Breaking News
Home / Uncategorized / ಬೆಳಗಾವಿಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್!

ಬೆಳಗಾವಿಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್!

ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ,ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿಗಳ ಅನಾವರಣದ ಜೊತೆಗೆ ಸರ್ಕಾರ ಈಗ ಜಗಜ್ಯೋತಿ ಬಸವೇಶ್ವರ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಜೊತೆಗೆ ವಿಶ್ವರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಮಾಡಲು ಸರ್ಕಾರ ಮುಂದಾಗಿದೆ.ಈ ವಿಚಾರದಲ್ಲಿ ಶಾಸಕ ಅಭಯ ಪಾಟೀಲ ಮುಖ್ಯಮಂತ್ರಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ

ರಾಜ್ಯ ವಿಧಾನಸಭೆ ಚುನಾವಣೆಗೆ ಗಡಿ‌ಜಿಲ್ಲೆ ಬೆಳಗಾವಿ ಸಜ್ಜುಗೊಳ್ಳುತ್ತಿದೆ. ಈ ಮಧ್ಯೆ‌ ಮಹಾನಾಯಕರ ಪುತ್ಥಳಿ ‌ರಾಜಕಾರಣವೂ ಭರ್ಜರಿ ಸದ್ದು ಮಾಡ್ತಿದೆ. ಮರಾಠಾ ಸಮುದಾಯದ ಓಲೈಕೆಗೆ ಪೈಪೋಟಿಗೆ ಬಿದ್ದಿದ್ದ ಬಿಜೆಪಿ ಕಾಂಗ್ರೆಸ್ ನಾಯಕರು ರಾಜಹಂಸಘಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಎರಡೆರಡು ಬಾರಿ ಲೋಕಾರ್ಪಣೆ ಮಾಡಿದ್ದರು. ಅಲ್ಲದೇ ಸಿಎಂ ಸಹ ರಾಜಹಂಸಘಡ ಕೋಟೆ ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನ ಘೋಷಣೆ ಮಾಡಿದ್ರು. ಇದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣ ಆಗಿತ್ತು‌. ಕನ್ನಡಪರ ಸಂಘಟನೆಗಳ ಆಕ್ರೋಶ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್‌ಗೆ ಸರ್ಕಾರಮುಂದಾಗಿದೆ.

ಬೆಳಗಾವಿ ತಾಲೂಕಿನ ‌ರಾಜಹಂಸಘಡ ಕೋಟೆಯಲ್ಲಿ ಸ್ಥಾಪಿಸಿದ್ದ ಶಿವಾಜಿ ಮೂರ್ತಿಯನ್ನು ಉದ್ಘಾಟಿಸುವ ಮೂಲಕ ಸಿಎಂ‌ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ ಗೆದ್ದು ಬೀಗಿದ ಅನುಭವ ಪಡೆದರು.‌ ಇದರಿಂದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ಹಿಮ್ಮಟಿಸಿದೇವು ಎಂಬ ಖುಷಿ ಪಟ್ಟರು‌. ಆದರೆ ಇದೇ ಈಗ ಬಿಜೆಪಿ ‌ಸರ್ಕಾರಕ್ಕೆ ತಿರುಗುಬಾನವಾಗಿದೆ. ಶಿವಾಜಿ ಮೂರ್ತಿ ಹೆಸರಿನಲ್ಲಿ ಮರಾಠಾ ಓಲೈಕೆಯ ಆಪಾದನೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿವೆ. ಈ ಹಾನಿ ತಪ್ಪಿಸಲು ಇದೀಗ ಬಿಜೆಪಿ ಸರ್ಕಾರ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಸವೇಶ್ವರ ಪ್ರತಿಮೆ‌ ಹಾಗೂ ಬಸವಾದಿ ಶರಣರ ಚರಿತ್ರೆ ಸ್ಥಾಪನೆಯ ಶಂಕು ಸ್ಥಾಪನೆಗೆ ಮುಂದಾಗಿದೆ.

ಶಿವಾಜಿ ಮೂರ್ತಿಯ ಉದ್ಘಾಟನೆ ವೇಳೆ ರಾಜಹಂಸಘಡ ಅಭಿವೃದ್ಧಿಗೆ ಐದು ಕೋಟಿ ನೀಡುವುದಾಗಿಯೂ ಸಿಎಂ ಬೊಮ್ಮಾಯಿ ಘೋಷಿಸಿದ್ದರು. ಇದು‌ ಕನ್ನಡ ಸಂಘಟನೆಗಳ‌ ಕಂಗೆಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಡ್ರೊಲ್ ಮಾಡಲೆಂದೇ ಬಿಜೆಪಿ ಹೊಸ ಪ್ಲ್ಯಾನ್ ಹಾಕಿಕೊಂಡಿದೆ. ಇದರ ಮುಂದುವರೆದ ಭಾಗವಾಗಿ ನಾಳೆ ಬೆಳಗಾವಿಗೆ ಬರುತ್ತಿರುವ ಸಿಎಂ‌ ಬೊಮ್ಮಾಯಿ, ಬಸವೇಶ್ವರ ವೃತ್ತದಲ್ಲಿ 15 ಅಡಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ಪ್ರತಿಷ್ಟಾಪನೆಗೆ ಅಡಿಗಲ್ಲು ಹಾಕಲಿದ್ದಾರೆ. ಇದಕ್ಕಾಗಿ ಸರ್ಕಾರ 30 ಲಕ್ಷ ‌ವೆಚ್ಚ ಮಾಡುತ್ತಿದೆ. ಇದರ ಜೊತೆಗೆ 5 ಕೋಟಿ ವೆಚ್ಚದ ಅನುಭವ ಮಂಟಪ ಹಾಗೂ‌ ಬಸವಾದಿ ಶರಣರ ಚರಿತ್ರೆ ಸಾರುವ ಸ್ತಬ್ಧಚಿತ್ರ‌ ಸೇರಿ ಸಿಎಂ‌ ಬಸವರಾಜ್ ‌ಬೊಮ್ಮಾಯಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಮತ್ತೊಂದೆಡೆ ‌ಬೆಳಗಾವಿ ದಕ್ಷಿಣ ‌ಕ್ಷೇತ್ರದಲ್ಲೇ ನಗರಾಭಿವೃದ್ಧಿ ‌ಇಲಾಖೆಯ ಅನುದಾನದಲ್ಲಿ ಶಿವಚರಿತ್ರೆ ‌ನಿರ್ಮಿಸಲಾಗಿದೆ. ಶಿವಾಜಿ ಉದ್ಯಾನವನದಲ್ಲಿ 10 ಕೋಟಿ ವೆಚ್ಚದಲ್ಲಿ ಛತ್ರಪತಿ ಶಿವಾಜಿ ಚರಿತ್ರೆ ಸಾರುವ ಶಿವಚರಿತ್ರೆ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಇದರ ಉದ್ಘಾಟನೆ ಮಾರ್ಚ್ 16 ರಂದು ಸಂಜೆ 5.30 ಕ್ಕೆ ನಡೆಯಲಿದ್ದು, ಕೇಂದ್ರ ‌ಸಚಿವೆ ಸ್ಮೃತಿ ಇರಾನಿ ಹಾಗೂ ವಿಜಯಪುರ ಶಾಸಕ ಬಸವನಗೌಡ ಪಾಟೀಲ ‌ಯತ್ನಾಳಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಅಭಯ್, ಶಿವಚರಿತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಆಹ್ವಾನ ನೀಡಲಾಗಿದೆ. ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೂ ಆಹ್ವಾನ ನೀಡಲಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಮಹತ್ವದ ಘಟನೆಗಳನ್ನು ತಿಳಿಸುವ ಪ್ರಯತ್ನ ಇದು. ಬೆಳಕು ಹಾಗೂ ಧ್ವನಿ ಮೂಲಕ ಶಿವಚರಿತ್ರೆ ಬಿಂಬಿಸುವ ಪ್ರಯತ್ನ ನಮ್ಮದಾಗಿದೆ. ನಗರಾಭಿವೃದ್ಧಿ ಇಲಾಖೆ ಹಾಗೂ ಶಾಸಕರ ಅನುದಾನ ಬಳಸಿ 10 ಕೋಟಿ ವೆಚ್ಚದಲ್ಲಿ ಶಿವಚರಿತ್ರೆ ನಿರ್ಮಾಣಗೊಂಡಿದೆ. ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಪ್ರತಿದಿನವೂ ಇರಲಿದೆ. 40 ನಿಮಿಷದ ಈ ಕಾರ್ಯಕ್ರಮ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಪ್ರಸಾರ‌ ಮಾಡಲಾಗುವುದು. ಶಿವಚರಿತ್ರೆ ವೀಕ್ಷಣೆಗೆ ಒಬ್ಬರಿಗೆ 50 ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದರು.

ಮತ್ತೊಂದೆಡೆ ಕರ್ನಾಟಕ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಶಿವಾಜಿ ಪ್ರತಿಮೆ ಎದುರು ನಿಂತು ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಆ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪಾಲಿಟಿಕ್ಸ್‌ಗೆ ನಾಡದ್ರೋಹಿ ಎಂಇಎಸ್ ಎಂಟ್ರಿಕೊಟ್ಟಿದೆ. ಎರಡು‌ಬಾರಿ ಪುತ್ಥಳಿ ಉದ್ಘಾಟಿಸಿ ಕಾಂಗ್ರೆಸ್, ಬಿಜೆಪಿ ನಾಯಕರು ಛತ್ರಪತಿ ಶಿವಾಜಿ ಮಹಾರಾಜರಿಗೆ ಅಪಮಾನ ಮಾಡಿದ್ದಾರೆ ‌ಎಂದು‌ ಆರೋಪಿಸಿರುವ ಎಂಇಎಸ್ ಮಾರ್ಚ್ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಶುದ್ಧೀಕರಣಕ್ಕೆ ಮುಂದಾಗಿದೆ.

Check Also

ಬೆಳಗಾವಿಯ ಎಂಇಎಸ್ ಪುಂಡಾಟಿಕೆ ಮಹಾರಾಷ್ಟ್ರದ ಕೊಲ್ಹಾಪೂರಕ್ಕೆ ಶಿಪ್ಟ್…!!

ಬೆಳಗಾವಿ- ಬೆಳಗಾವಿಯ ಸುವರ್ಣವಿಧಾನಸೌಧ ದಲ್ಲಿ ಡಿಸೆಂಬರ್ 19 ರಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶ ನಡೆಯುತ್ತಿದ್ದು, ಇದನ್ನು ಸಹಿಸಲಾಗದ ನಾಡದ್ರೋಹಿ ಎಂಇಎಸ್ …

Leave a Reply

Your email address will not be published. Required fields are marked *