ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದ ಕುರಿತು ಸುಪ್ರೀಂಕೋರ್ಟನಲ್ಲಿಂದು ವಿಚಾರಣೆಯೇ ನಡೆಯಲಿಲ್ಲ. ಗಡಿ ವಿವಾದ ಕೋರ್ಟ ವ್ಯಾಪ್ತಿಗೆ ಬರುತ್ತದೆಯೋ ? ಇಲ್ಲವೋ? ಎಂಬ ತೀರ್ಪು ಹೊರಬರುವ ನಿರೀಕ್ಷೆಹೊಂದಲಾಗಿತ್ತು. ಆದರೆ, ಈ ಪ್ರಕರಣದ ವಿಚಾರಣೆಗೆ ಬರಲಿಲ್ಲ.
ಕೋರ್ಟಕಲಾಪದ ಇಂದಿನ ಪಟ್ಟಿಯಲ್ಲಿ ಬೆಳಗಾವಿ ಗಡಿ ವಿವಾದ ಪ್ರಕರಣವೂ ಇತ್ತು. ಸಮಯದ ಅಭಾವದಿಂದ ಈ ಪ್ರಕರಣ ವಿಚಾರಣೆಗೆ ಬರಲಿಲ್ಲ. ಕರ್ನಾಟಕ ಸರ್ಕಾರ ಮೊದಲಿನಿಂದಲು ಗಡಿ ವಿವಾದ ಕೋರ್ಟ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಾದವನ್ನು ಮಂಡಿಸುತ್ತಲೇ ಬಂದಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ೨೦೦೪ರಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ ಮೊರೆ ಹೋಗಿದೆ.
೧೮ ವರ್ಷಗಳ ಬಳಿಕ ಬೆಳಗಾವಿ ಗಡಿ ವಿವಾದದ ಕುರಿತು ತೀರ್ಪು ಇಂದು ಹೊರಬರುವ ನಿರೀಕ್ಷೆ ಇತ್ತು. ಆದರೆ, ಈ ಪ್ರಕರಣದ ವಿಚಾರಣೆ ನಡೆಯಲಿಲ್ಲ. ತೀರ್ಪು ಪ್ರಕಟವಾಗಲಿಲ್ಲ. ಇದರಿಂದಾಗಿ ಸದ್ಯ ಗಡಿ ಜಿಲ್ಲೆಯ ಜನತೆ ನೆಮ್ಮದಿ ನಿಟ್ಟುಸಿರುವ ಬಿಟ್ಟಂತಾಗಿದೆ.
ಗಡಿ ವಿವಾದ ಪ್ರಕರಣದ ವಿಚಾರಣೆ ಮುಂದಿನವಾರ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬೆಳಗಾವಿ ಗಡಿ ವಿವಾದ ಏನಾಯ್ತು? ತೀರ್ಪು ಬಂತಾ? ತೀರ್ಪು ಕರ್ನಾಟಕದ ಪರ ಬಂತಾ? ಇಲ್ಲವೇ ಮಹಾರಾಷ್ಟ್ರ ಪರ ಬಂತಾ? ತೀರ್ಪು ಯಾವಾಗ ಪ್ರಕಟವಾಗುತ್ತದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿಲ್ಲ.
ಗಡಿ ವಿವಾದದ ಕುರಿತು ಸುಪ್ರೀಂಕೋರ್ಟನಲ್ಲಿ ವಾದ ಮಂಡಿಸಲು ರಚಿಸಲಾದ ವಕೀಲರ ತಂಡದ ಸದಸ್ಯರಿಗೆ ದೂರವಾಣಿ ಕರೆಗಳ ಸುರಿಮಳೆಯೇ ಹರಿದುಬಂದಿದೆಯಂತೆ. ಎಲ್ಲ ಕರೆಗಳು ಇಲ್ಲ ಎಂಬ ಉತ್ತರ ನೀಡಿ ನೀಡಿ ವಕೀಲರು ಸುಸ್ತಾಗಿದ್ದಾರಂತೆ.