Breaking News

ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..

ಬೆಳಗಾವಿ- ಸೋಮವಾರ ಭಾರತ ಬಂದ್ ಆಕ್ರೋಶದ ದಿನ ಆದರೆ ಸಾರ್ವಜನಿಕರಲ್ಲಿ ಆಕ್ರೋಶ ಕಾಣುತ್ರಿಲ್ಲ ಬಂದ್ ಗೆ ಸರ್ಕಾರ ಪರೋಕ್ಷವಾಗಿ ಬೆಂಬಲ ಸೂಚಿಸಿದೆ ಆದರೆ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಅಂತ ಜಿಲ್ಲಾಧಿಕಾರಿ ಎನ್ ಜೈರಾಮ ತಿಳಿಸಿದ್ದಾರೆ

ಭಾರತ ಬಂದ್ ಗೆ ಸಹಕಾರಿ ಕ್ಷೇತ್ರ ಮಾತ್ರ ಬೆಂಬಲ ಸೂಚಿಸಿದೆ ಭಾಗಶ ಬಸ್ ಗಳ ಓಡಾಟ ನಿಲ್ಲುವ ಸಾಧ್ಯತೆ  ಇದೆ ಎಂದಿನಂತೆ ರಿಕ್ಷಾಗಳು ಓಡಾಡಲಿವೆ ನಗರದ ವರ್ತಕರು ಬಂದ್ ಗೆ ಬಹಿರಂಗ ಬೆಂಬಲ ಸೂಚಿಸಿಲ್ಲ ಹೀಗಾಗಿ ನಗರದಲ್ಲಿ ಬಂದ್ ಯಶಸ್ವಿಯಾಗುವ ಯಾವದೇ ಲಕ್ಷಣಗಳು ಕಾಣುತ್ತಿಲ್ಲ

ಕಾಂಗ್ರೆಸ್ ನಾಯಕರು ಬಂದ್ ಯಶಸ್ವುಗೊಳಿಸಲು ತಯಾರಿ ಮಾಡಿಕೊಂಡಿದ್ದಾರೆ ಇನ್ನೊಂದೆಡೆ ಬಿಜೆಪಿ ಬಂದ್ ಗೆ ಬೆಂಬಲ ನೀಡದೇ ಮೋದಿ ಕ್ರಮಕ್ಕೆ ಬೆಂಬಲ ಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ತಾಪಕ ಪ್ರಚಾರ ನಡೆಸಿದೆ

ಸೋಮವಾರದ ಭಾರತ ಬಂದ್ ಕಾಂಗ್ರೆಸ್ ಹಾಗು ಬಿಜೆಪಿ ನಡುವಿಣ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿವೆ ಕೆಲವರು ಒತ್ರಾಯ ಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಲು ಮುಂದಾಗಬಹುದು ಇನ್ನು ಕೆಲವರು ಅಂಗಡಿಗಳನ್ನು ಬಂದ್ ಮಾಡದಂತೆ ಅಂಗಡಿಕಾರರ ಮೇಲೆ ಒತ್ತಡ ಹೇರುವ ಪರಿಸ್ಥಿತಿ ಎದುರಾಗುವ ಸಾದ್ಯತೆಗಳು ಹೆಚ್ಚಾಗಿವೆ

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *