ ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ ಎಂದು ಶ್ರೀಮಠದ ಸದ್ಭಕ್ತ ಮಂಡಳಿ ತಿಳಿಸಿದೆ.
ಭಕ್ತ ವಲಯದಲ್ಲಿ ಆತಂಕ:
ಗಡಿಭಾಗದಲ್ಲಿ ಅಪಾರ ಭಕ್ತ ಸಮೂಹ ಹೊಂದುವ ಜೊತೆಗೆ ಸರಳತೆಯ ಮೂಲಕ ಉತ್ತರ ಕರ್ನಾಟಕದ ನಡೆದಾಡುವ ದೇವರು ಅಂತಲೇ ಪ್ರಖ್ಯಾತಿ ಪಡೆದಿರುವ ಜಗದ್ಗುರು ಪಂಚಮ ಶಿವಲಿಂಗೇಶ್ವರ ಕಾರು ಅಪಾಘತವಾಗಿರುವ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಭಕ್ತ ವಲಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಶ್ರೀಗಳು ಕ್ಷೇಮವಾಗಿದ್ದರೆ ಎನ್ನುವ ಸುದ್ದಿ ಭಕ್ತರ ಆತಂಕವನ್ನು ಕಡಿಮೆಗೊಳಿಸಿದೆ. ನಿಡಸೋಸಿ ಶ್ರೀಮಠ ಹಾಗೂ ಬಾಗಲಕೋಟ ಚರಂತಿಮಠದ ಪೀಠಾಧಿಪತಿಗಳಾಗಿರುವ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿರುವ ಸುದ್ದಿ ತಿಳಿದು ಭಕ್ತರು ಶ್ರೀಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *