Breaking News

ದುರಂತ ನಡೆಯುವ ಮುನ್ನ ಜೆಸಿಬಿ ಬಂದು ಹೋಗಿತ್ತು….!!

ಬೀಮಪ್ಪ ಖನಗಾಂವಿ ಕುಟುಂಬ ವಾಸವಾಗಿದ್ದ ಶೆಡ್ ಇದು…‌‌‌

ಬೆಳಗಾವಿ- ವಿಧಿ ಹಿಗೂ ಆಟವಾಡುತ್ತಾ ಎಂದು ಊಹೆ ಮಾಡಲೂ ಸಾದ್ಯವಿಲ್ಲ ನಿನ್ನೆ ಸಂಜೆ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದ ಮನೆ ಕುಸಿದ ದುರಂತಕ್ಕೂ ಮುನ್ನ ನಡೆದ ಘಟನಾವಳಿಗಳನ್ನು ಗಮನಿಸಿದ್ರೆ ಅಯ್ಯೋ ದೇವಾ ನೀನು ಹೀಗೆ ಮಾಡಬಾರದಾಗಿತ್ತು ಎನ್ನುವ ಕೂಗು ಮನದಾಳದಿಂದ ಹೊರಬರುವದರಲ್ಲಿ ಸಂದೇಹವೇ ಇಲ್ಲ‌.

ರಣ ಭಯಂಕರ ಮಳೆಯಿಂದಾಗಿ ಮನೆ ಕುಸಿದು 7 ಜನ ಬಲಿಯಾದ ಘಟನೆ ಬಡಾಲ ಅಂಕಲಗಿಯಲ್ಲಿ ನಡೆಯಿತು.ಈ ದುರಂತದ ಹಿಂದಿರುವ ಕರಾಳ ಕಥೆಯನ್ನು ಕೇಳಿದ್ರೆ ಕರುಳು ಚುರ್ ಅನ್ನುತ್ತೆ.

ಬೀಮಪ್ಪ ಖನಗಾಂವಿ ಅವರಿಗೆ ಸೇರಿದ ಈ ಮನೆ ಶಿಥಿಲಗೊಂಡಿತ್ತು,ಮನೆ ಯಾವಾಗಲೂ ಬೀಳಬಹುದು ಎಂದು ಅವರಿಗೆ ಗೊತ್ತಿತ್ತು, ಈ ಮನೆಯನ್ನು ನೆಲಸಮ ಮಾಡಿ ಮನೆ ಪುನರ್ ನಿರ್ಮಾಣ ಮಾಡಲು ಭೀಮಪ್ಪ ಖನಗಾಂವಿ ಅವರು ನಿರ್ದರಿಸಿ ಮನೆಯ ಪಕ್ಕದಲ್ಲಿ ಶೆಡ್ ನಿರ್ಮಿಸಿ ಅದೇ ಶೆಡ್ ನಲ್ಲಿ ಭೀಮಪ್ಪಾ ಖನಗಾಂವಿ ಕುಟುಂಬ ವಾಸವಾಗಿತ್ತು

ನಿನ್ನೆಯ ದಿನ ಬೆಳಿಗ್ಗೆ ಮನೆ ನೆಲಸಮ ಮಾಡಲು ಜೆಸಿಬಿ ಬಂದಿತ್ತು ಆದ್ರೆ ನಿನ್ನೆಯ ದಿನ ಮಹಾಲಯ ಅಮವಾಸ್ಯೆ ಇದೆ,ಇವತ್ತು ಮನೆ ಕೆಡುವುದು ಬೇಡ ಎಂದು ಬಂದ ಜೆಸಿಬಿಯನ್ನು ವಾಪಸ್ ಕಳುಹಿಸಲಾಗಿತ್ತು.

ಭೀಮಪ್ಪಾ ಖನಗಾಂವಿ ಅವರ ಕುಟುಂಬ ಮನೆಯ ಪಕ್ಕದಲ್ಲಿ ನಿರ್ಮಿಸಿದ ಶೆಡ್ ನಲ್ಲಿಯೇ ವಾಸವಾಗಿತ್ತು.ನಿನ್ನೆ ಮದ್ಯಾಹ್ನದಿಂದ ಶುರುವಾಗಿದ್ದ ರಣಭಯಂಕರ ಮಳೆ ನಿಂತಿರಲಿಲ್ಲ.ಸಂಜೆ ಭೀಮಪ್ಪಾ ಖನಗಾಂವಿ ನವರಾತ್ರಿಯ ಪೂಜೆಗಾಗಿ ಸಾಮುಗ್ರಿ ತರಲು ಅಂಗಡಿಗೆ ಹೋಗಿದ್ದ,ಇದೇ ಸಂಧರ್ಭದಲ್ಲಿ ಮನೆಯ ಗೋಡೆ ಕುಸಿದ ಶಬ್ದ ಕೇಳಿ ಬಂದಿದ್ದರಿಂದ ಶೆಡ್ ನಲ್ಲಿದ್ದ ಖನಗಾಂವಿ ಕುಟುಂಬ ಶೆಡ್ ಬಿಟ್ಟು ಹೊರಬಂದು ನೋಡುವಷ್ಟರಲ್ಲಿ ಇಡೀ ಮನೆಯೇ ಕುಸಿದು ಬಿತ್ತು,ಗೋಡೆ ಬಿದ್ದಿರುವದನ್ನು ನೋಡಲು ಬಂದ 7 ಜನ ಜೀವಂತ ಸಮಾಧಿಯಾಗಿದ್ದರು.
ಭೀಮಪ್ಪ ಖನಗಾಂವಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ವಿಧಿಯ ಆಟ ಮುಗಿದಿತ್ತು‌‌.

ಅಭ್ಯಾಸ ಮಾಡಲು ಗೆಳತಿಯ ಮನೆಗೆ ಬಂದ ಪುಟ್ಟಿಯೂ ಬದುಕಲಿಲ್ಲ..

ಭೀಮಪ್ಪಾ ಖನಗಾಂವಿ ಅವರ ಮನೆಯಲ್ಲಿ ಗೆಳತಿಯ ಜೊತೆ ಅಭ್ಯಾಸ ಮಾಡಲು ಬಂದ 8 ವರ್ಷದ, ಎದರು ಮನೆಯ ಕಾಶವ್ವ ಕೂಡಾ ಇದೇ ದುರಂತದಲ್ಲಿ ಸಾವನ್ನೊಪ್ಪಿರುವದು ದುರ್ದೈವದ ಸಂಗತಿ‌.

ನಿನ್ನೆ ಸಂಜೆ ಕಾಶವ್ಬ ತನ್ನ ಮನೆಯಲ್ಲಿ ಅಭ್ಯಾಸ ಮಾಡುತ್ತಿರುವಾಗ ಕರೆಂಟ್ ಹೋಗುತ್ತದೆ.ಕರೆಂಟ್ ಬಂದ್ಮೇಲೆ ಓದೋಣ ಅಂತಾ ಕಾಶವ್ವ ಎದುರು ಮನೆಯ ಗೆಳತಿಯನ್ನು ಭೇಟಿಯಾಗಲು ಹೋಗುತ್ತಾಳೆ ಇದೇ ಸಂಧರ್ಭದಲ್ಲಿ ಅವಘಡ ನಡೆದಿರುತ್ತದೆ‌. ಮನೆ ಕುಸಿದು ಜನ ಸತ್ತಿದ್ದಾರೆ ಎಂದು ಗಲ್ಲಿಯ ಜನ ಸೇರ್ತಾರೆ ಕಾಶವ್ಬನ ತಂದೆಯೂ ಅಲ್ಲಿ ಹೋಗಿ ಶವಗಳನ್ನು ಹೊರ ತೆಗೆಯುತ್ತಿರುವಾಗ ಕಾಶವ್ವನ ಶವವನ್ನು ನೋಡಿ ಇವಳ ತಂದೆ ರೋಧಿಸಿದಾಗಲೇ ಈ ದುರಂತದಲ್ಲಿ ನಮ್ಮ ಮನೆಯ ಮಗಳು ಮೃತಪಟ್ಟಿದ್ದಾಳೆ ಎಂದು ಕಾಶವ್ವನ ಕುಟುಂಬದವರಿಗೆ ಗೊತ್ತಾಗುತ್ತದೆ.ಅಲ್ಲಿಯವರೆಗೂ ಕಾಶವ್ವ ಅಲ್ಲಿಗೆ ಹೋಗಿರುವ ವಿಷಯ ಅವರ ಕುಟುಂಬದವರಿಗೆ ಗೊತ್ತೇ ಇರಲಿಲ್ಲ.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.