ಸಮೀಕ್ಷೆಗಳು ಸುಳ್ಳಾಗುತ್ತೇವೆ, ನಾನು ಗೆಲ್ತೇನೆಂಬ ವಿಶ್ವಾಸವಿದೆ- ಲಖನ್ ಜಾರಕಿಹೊಳಿ

ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ಫುಲ್ ಬ್ಯುಸಿಯಾಗಿದ್ದಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್‌ ಜಾರಕಿಹೊಳಿ‌ ಇಂದು
ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು.

ಇಂದು ಬೆಳಿಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಅವರು ಈಗಾಗಲೇ ಎಕ್ಸಾಮ್ ಬರೆದಿದ್ದೀವಿ ಡಿಸೆಂಬರ್ 9ರಂದು ಆ್ಯನ್ಸರ್ ಶೀಟ್ ಹೊರಬರುತ್ತೆ
ನಾವು ಕ್ವೆಷನ್ ಪೇಪರ್ ಲೀಕ್ ಮಾಡಿರಲಿಲ್ಲ, 9ರಂದು ಆ್ಯನ್ಸರ್ ಪೇಪರ್‌ ಬರುತ್ತೆ ಗೋಕಾಕ್‌ನಲ್ಲಿ ಶೇಕಡಾವಾರು ಮತದಾನ‌ ಪ್ರಮಾಣ ಹೆಚ್ಚಾಗಿದೆ ಗೆಲ್ಲುವ ವಿಶ್ವಾಸ ನನಗಿದೆ ಎಂದರು

ಉಪಚುನಾವಣೆ ಪ್ರಚಾರದಲ್ಲಿ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆ ವಾಗ್ಯುದ್ಧ ವಿಚಾರವಾಗಿ ಪ್ರಶ್ನಿಸಿದಾಗ
ಮನಸ್ಸಿಗೆ ಬಂದಿದ್ದ ಹೇಳಿಕೆ ನೀಡುತ್ತಿದ್ದಕ್ಕೆ ಉತ್ತರ ಕೊಟ್ಟಿದ್ದೇವೆ ಅಷ್ಟೆ ,ನಮ್ಮ ಕಾರ್ಯಕರ್ತರು, ಅಭಿಮಾನಿಗಳಿಗೆ ಧನ್ಯವಾದ ಹೇಳ್ತೇನೆ ಎಂದರು

ಗೋಕಾಕ್ ಜನ ಯಾರಿಗೆ ಮತ ಹಾಕಿದ್ದಾರೆಂದು ಓಪನ್ ಆಗಿ ಹೇಳಲ್ಲ ಸಮೀಕ್ಷೆಗಳು ಸುಳ್ಳಾಗುತ್ತೇವೆ, ನಾನು ಗೆಲ್ತೇನೆಂಬ ವಿಶ್ವಾಸವಿದೆ ಭ್ರಷ್ಟಾಚಾರ ವಿರುದ್ಧ ನಮ್ಮ ಹೋರಾಟ ಇದೆ ಜನರಿಗಾಗಿ ರಮೇಶ್ ಜಾರಕಿಹೊಳಿ‌ ಬಿಟ್ಟು ನಾವು ಹೊರಬಂದಿದ್ದೇವೆ
ಸತೀಶ್ ಜಾರಕಿಹೊಳಿ ನಮ್ಮ ಬೆನ್ನಿಗೆ ನಿಂತು ಕೆಲಸ ಮಾಡಿದ್ದಾರೆ ಸತೀಶ್, ನಾನು ಡೋರ್ ಟು ಡೋರ್ ಜನರ lಸಂಪರ್ಕದಲ್ಲಿದ್ದೇವೆ ಮ್ಯಾಚ್ ಫಿಕ್ಸಿಂಗ್ ಅಂತಾ ಕೆಲವರು ಹಬ್ಬಿಸಿದ್ದರು ಎಂದು ಲಖನ್ ಅಸಮಾಧಾನ ವ್ಯೆಕ್ತಪಡಿಸಿದರು

ಮಹಿಳಾ ಮತದಾರರ ಒತ್ತಾಯದ ಮೇರೆಗೆ ಈ ಬಾರಿ ನನ್ನ ಪತ್ನಿಯಿಂದಲೂ ಪ್ರಚಾರ ನಡೆಯಿತು
ಎಷ್ಟು ಮತಗಳ ಅಂತರದಿಂದ ಗೆಲ್ತೇವೆ ಅನ್ನೋದು 9ರಂದು ಗೊತ್ತಾಗುತ್ತೆ ಡಿಸೆಂಬರ್ 9ರಂದು ಆ್ಯನ್ಸರ್ ಪೇಪರ್ ಹೊರಗೆ ಬರುತ್ತೆ ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಹೇಳಿದರು.

Check Also

ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ

ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ 63ನೇ …

Leave a Reply

Your email address will not be published. Required fields are marked *