Breaking News

ಪರಿಷ್ಲೃತ ಮತದಾರರ ಯಾದಿ ಪ್ರಕಟ- ಡಿಸಿ ಬೊಮ್ಮನಹಳ್ಳಿ

ಬೆಳಗಾವಿ
ಮತದಾರ ತಿದ್ದುಪಡಿ ಹಾಗೂ ಪರಿಷ್ಕರಣೆಯಲ್ಲಿ ಮಹಿಳಾ ಹಾಗೂ ಪುರುಷರು ಸೇರಿ 3722034 ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ‌ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
2200 ಮತದಾರರ ಭಾವಚಿತ್ರ ಸಿಕ್ಕಿಲ್ಲ. ಇನ್ನೂ ನಮಗೆ ಕಾಲಾವಕಾಶವಿದೆ. ಅವರ ಭಾವ ಚಿತ್ರ ಸಂಗ್ರಹಿಸುವ ಕೆಲಸವನ್ನು ಮಾಡುತ್ತೇವೆ. 66901 ಹೊಸ‌ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದರು.
ಭಾರತದ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಸೂಚನೆ ಮೆರಗೆ 1-1-2019ರ ದಿನಾಂಕವನ್ನು ಆದರಿಸಿ ಭಾವಚಿತ್ರ ಇರುವ ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತು ವೇಳಾ ಪಟ್ಟಿ ಹೊರಡಿಸಿದ್ದರು. ಇದತ ಅನ್ವಯ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.
ಚುನಾವಣೆಯ ಸಂದರ್ಭದಲ್ಲಿ ಆಗುವ ಲೋಪಗಳನ್ನು ಈಗಲೇ ಕಂಡು ಹಿಡಿದು ಅವುಗಳನ್ನು ಇತ್ಯರ್ಥಪಡಿಸಿಕೊಂಡರೆ ಚುನಾವಣೆಯನ್ನು ಯಾವುದೇ ಲೋಪಗಳಿಲ್ಲದೆ ಜರುಗಿಸಲು ಸಾಧ್ಯವಾಗುತ್ತದೆ. ಮತದಾನದ ದಿನ ಈ ಸಂಬಂಧ ತಕರಾರು ಸಲ್ಲಿಸಿದ್ದಲ್ಲಿ ಅದರ ಮೇಲೆ ಕ್ರಮ ಜರುಗಿಸಲು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿ ಮತಗಟ್ಟೆಗೂ ಬೂತ್ ಲೆವಲ್ ಎಂಜೆಟರನ್ನು ನೇಮಕ ಮಾಡಲು ಮತ್ತೊಮ್ಮೆ ವಿನಂತಿಸಲಾಗಿದೆ ಎಂದು ಹೇಳಿದರು.
ಇದೇ ಅಂತಿಮ ಪಟ್ಟಿಯಲ್ಲಿ ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಇದರಲ್ಲಿ ತಿದ್ದುಪಡಿಯಿದ್ದಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರೆ ಅದನ್ನು ಸರಿಪಡಿಸಲಾಗುವುದು ಎಂದರು

8. ಸಕ್ಕರೆ ಕಾರ್ಖಾನೆಗಳು ರೈತರಿಗೆ ಹಣ ನೀಡಿರಲಿಲ್ಲ. ಜಿಲ್ಲಾಡಳಿತದಿಂದ ನೋಟಿಸ್ ನೀಡಿದ ಮೇಲೆ ಎಲ್ಲ ಕಾರ್ಖಾನೆಯವರು ಹಣ ಸಂದಾಯ ಮಾಡುತ್ತಿದ್ದಾರೆ.
ಸೌಭಾಗ್ಯ ಸಕ್ಕರೆ ಕಾರ್ಖಾನೆಯವರು ಎಷ್ಟು ಹಣ ನೀಡಬೇಕೆಂಬುವುದು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ರೈತರಿಗೆ ಎಫ್ ಆರ್ ಪಿ ದರದ ಪ್ರಕಾರ ರೈತರಿಗೆ ಹಣ ನೀಡಬೇಕೆಂದು ಸೂಚನೆ‌‌ ನೀಡಲಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.