Breaking News

ಇಂದು ರಾಷ್ಟ್ರೀಕೃತ ಬ್ಯಾಂಕ್ ಬಂದ್,ಪ್ರತಿಭಟನೆ.

ಬೆಳಗಾವಿ- ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳು ಮುಷ್ಕರ ಹೂಡಿದ್ದು ಮಂಗಳವಾರ ಬೆಳಗಾವಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಮಿಕರು ಬೆಳಗಾವಿ ನಗರದಲ್ಲಿ ಬೃಹತ್ ಪ್ತತುಭಟನಾ ರ್ಯಾಲಿಯನ್ನು ಹೊರಡಿಸಿದ್ದರು

ಬ್ಯಾಂಕ್ ಬಂದ್ ಮಾಡಿ ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಂಡ ಬ್ಯಾಂಕ ಕಾರ್ಮಿಕರು ಇಂಡಿ ಕೂಟ ಖಡೇಬಝಾರ,ಗಣಪತಿ ಗಲ್ಲಿ ಮೂಲಕ ಸಂಚರಿಸಿ ಮಾರುತಿ ಗಲ್ಲಿಯ ಸಿಂಡಿಕೇಟ್ ಬ್ಯಾಂಕ್ ಬಳಿ ರ್ಯಾಲಿಯನ್ನು ಸಮಾರೋಪ ಮಾಡಿದರು

ದೇಶದಲ್ಲಿ 500/1000  ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿದ ಸಂಧರ್ಭದಲ್ಲಿ ಬ್ಯಾಂಕುಗಳು ಲಜ್ಷಾಂತರ ರೂ ಹಣ ಖರ್ಚು ಮಾಡಿದ್ದು ಈ ಹಣವನ್ನು ಕೇಂದ್ರ ಸರ್ಕಾರ ಕೂಡಲೇ ಪಾವತಿ ಮಾಡಬೇಕು ನೋಟು ರದ್ದತಿಯ ಸಮಯದಲ್ಲಿ ಬ್ಯಾಂಕ್ ಸಿಬ್ಬಂಧಿಗಳು ಹಗಲು ರಾತ್ರಿ ಶ್ರಮಿಸಿದ್ದು ಅವರಿಗೆ ವಿಶೇಷ ಭತ್ಯೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು

ಹಲವಾರು ವರ್ಷಗಳಿಂದ ಬ್ಯಾಂಕುಗಳಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಬೇಕು ದೇಶದ ಕೆಲವು ಉದ್ಯಮಿಗಳು ಮತ್ತು VIP ಗಳು ಬ್ಯಾಂಕುಗಳಿಂದ ಕೋಟ್ಯಾಂತರ ರೂ ಸಾಲ ಪಡೆದು ಸಾಲ ಮರು ಪಾವತಿ ಮಾಡದೇ ಸತಾಯಿಸುತ್ತಿದ್ದು ಈ ಸಾಲವನ್ನು ಕೇಂದ್ರ ಸರ್ಕಾರ ರಿಕವರಿ ಮಾಡುವದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ರಾಯ ಮಾಡಲಾಯಿತು

Check Also

ಎಸ್ ಎಂ ಕೃಷ್ಣ ನಿಧನ, ನಾಳೆ ಸರ್ಕಾರಿ ರಜೆ ಘೋಷಣೆ,

ಎಸ್​ಎಂ ಕೃಷ್ಣ ನಿಧನ: ರಾಜ್ಯದಲ್ಲಿ 3 ದಿನ ಶೋಕಾಚರಣೆ; ನಾಳೆ ಸರ್ಕಾರಿ ರಜೆ ಘೋಷಣೆ, ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ …

Leave a Reply

Your email address will not be published. Required fields are marked *