Breaking News
Home / Uncategorized / ಬಿಜೆಪಿ ಅಭಿವೃದ್ಧಿಯ ಸಾಧನೆಯ ಎದುರು ಕಾಂಗ್ರೆಸ್ ಧೂಳಿಪಟ- ಡಾ. ಸೋನಾಲಿ

ಬಿಜೆಪಿ ಅಭಿವೃದ್ಧಿಯ ಸಾಧನೆಯ ಎದುರು ಕಾಂಗ್ರೆಸ್ ಧೂಳಿಪಟ- ಡಾ. ಸೋನಾಲಿ

ಬೆಳಗಾವಿ-ಮನೆ,ಮನೆಗೆ ನೀರು, ಊರು ಇದ್ದಲ್ಲಿ ಬೆಳಕು,ಪ್ರತಿಯೊಬ್ಬರಿಗೂ ಸೂರು,ಹಳ್ಳಿ,ಹಳ್ಳಿಗೂ ರಸ್ತೆ,ಹೀಗೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಸಾಧನೆಯ ಎದುರು,ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ ಆಗುವದು ನಿಶ್ಚಿತ ಎಂದು ಬೆಳಗಾವಿಯ ಬಿಜೆಪಿ ಮಹಿಳಾ ನಾಯಕಿ ಡಾ. ಸೋನಾಲಿ ಸರ್ನೋಬತ್ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ಮನೆ,ಮನೆಗೆ ತೆರಳಿ ಪ್ರಚಾರ ನಡೆಸಿರುವ ಡಾ. ಸೋನಾಲಿ ಸರ್ನೋಬತ್ ಕ್ರಾಂತಿನಗರ ಸೈನಿಕ ಕಾಲೋನಿಯಲ್ಲಿ ಪಾದಯಾತ್ರೆಯ ಮೂಲಕ ಮನೆ,ಮನೆಗೆ ತೆರಳಿ ಕೇಂದ್ರ,ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳ ಸಂಪೂರ್ಣ ಮಾಹಿತಿ ಹೊಂದಿರುವ ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಮತಯಾಚಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ,ಮುಖ್ಯಮಂತ್ರಿ ಯಡಿಯೂರಪ್ಪ ಅವರ,ಸರ್ವರಿಗೂ ಸಮಪಾಲು,ಸರ್ವರಿಗೂ ಸಮ ಬಾಳು ಎಂಬ ಸಿದ್ಧಾಂತದ ನಿರ್ಧಾರಗಳಿಗೆ ವ್ಯೆಕ್ತವಾಗುತ್ತಿರುವ ಜನಮೆಚ್ವುಗೆ ನೋಡಿ ಸಹಿಸಲಾಗದೇ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದು,ಮತದಾರರು ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸುತ್ತಾರೆ,ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಡಾ. ಸೋನಾಲಿ ಸರ್ನೋಬತ್ ವಿಶ್ವಾಸ ವ್ಯೆಕ್ತ ಪಡಿಸಿದರು.

ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ನಿರಂತರವಾಗಿ ಪ್ರಚಾರ ನಡೆಸುತ್ತಿರುವ ಡಾ. ಸೋನಾಲಿ,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿಭಿನ್ನ ರೀತಿಯ ಪ್ರಚಾರದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Check Also

ಉಲ್ಟಾ ಹೊಡೆದ ಸಿಡಿ ಲೇಡಿ, ಪ್ರಕರಣ ಊಲ್ಟಾ ಪಲ್ಟಾ….!!!

ಬೆಳಗಾವಿ : ಸಿಡಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸಿಡಿಯಲ್ಲಿ ಇದ್ದಾಳೆ ಎನ್ನಲಾದ ಯುವತಿ ಎಸ್ ಐ ಟಿ ತನಿಖೆ …

Leave a Reply

Your email address will not be published. Required fields are marked *