Breaking News

ಬೆಳಗಾವಿಯ ಹಳೇಯ ಬಸ್ ನಿಲ್ಧಾಣಕ್ಕೆ ಅಭಿವೃದ್ಧಿಯ ಭಾಗ್ಯ

ಬೆಳಗಾವಿ

ಸ್ಮಾಟ್೯ ಸಿಟಿ ಯೋಜನೆಯಲ್ಲಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣವನ್ನು ಆದಷ್ಟು ಬೇಗ ಮುಗಿಸಿಕೊಡಬೇಕು ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಹೇಳಿದರು.

ಅವರು ಮಂಗಳವಾರ ನಗರದ ರೈಲ್ವೆ ನಿಲ್ದಾಣದ ಎದುರಿನ ಬಸ್ ನಿಲ್ದಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು.

ಬೆಳಗಾವಿಯ ಕೇಂದ್ರ ಬಿಂದು ದಂಡುಮಂಡಳಿಯ ವ್ಯಾಪ್ತಿಯ 1.86 ಲಕ್ಷ ವೆಚ್ಚದಲ್ಲಿ ನರ್ಮಿಸುತ್ತಿರುವ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಇದು ಅತೀ ಶೀಘ್ರದಲ್ಲೇ ಈ ಕಾಮಗಾರಿ ಮುಗಿಯಬೇಕು.

ಸಿಬಿಟಿ ಬಸ್ ನಿಲ್ದಾಣದ ಕಾಮಗಾರಿ ವಿಳಂಭವಾಗುತ್ತಿರುವುದರಿಂದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ. ರೈಲ್ವೆ ‌ನಿಲ್ದಾಣದ ಎದುರಿನ ಬಸ್ ನಿಲ್ದಾಣದ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಜನರಿಗೆ ಅನಕೂಲ ಮಾಡಿಕೊಡಬೇಕು ಎಂದರು.

ಗುತ್ತಿಗೆದಾರರು ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲಸ ಬೇಗ ಮುಗಿಸಿಕೊಡಬೇಕು ಎಂದು ಹೇಳಿದರು.

ಸಾಜೀದ ಶೇಖ, ನಿರಂಜನಾ ಅಷ್ಠೇಕರ್, ರಿಜ್ವಾನ್ ಪೇಪಾರಿ, ವಿಕ್ರಮ್, ಸತೀಶ ಮಂಡೋಲ್ಕರ್, ಎಂ.ವಾಯ್ .ತಾಲೂಕರ, ನಾಗೇಶ ಸಾಕೆ, ದಂಡು ಮಂಡಳಿ ಸಿಇಒ ಬಲಚೇಶ್, ಬಿಜೆಪಿ ನಗರಾಧ್ಯಕ್ಷ ಶಶಿ ಪಾಟೀಲ, ಉತ್ತರ ಮತಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟೇಪ್ಪನವರ ಸೇರಿದಂತೆ ಮೊದಲಾದವರು ಹಾಜರಿದ್ದರು.

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *