Breaking News

ಬೆಳಗಾವಿಯಲ್ಲಿ ರಣಜಿ ಪಂದ್ಯಕ್ಕೆ ದಿನಗಣನೆ.ಮೈದಾನದಲ್ಲಿ ಪ್ರ್ಯಾಕ್ಟೀಸ್ ಆರಂಭ

ಬೆಳಗಾವಿ: ಇಲ್ಲಿನ ಆಟೊನಗರದ ಕೆಎಸ್‍ಸಿಎ ಮೈದಾನದಲ್ಲಿ ನ. 29ರಿಂದ ಡಿ. 2ರವರೆಗೆ ನಡೆಯುವ ರಣಜಿ ಪಂದ್ಯಕ್ಕೆ ದಿನಗಣನೇ ಆರಂಭವಾಗಿದ್ದು, 17 ವರ್ಷದ ಬಳಿಕ ಕುಂದಾನಗರಿಯಲ್ಲಿ ನಡೆಯುತ್ತಿರುವ ಪಂದ್ಯ ಯಶಸ್ಸುಗೊಳಿಸಲು ಧಾರವಾಡ ವಲಯದ ಕೆಎಸ್‍ಸಿಎ ಪದಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಪ್ರಥಮ ದರ್ಜೆಯ ಪಂದ್ಯ ನಡೆಯುತ್ತಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಎಸ್‍ಸಿಎ ನೂತನ ಮೈದಾನದಲ್ಲಿ ಚೊಚ್ಚಲ ಪಂದ್ಯದಲ್ಲಿ ಗುಜರಾತ್-ಪಂಜಾಬ್ ತಂಡಗಳು ಸೆಣಸಾಟ ನಡೆಸಲಿವೆ. ಥರ್ಡ್ ಅಂಪಾಯರ್‍ಗೆ ಅನುಕೂಲವಾಗಲೆಂದು ಪಂದ್ಯದ ವೇಳೆ 6 ಕ್ಯಾಮೆರಾ ಅಳವಡಿಸಲಾಗಿದೆ. 5 ಸಾವಿರ ಜನರ ಸಾಮಥ್ರ್ಯದ ಪಬ್ಲಿಕ್ ಗ್ಯಾಲರಿ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. ಭಾನುವಾರ ಉಭಯ ತಂಡಗಳು ಮೈದಾನಕ್ಕೆ ಆಗಮಿಸಿ ಕಠಿಣ ಅಭ್ಯಾಸ ನಡೆಸಿದರು. ಪ್ರಸಕ್ತ ಸಾಲಿನ ರಣಜಿ ಟೂರ್ನಿಯ ಎರಡು ಪಂದ್ಯಗಳು ಬೆಳಗಾವಿಯಲ್ಲಿ ನಡೆಯುತ್ತಿರುವುದು ಈ ಭಾಗದ ಕ್ರಿಕೆಟ್ ಜನಪ್ರಿಯತೆಗೆ ನೆರವಾಗಲಿದೆ ಎಂದು ರೂವಾರಿ ಅವಿನಾಶ ಪೋತದಾರ ತಿಳಿಸಿದ್ದಾರೆ

ಡಿ. 7ರಿಂದ 10ರವರೆಗೆ ಗುಜರಾತ್-ತಮಿಳುನಾಡು ತಂಡಗಳ ನಡುವೆ ಪಂದ್ಯ ನಡೆಯಲಿದೆ. ಕೆಎಸ್‍ಸಿಎಯಿಂದ ಆಟೊನಗರದಲ್ಲಿ  ಸುಸಜ್ಜಿತ ಮೈದಾನ ನಿರ್ಮಿಸಲಾಗಿದ್ದು, ಎರಡೂ ಪಂದ್ಯಗಳ ವೀಕ್ಷಣೆಗೆ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಆಗಮಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ತಂಡದ ಪರ ಈಗಾಗಲೇ ಆಡಿರುವ ಜಸ್‍ಪ್ರಿತ್ ಬುಮ್ರಾ, ಆರ್.ಪಿ. ಸಿಂಗ್, ಮನದೀಪ್ ಸಿಂಗ್, ಸಂದೀಪ ಶರ್ಮಾ, ಅಕ್ಷರ ಪಟೇಲ್ ಸೇರಿದಂತೆ ಅನೇಕ ಆಟಗಾರರು ಉಭಯ ತಂಡದಲ್ಲಿದ್ದಾರೆ. ಹೀಗಾಗಿ ಸ್ಟಾರ್ ಬ್ಯಾಟ್ಸ್‍ಮನ್‍ಗಳನ್ನು ತಮ್ಮ ಊರಿನಲ್ಲಿ ಕಣ್ತುಂಬಿಕೊಳ್ಳಲು ಕುಂದಾನಗರಿ ಕ್ರಿಕೆಟ್ ಪ್ರೇಮಿಗಳು ಉತ್ಸುಕರಾಗಿದ್ದಾರೆ. ಪ್ರೇಕ್ಷಕರಿಗೆ ಅನುಕೂಲ ಕಲ್ಪಿಸಲು ಉಪಹಾರ, ಟೀ ಸ್ಟಾಲ್ (ಶುಲ್ಕ ಸಹಿತ), ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯು ಎರಡೂ ಪಂದ್ಯಕ್ಕೆ ಉಚಿತ ಆರೋಗ್ಯ ಸೇವೆ ನೀಡುವುದಾಗಿ ಹೇಳಿದೆ. ಭಾನುವಾರದಿಂದ ನೆಟ್ ಪ್ರಾಕ್ಟಿಸ್ ನಡೆಯಲಿದ್ದು, ಅಭ್ಯಾಸದ ವೇಳೆಯೂ ಕೆಎಲ್‍ಇ ಸಂಸ್ಥೆಯ ಅಂಬುಲೆನ್ಸ್ ಹಾಗೂ ತಜ್ಞವೈದ್ಯರು ಕರ್ತವ್ಯ ನಿರ್ವಹಿಸಲಿದ್ದಾರೆ. ಅಲ್ಲದೇ ಉಭಯ ತಂಡಗಳ ಆಟಗಾರರು ಅಭ್ಯಾಸ ನಡೆಸುವ ವೇಳೆ ಸ್ಥಳೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಕ್ರಿಕೆಟ್ ಪಟುಗಳು ಬೌಲಿಂಗ್ ಮಾಡಲು ನೆರವಾಗಲಿದ್ದಾರೆ. ಹಿರಿಯ ಆಟಗಾರರಿಂದ ತಂತ್ರ, ಇನ್ನಿತರ ಕೌಶಲ ಪಡೆಯಲು ಯುವಕರಿಗೆ ಅನುಕೂಲವಾಗಲಿದೆ ಎಂದು   ಅವಿನಾಶ ಪೋತದಾರ ಹೇಳಿದರು

Check Also

ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ

ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.