ಬೆಳಗಾವಿ: ಉಳ್ಳಾಗಡ್ಡಿ ಬೆಲೆ ಹೆಚ್ಚಾಗಿದೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಉಳ್ಳಾಗಡ್ಡಿಗಾಗಿ ಮಾರಾಮಾರಿ ಎಂಬ ಜೋಕ್ ಗಳು ಹರಿದಾಡುತ್ತಿವೆ ಆದ್ರೆ ಬೆಳಗಾವಿಯಲ್ಲಿ ಬಿರ್ಯಾನಿ ಜೊತೆ ಉಳ್ಳಾಗಡ್ಡಿ ಕೊಡಲಿಲ್ಲ ಎಂದು ವೇಟರ್ ಜೊತೆ ಗ್ರಾಹಕರು ಮಾರಾಮಾರಿ ನಡೆಸಿ ಇಬ್ಬರು ಗಾಯಗೊಂಡ ನೈಜ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ವಿಶ್ವೇಶ್ವರಯ್ಯ ನಗರದ ಕಿರಣ ಶ್ರೀಕಾಂತ ಹಾದಿಮನಿ19 ಹಾಗೂ ಅಂಕುಶ ಪ್ರಕಾಶ ಚಳಗೇರಿ23 ಎಂಬ ಯುವಕರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಹೊರ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ನೆಹರು ನಗರದ ರಾಮದೇವ ಬಳಿ ಇರುವ ಹೊಟೇಲ್ ಗೆ ಕಿರಣ ಹಾಗೂ ಅಂಕು ಎಂಬ ಯುವಕರು ಊಟಕ್ಕೆ ಹೋಗಿದ್ದರು. ಆಗ ಬಿರ್ಯಾಣಿ ಆರ್ಡರ್ ಮಾಡಿದ್ದ ಇವರಿಗೆ ಊಟದ ಜೊತೆಗೆ ಈರುಳ್ಳಿ ಕೊಟ್ಟಿರಲಿಲ್ಲ. ಆಗ ಈರುಳ್ಳಿ ಕೊಡುವಂತೆ ಕೇಳಿದಾಗ, ಈರುಳ್ಳಿ ದರ ಹೆಚ್ಚಾಗಿರುವುದರಿಂದ ಈರುಳ್ಳಿ ಕೊಡುತ್ತಿಲ್ಲ ಎಂದು ವೇಟರ್ ಉತ್ತರಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ವೇಟರ್ ಹಾಗೂ ಯುವಕರ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ. ಚಮಚೆ ಹಾಗೂ ಕಟ್ಟಿಗೆಗಳಿಂದ ಹೊಡೆದಾಟವಾಗಿದೆ. ಇದರಲ್ಲಿ ಕಿರಣ ಹಾಗೂ ಅಂಕುಶಗೆ ಸ್ವಲ್ಪ ಗಾಯವಾಗಿತ್ತು
ಉಳ್ಳಾಗಡ್ಡಿ ದರ ಏರಿಕೆಯಾದ ಹಿನ್ನಲೆಯಲ್ಲಿ ಬೆಳಗಾವಿ ನಗರದ ನಾನ್ ವೇಜ್ ಹೊಟೇಲ್ ಗಳಲ್ಲಿ ಉಳ್ಳಾಗಡ್ಡಿ ಬದಲಿಗೆ ಕ್ಯಾಬೇಜ್ ಕೊಡಲಾಗುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ