Breaking News
Home / Breaking News / ಬಡಾಲ ಅಂಕಲಗಿ ದುರಂತ. ಒಟ್ಟು 7 ಜನರ ಸಾವು

ಬಡಾಲ ಅಂಕಲಗಿ ದುರಂತ. ಒಟ್ಟು 7 ಜನರ ಸಾವು

ಬೆಳಗಾವಿ- ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಒಟ್ಟು 7 ಜನರು ಸಾವನ್ನೊಪ್ಪಿದ್ದಾರೆ.

ಮಳೆಯಂದಾಗಿ ಮನೆ ಕುಸಿದು ಒಂದೇ ಕುಟುಂಬದ ಐದು ಜನ ಸ್ಥಳದಲ್ಲೇ ಸಾವನ್ನಪಪ್ಪಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಇಬ್ಬರು ಮರಣ ಹೊಂದಿದ್ದಾರೆ.

ಬಡಾಲ ಅಂಕಲಗಿ ಗ್ರಾಮದ ಒಂದೇ ಕುಟುಂಬದ ಅರ್ಜುನ ಹನಮಂತ ಖನಗಾಂವಿ (48), ಪತ್ನಿ ಸತ್ಯವ್ವ ಅರ್ಜುನ ಖನಗಾಂವಿ (45), ಪುತ್ರಿಯರಾದ ಲಕ್ಷ್ಮೀ ಅರ್ಜುನ ಖನಗಾಂವಿ (17), ಪೂಜಾ ಅರ್ಜುನ ಖನಗಾಂವಿ (8), ಗಂಗವ್ವ ಭೀಮಪ್ಪ ಖನಗಾಂವಿ(50), ಸವಿತಾ ಭೀಮಪ್ಪ ಖನಗಾಂವಿ (22), ಕಾಶವ್ವ ವಿಠ್ಠಲ ಕೊಳೆಪ್ಪನವರ (8) ಮೃತರು ಎಂದು ದೃಡಪಟ್ಟಿದೆ.

ಸ್ಥಳಕ್ಕೆ ಹಿರೇಬಾಗೇವಾಡಿ ಪೋಲೀಸರು ದೌಡಾಯಿಸಿ ತೆರವು ಕಾರ್ಯಾಚರಣೆ ಆಭಿಸಿದ್ದಾರೆ,ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

Check Also

ಬೆಳಗಾವಿ ಬುಡಾಗೆ ಸಂಜಯ ಬೆಳಗಾಂವಕರ, ಯಡಿಯೂರಪ್ಪ ಆಪ್ತ ಹೊಸಮನಿಗೆ ಶಾಕ್…!!!

ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಂಜಯ ಬೆಳಗಾಂವಕರ ಇಂದು ಮದ್ಯಾಹ್ನ ದಿಢೀರ್‌ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗಾವಿ ಬುಡಾದಲ್ಲಿ ಘೂಳಪ್ಪ …

Leave a Reply

Your email address will not be published. Required fields are marked *