ಬೆಳಗಾವಿ: ಸರಕಾರಿ ಬಿಮ್ಸ್ ಬಿಎಸ್ ಸಿ ನರ್ಸಿಂಗ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಿಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ನಿಲಯ ಬಿಡುಗಡೆಯಾಗಿದ್ದು, ಅದರ ಭೂಮಿ ಪೂಜೆಯನ್ನು ನೆರವೆರಿಸಲಾಗಿದೆ. 2016ರಲ್ಲಿಯೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಭೂಮಿ ಪೂಜೆಯಾಗಿದೆ. ಕಳೆದ ಮಂಗಳವಾರ ಹಾಸ್ಟೆಲ್ ಕಟ್ಟಡದ ಉದ್ಘಾಟನೆ ಮಾಡಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಗೃಹ ವೈದ್ಯರಿಗೆ ನೀಡಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರ್ಸಿಂಗ್ ಕಾಲೇಜು ಪ್ರಾರಂಭವಾಗಿ ಏಳು ವರ್ಷ ಕಳೆದರೂ ಸುಸಜ್ಜಿತವಾದ ಕಟ್ಟಡ, ಗ್ರಂಥಾಲಯ ಕೊರತೆ, ಶೌಚಾಲಯ, ಕುಡಿಯುವ ನೀರು, ವಿದ್ಯಾರ್ಥಿಗಳ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಯಿದ್ದರು. ಬಿಮ್ಸ್ ನಿರ್ದೇಶಕರು ನಮ್ಮ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಅನುದೀಪ ಕುಲಕರ್ಣಿ, ಭೀಮಸೇನ ಪಪ್ಪು, ರೋಹಿತ ಉಮನಾಬಾದಿಮಠ, ಸಚೀನ ಹಿರೇಮಠ, ಪೃದ್ವಿಕುಮಾರ, ಕಿಶೋರಿ ಪಾಟೀಲ, ದೀಪಾ ಸೇರಿದಂತೆ ಮೊದಲಾದವರು ಹಾಜರಿದ್ದರು.
