Breaking News

ಅಧಿವೇಶನದ ದಿನವೇ, ಬೆಳಗಾವಿಯಲ್ಲಿ ಎಂಇಎಸ್ ನಿಂದ ಮರಾಠಿ ಮೇಳಾವ್…!!

ಬೆಳಗಾವಿ- ಡಿಸೆಂಬರ್ 19 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅಧಿವೇಶನಕ್ಕೆ ಪ್ರತಿಯಾಗಿ ನಾಡದ್ರೋಹಿ ಎಂಇಎಸ್ ಮರಾಠಿ ಮಹಾ ಮೇಳಾವ್ ನಡೆಸಲು ನಿರ್ಧರಿಸಿದೆ.

ಡಿಸೆಂಬರ್ 19 ರಂದು ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ ಮರಾಠಿ ಮೇಳಾವ್ ನಡೆಸಲು ಅನುಮತಿ ನೀಡುವಂತೆ ಎಂಇಎಸ್ ನಗರ ಪೋಲೀಸ್ ಆಯುಕ್ತರು ಮತ್ತು ಜಿಲ್ಲಾ ಅಧಿಕಾರ ಗಳಿಗೆ ಮನವಿ ಅರ್ಪಿಸಿದೆ.

ಡಿಸೆಂಬರ್‌ 19 ರಂದು ಅಧಿವೇಶನದ ಮೊದಲ ದಿನವೇ ಬೆಳಗಾವಿಯಲ್ಲಿ ಮರಾಠಿ ಮೇಳಾವ್ ನಡೆಸಲು ಎಂಇಎಸ್ ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು ಈ ಮೇಳಾವ್ ದಲ್ಲಿ ಭಾಗವಹಿಸಲು ಉದ್ಧವ ಠಾಕ್ರೆ ಸೇರಿದಂತೆ ಮಹಾರಾಷ್ಟ್ರದ ಒಟ್ಟು ಹತ್ತು ಜನ ನಾಯಕರಿಗೆ ಆಮಂತ್ರಣ ನೀಡಿದೆ.

ಶರದ್ ಪವಾರ್, ಉದ್ಧವ ಠಾಕ್ರೆ ಹಾಗೂ ಶಿವಸೇನೆಯ ಎರಡು ಬಣಗಳಿಂದ ತಲಾ ಇಬ್ಬರು, ಕಾಂಗ್ರೆಸ್,ಬಿಜೆಪಿ,ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಗಳಿಂದ ತಲಾ ಇಬ್ಬರು ನಾಯಕರನ್ನು ಬೆಳಗಾವಿಯ ಮರಾಠಿ ಮೇಳಾವ್ ಗೆ ಕಳುಹಿಸುವಂತೆ ಬೆಳಗಾವಿಯ ಎಂಇಎಸ್ ನಾಯಕರು ಪತ್ರ ಬರೆದಿದ್ದಾರೆ.

ರಾಜ್ಯೋತ್ಸವದ ದಿನವೇ ಕರಾಳ ದಿನಾಚರಣೆ ಆಚರಿಸಲು ನಾಡದ್ರೋಹಿ ಎಂಇಎಸ್ ಗೆ ಅನುಮತಿ ನೀಡುವ ನಮ್ಮ ಸರ್ಕಾರ ಅಧಿವೇಶನದ ದಿನ ಮರಾಠಿ ಮೇಳಾವ್ ನಡೆಸಲು ಅನುಮತಿ ನೀಡುವದರಲ್ಲಿ ಸಂಶಯವೇ ಇಲ್ಲ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *