Breaking News

ಶೇಖ್ ಕಾಲೇಜ್ ಕ್ಯಾಂಪಸ್ ನಲ್ಲಿ NTTF ಸೆಂಟರ್

ಬೆಳಗಾವಿ:15 ಶೇಖ ಸಮೂಹ ಸಂಸ್ಥೆಗಳ ಮತ್ತು ಎನ್ ಟಿಟಿಎಫ್ ಸಹಯೋಗದಲ್ಲಿ ಶೇಖ ಕ್ಯಾಂಪಸ್ ನಲ್ಲಿ ಎನ್ ಟಿಟಿಎಫ್ ಸೆಂಟರನ್ನು ಸ್ಥಾಪಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಮೆಕಾಟ್ರಾನಿಕ್ಸ್ ತರಬೇತಿಯನ್ನು ಪ್ರಾರಂಭಿಸಲಾಗುವುದು ಎಂದು ಶೇಖ ಸಂಸ್ಥೆಯ ಅಧ್ಯಕ್ಷ ಅಬು ಶೇಖ ಹೇಳಿದರು.
ಅವರು ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 1967ರಲ್ಲಿ ದಿ. ಡಾ. ಎ.ಎಮ್. ಶೇಖ ನೇತೃತ್ವದಲ್ಲಿ ಪ್ರಾರಂಭಿಸಲ್ಪಟ್ಟ ಎ.ಎಮ್.ಶೇಖ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪಯಣದಲ್ಲಿ ಸಾಕಷ್ಟು ವಿದ್ಯಾಥಿ೯ಗಳು ಶಿಕ್ಷಣವನ್ನು ಪಡೆದು ಸಮಾಜ ಸೇವೆಯಲ್ಲಿ ತೋಡಗಿಕೊಂಡಿದ್ದಾರೆ. ಶೇಖ ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ವೃತ್ತಿಪರವಾಗಿ ವದಗಿಸುತ್ತಾ ಬಂದಿದೆ ಎಂದರು.
ಶೇಖ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗುತ್ತಿದೆ‌. ಹೆಸರಾಂತ ಎನ್ ಟಿಟಿಎಫ್ ಸಂಸ್ಥೆ ಸಹಯೋಗದಲ್ಲಿ ಶೇಖ ಸಂಸ್ಥೆಯು ಪ್ರಸಕ್ತ ಶೈಕ್ಷಣಿಕ ವಷ೯ದಲ್ಲಿ ಡಿಪ್ಲೋಮಾ ಮೆಕಾಟ್ರಾನಿಕ್ಸ್ ಕೋಸ೯ನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.
ನಮ್ಮ ಸಂಸ್ಥೆ ಪ್ರಸ್ತುತ ನಸ೯ರಿಯಿಂದ ಸ್ನಾತಕೋತ್ತರ ಪದವಿ ವರೆಗಿನ ವಿವಿಧ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಸಂಸ್ಥೆಗಳನ್ನು ಹೊಂದಿದೆ ಎನ್ನುವುದು ಬೆಳಗಾವಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಮತ್ತು ಯಾವ ಪೀಳಿಗೆಯ ಉದ್ಯೋಗ ಕೌಶಲ್ಯಗಳನ್ನು ಉತ್ತೇಜಿಸುವ ನಿಟ್ಟಿನಿಂದ 1963ರಲ್ಲಿ ಪ್ರಾರಂಭಿಸಲ್ಪಟ ಎನ್ ಟಿಟಿಎಫ್ ಶೈಕ್ಷಣಿಕ ಅಡಿಪಾಯ ಇಂಡೋ ಸ್ವಿಸ್ ಸಹಕಾರದಲ್ಲಿ ಪ್ರಾರಂಭಿಸಲ್ಪಟ್ಟ ಸಂಕೇತವಾಗಿದೆ. ಇದು ಭಾರತ ಯುವ ಜನತೆಯ ತಾಂತ್ರಿಕ ಶಿಕ್ಷಣ ಉತ್ತೇಜಿಸುವ ನಿಟ್ಟಿನಲ್ಲಿ ಬರುವ ಏಫ್ರೀಲ್ 20 ರಿಂದ ನೆಹರೂನಗರದ ಶೇಖ ಶಿಕ್ಷಣ ಸಂಸ್ಥೆಗಳಲ್ಲಿ ಅಜಿ೯ಗಳನ್ನು ಸ್ವೀಕರಿಸಲಾಗುವುದು ಎಂದು ಅವರು ಹೇಳಿದರು.
ಈ ಸಂಸ್ಥೆಯು ಭಾರತದ ವಿವಿಧ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ತರಬೇತಿ ಕೇಂದ್ರಗಳ ಮೂಲಕ ತಾಂತ್ರಿಕ ತರಬೇತಿ ಕಾಯ೯ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ಎನ್ ಟಿಟಿಎಫ್ ಸಂಸ್ಥೆಯ ಉದ್ಯಮ ಸಂಸ್ಥೆಗಳ ಸಹಭಾಗಿತ್ವದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಉತ್ತಮ ಕೌಶಲ್ಯ ಭರಿತ ಮಾನವ ಸಂಪನ್ಮೂಲವನ್ನು ತಯಾರಿಸುವ ವಿಶೇಷ ಪ್ರಯತ್ನವಾಗಿದೆ. ಎನ್ ಟಿಟಿಎಫ್ ಐಎಸ್ ಓ 9001 ಪ್ರಮಾಣಿತ ಸಂಸ್ಥೆಯಾಗಿದೆ ಎಂದರು.
ಏನಿದು ಡಿಪ್ಲೋಮಾ ಮೆಕಾಟ್ರಾನಿಕ್ಸ್: ಇದು ಮೂರು ವಷ೯ಗಳ ಡಿಪ್ಲೋಮಾ ತರಬೇತಿಯಾಗಿದ್ದು, ತರಬೇತುದಾರರಿಗೆ ಸಂಪೂಣ೯ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಒಳ ಹರಿವು ಒದಗಿಸಿ ಅವರನ್ನು ಪರಿಣಿತ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಇದರಿಂದಾಗಿ ತರಬೇತುದಾರರು ಯಾವುದೇ ಸ್ವಯಂಚಾಲಿತ ಕೈಗಾರಿಕಾ ಕೌಶಲ್ಯಗಳನ್ನು ಪ್ರಾರಂಭಿಸಲು ಅನಕೂಲವಾಗುತ್ತದೆ ಎಂದರು.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.