Home / Breaking News / ವಿಧಾನಸಭೆಯಲ್ಲಿ ಒಂದು ಬಾರಿಯೂ ಧ್ವನಿ ಎತ್ತದವರು,ಪಾರ್ಲಿಮೆಂಟ್ ನಲ್ಲಿ ಧ್ವನಿ ಎತ್ತುತ್ತಾರಾ..?

ವಿಧಾನಸಭೆಯಲ್ಲಿ ಒಂದು ಬಾರಿಯೂ ಧ್ವನಿ ಎತ್ತದವರು,ಪಾರ್ಲಿಮೆಂಟ್ ನಲ್ಲಿ ಧ್ವನಿ ಎತ್ತುತ್ತಾರಾ..?

ಬೆಳಗಾವಿ-ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಕುರಿತು ಸಿದ್ದರಾಮಯ್ಯನವರು ಅನಾನುಭವಿ ಎಂದು ಹೇಳಿಕೆ ನೀಡಿರುವದಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತೀವ್ರ ಆಕ್ಷೇಪ ವ್ಯೆಕ್ತ ಪಡಿಸಿದ್ದು ಸಿದ್ರಾಮಯ್ಯ ಈ ಕುರಿತು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಸಿದ್ದರಾಮಯ್ಯ ಮಾತನಾಡುವ ಭರದಲ್ಲಿ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ,ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ಆಕ್ರೋಶ ವ್ಯೆಕ್ತಪಡಿಸಿದ್ದುಮಹಿಳೆಯರಿಗೆ ಅಪಮಾನ ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದು,ಇದು ಕಾಂಗ್ರೆಸ್ ಮುಖವನ್ನು ತೋರಿಸುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ.ಎಂದು ಜಗದೀಶ್ ಶೆಟ್ಟರ್ ಸಿದ್ರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಅನಾನುಭವಿ ಮಹಿಳೆ ಸಂಸತ್‌ಗೆ ಹೋಗಿ ಏನ್ ಮಾಡಲು ಸಾಧ್ಯ ಅಂತಾ ಸಿದ್ರಾಮಯ್ಯ ಪ್ರಶ್ನೆ ಕೇಳಿದ್ದಾರೆ, ಇಡೀ ದೇಶದ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಸೋನಿಯಾ ಗಾಂಧಿಗೆ ಏನ್ ಅನುಭವ ಇತ್ತು?, ನೆಹರು ನಿಧನ ಬಳಿಕ ಯಾವುದೇ ಅನುಭವ ಇಲ್ಲದ ಇಂದಿರಾ ಗಾಂಧಿ ಪ್ರಧಾನಿ ಆಗಲು ಸಾಧ್ಯ,ಮಹಿಳೆಯರ ಸಾಮರ್ಥ್ಯ ಬಗ್ಗೆ ರಾಣಿ ಚನ್ನಮ್ಮ ನಾಡಿನಲ್ಲಿ ಪ್ರಶ್ನಿಸಿದ್ದಾರೆ.ಮಹಿಳೆಯರ ಮೇಲಿನ ಇವರ ಭಾವನೆ ವ್ಯಕ್ತಪಡಿಸಿದ್ದಾರೆ,ಸಿದ್ರಾಮಯ್ಯ ರಾಣಿ ಚನ್ಬಮ್ಮ ನಾಡಿನ ಮಹಿಳೆಗೆ ಅವಮಾನ ಮಾಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಸಿದ್ರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಏನು ಅನುಭವ ಇದೆ, ಸತೀಶ್ ಎರಡು ಬಾರಿ ಎಂಎಲ್‌ಸಿ, ಮೂರು ಬಾರಿ ಎಂಎಲ್‌ಎ ಆಗಿದ್ದಾರಲ್ಲ, ಕರ್ನಾಟಕ ವಿಧಾನಸಭೆಯಲ್ಲಿ ಒಂದು ದಿನವಾದರೂ ಧ್ವನಿ ಎತ್ತಿದ್ದಾರಾ ಕರ್ನಾಟಕದ ವಿಧಾನಸಭೆಯಲ್ಲಿ ಒಂದು ಬಾರಿಯೂ ಧ್ವನಿ ಎತ್ತದವರು ಪಾರ್ಲಿಮೆಂಟ್‌ನಲ್ಲಿ ಏನು ಧ್ವನಿ ಎತ್ತುತ್ತಾರೆ? ಬೆಳಗಾವಿ ಅಭಿವೃದ್ಧಿ ಬಗ್ಗೆ ಸತೀಶ್ ಜಾರಕಿಹೊಳಿ‌ ಎಷ್ಟು ಧ್ವನಿ ಎತ್ತಿದ್ದಾರೆ? ಈಎಲ್ಲ  ಪ್ರಶ್ನೆಗಳನ್ನು ಸಿದ್ದರಾಮಯ್ಯರನ್ನ ಕೇಳಿದ್ರೆ ಯಾರು ಅನಾನುಭವಿ ಗೊತ್ತಾಗುತ್ತೆ ಎಂದು ಜಗದೀಶ್ ಶೆಟ್ಟರ್ ಸಿದ್ರಾಮಯ್ಯ ನವರಿಗೆ ಸವಾಲು ಹಾಕಿದ್ದಾರೆ.

ಕಾಂಗ್ರೆಸ್‌ನವರು ಬೊಗಳೆ ಬೀಡುವ ಕೆಲಸ ಮಾಡ್ತಿದ್ದಾರೆ,ಈ ಭಾಗದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ,ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಅಪಮಾನ ಮಾಡಿದ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ಸಿದ್ರಾಮಯ್ಯ ವಿರುದ್ಧ  ಕಟೀಲು ಕಿಡಿ….

ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಕುರಿತು ಮಾಜಿ ಸಿಎಂ ಸಿದ್ರಾಮಯ್ಯ ಅನಾನುಭವಿ ಮಹಿಳೆ ಎಂದು ಹೇಳಿಕೆ ನೀಡಿರುವದಕ್ಕೆ ಬಿಜೆಪಿ ರಾಜ್ಯಾದ್ಯಕ್ಷ ನಳೀನ ಕುಮಾರ್ ಕಟೀಲು ತೀವ್ತ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ.

ನಿನ್ನೆ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಸಭೆ ಮಾಡಿ ಎರಡು ಹೇಳಿಕೆ ಕೊಟ್ಟಿದ್ದಾರೆ, ಅನಾನುಭವಿ ಹೆಣ್ಣುಮಕ್ಕಳಿಂದ ಏನು ಸಾಧ್ಯ‌ ಅಂತಾ ಸಿದ್ದರಾಮಯ್ಯ ಕೇಳಿದ್ದಾರೆ, ಇವರಿಗೆ ಹೆಣ್ಣು ಮಕ್ಕಳ ಮೇಲಿರುವ ಗೌರವ ಜಗಜ್ಜಾಹೀರವಾಗಿದೆ. ಇದು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ ಎಂದ ನಳಿನ್‌ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ರಾಜೀವ್ ಗಾಂಧಿ ಪ್ರೀತಿ ಮಾಡಿ ಮದುವೆಯಾಗಿರುವ ಸೋನಿಯಾ ಗಾಂಧಿಗೆ ಕಾಂಗ್ರೆಸ್ ಪಕ್ಷ ನಡೆಸಲು ಸಾಧ್ಯವಿದ್ರೆ, ಸೋನಿಯಾ ಗಾಂಧಿ ಹೊಟ್ಟೆಯಲ್ಲಿ ಹುಟ್ಟಿದ್ದೇನೆ ಅಂತಾ ರಾಷ್ಟ್ರ ‌ನಡೆಸಲು ಪ್ರಿಯಾಂಕಾ ಗಾಂಧಿ ರೆಡಿ ಇದ್ರೆ, ಮಂಗಲ ಅಂಗಡಿ ಇವರಿಬ್ಬರಿಗಿಂತ ಹೆಚ್ಚು ಅನುಭವಿ ಅಂತಾ ಸಿದ್ದರಾಮಯ್ಯ ತಿಳಿದುಕೊಳ್ಳಲಿ , ಸುರೇಶ್ ಅಂಗಡಿ ಧರ್ಮಪತ್ನಿ ಆಗಿ ಸಹೋದರಿ ಮಂಗಲಾ ಹಲವಾರು ವಿದ್ಯಾಸಂಸ್ಥೆ ನಡೆಸುತ್ತಿದ್ದಾರೆ. ಮಂಗಲ ಅಕ್ಕ ಹೆಚ್ಚು ಅನುಭವಿ ಎಂದು ನಳೀನಕುಮಾರ ಕಟೀಲು ಹೇಳಿದ್ದಾರೆ.

Check Also

ಪರಿಷತ್ತ ಚುನಾವಣೆಯಲ್ಲಿ ವೋಟ್ ಮಾಡುವದು ಹೇಗೆ ಇಲ್ಲಿದೆ ರೂಲ್ಸ್…!!!

ಬೆಳಗಾವಿ,- ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಮತಗಟ್ಟೆ ಏಜೆಂಟರುಗಳು ಚುನಾವಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಗೊಂದಲವಾಗದಂತೆ ನಿಯಮಾನುಸಾರ ಕಾರ್ಯನಿರ್ವಹಿಸಬೇಕು …

Leave a Reply

Your email address will not be published. Required fields are marked *