ಬೆಳಗಾವಿ- ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದ ಬಜೆಟ್ ನಲ್ಲಿ ರಾಜ್ಯದಲ್ಲಿ ಹೊಸ ತಾಲ್ಲೂಕು ಗಳ ರಚನೆ ಮಾಡುವದಾಗಿ ಘೋಷಣೆ ಮಾಡಿದ್ದು ಈಗಾಗಲೇ ಹನ್ನೊಂದು ತಾಲ್ಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮೂರು ಹೊಸ ತಾಲ್ಲೂಕು ಗಳು ರಚನೆಯಾಗಲಿವೆ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ,ಕಾಗವಾಡ ಮತ್ತು ಮೂಡಲಗಿ ಮೂರು ತಾಲ್ಲೂಕು ಗಳು ಬಜೆಟ್ ನಲ್ಲಿ ಘೋಷಣೆಯಾಗಿದ್ದು ಬೆಳಗಾವಿ ಜಿಲ್ಲೆ ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ವಿಶೇಷ ಕೊಡುಗೆ ನೀಡಿಲ್ಲ ಆದರೆ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡದೇ ಜಿಲ್ಲೆಗೆ ಮತ್ತೆ ಮೂರು ಹೊಸ ತಾಲ್ಲೂಕು ಗಳನ್ನು ಘೋಷಣೆ ಮಾಡಿದ್ದಾರೆ
ರಾಜ್ಯದ ಗಡಿಯ ತುದಿಯಲ್ಲಿರುವ ನಿಪ್ಪಾಣಿಗೆ ತಾಲ್ಲೂಕಿನ ಸ್ಥಾನಮಾನ ಸಿಕ್ಕಿರುವದು ಸಂತಸದ ಸಂಗತಿಯಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ