ಬೆಳಗಾವಿ: ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಪಕ್ಷಾತೀತವಾಗಿ ನಡೆಯಬೇಕಿದ್ದ ಚುನಾವಣೆ ಕನ್ನಡ ನಾಡಿನ ಪ್ರತಿಷ್ಠೆ, ಮಾನ ಮರ್ಯಾದೆಯನ್ನು ಪಣಕ್ಕಿಟ್ಟಿದೆ.
ಡಿಸಿಸಿ ಬ್ಯಾಂಕ್ ನ ಎಲ್ಲ 16 ಸ್ಥಾನಕ್ಕೆ ಅವಿರೋಧ ಆಯ್ಕೆಗೆ ಬಿಜೆಪಿ, ಆರ್ ಎಸ್ ಎಸ್ ವರಿಷ್ಠರ ಆದೇಶ ಮೇರೆಗೆ ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದರು. 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನು ಮೂರು ಸ್ಥಾನಕ್ಕೆ ಅ. 6 ರಂದು ಚುನಾವಣೆ ನಡೆಯಲಿದೆ.
ಖಾನಾಪುರ ಪಿಕೆಪಿಎಸ್ ಕ್ಷೇತ್ರದ ಚುನಾವಣೆ ವಿಚಾರದಲ್ಲಿ ಬಿಜೆಪಿ ನಾಡದ್ರೋಹಿ ಎಂಇಎಸ್ ಅಭ್ಯರ್ಥಿ ಅರವಿಂದ ಪಾಟೀಲ ಪರ ಬ್ಯಾಟಿಂಗ್ ಮಾಡುವ ಮೂಲಕ ಇಡೀ ಕನ್ನಡ ನಾಡಿನ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದೆ. ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಚುನಾವಣೆಗೆ ಸ್ಪರ್ಧಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದು, ಬಿಜೆಪಿಗರ ಅವಿರೋಧ ಆಯ್ಕೆ ಕಸರತ್ತಿಗೆ ಬ್ರೇಕ್ ಹಾಕಿದ್ದಾರೆ. ಹಾಗೆ ನೋಡಿದರೆ ಸಹಕಾರ ಸಂಘದ ಆಡಳಿತ ಮಂಡಳಿ ಪಕ್ಷಾತೀತವಾಗಿರುತ್ತದೆ. ಆದರೆ, ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಅಂಜಲಿ ನಿಂಬಾಳ್ಕರ ದಾಖಲೆ ಬರೆದಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಅವರು ಎಂಈಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ ಅವರನ್ನು ಪಕ್ಕದಲ್ಲೇ ನಿಲ್ಲಿಸಿ, ಮಹಾರಾಷ್ಟ್ರ ತ್ರಿಗಳ ವಿರುದ್ಧ,ಎಂಈಎಸ್ ವಿರುದ್ಧ ವಾಗ್ದಾಳಿ ಮಾಡ್ತಾರೆ,ಸಚಿವ ರಮೇಶ್ ಜಾರಕಿಹೊಳಿ ಅವರು ಅರವಿಂದ್ ಪಾಟೀಲ್ ನಮ್ಮ ಕ್ಯಾಂಡಿಡೇಟ್,ಅವರನ್ನು ಶೀಘ್ರದಲ್ಲಿ ಬಿಜೆಪಿಗೆ ಕರ್ಕೊಂಡ ಬರ್ತೀವಿ ಎಂದು ಬೆಳಗಾವಿಯಲ್ಲಿ ಹೇಳಿಕೆ ಕೊಡುವಾಗ,ಅತ್ತ ಖಾನಾಪೂರದಲ್ಲಿ ಅರವಿಂದ್ ಪಾಟೀಲ ,ಕರಾಳ ದಿನಾಚರಣೆಯಲ್ಲಿ ಭಾಗಿಯಾಗಿದ್ದರು.
ನಾಡವಿರೋಧಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ ಎಂಈಎಸ್ ನಾಯಕ ,ಮಾಜಿ ಶಾಸಕ ಅರವಿಂದ ಪಾಟೀಲ ಅವರನ್ನು ಗೆಲ್ಲಿಸಲು ಬಿಜೆಪಿ ಪಣತೊಟ್ಟಿರುವದು ಈ ನಾಡಿನ ದೊಡ್ಡ ದುರಂತ.
ಬೆಳಗಾವಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ನಾಯಕರು ನಾಡದ್ರೋಹಿ ಎಂಈಎಸ್ ಗೆ ಬೆಂಬಲ ಸೂಚಿಸಿ,ಗೆಲ್ಲಿಸುವ ಸಂಕಲ್ಪ ಮಾಡುವ ಮೂಲಕ ನಾಡಿನ ಹಿತವನ್ನು ಹರಾಜಕ್ಕಿಟ್ಟಿದ್ದು ದುರ್ದೈವ.