ಬೆಳಗಾವಿ- ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆಯನ್ನು ವಿರೋಧಿಸಿ ಕನ್ನಡ ಸಂಘಟನೆಗಳು ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಕರೆ ನೀಡಿರುವ ದಿನವೇ ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ
ಬೆಳಗಾವಿಯಲ್ಲಿ ಬಿಜೆಪಿ ನಾಯಕರಿಂದ ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಕಾರ್ಯಕಾರಿಣಿ ಕುರಿತು ಮಾಹಿತಿ ನೀಡಿದ್ರು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾನಾ,ಮಾತನಾಡಿ, ಡಿಸೆಂಬರ್ 4ರಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬರ್ತಾರೆ, ಡಿಸೆಂಬರ್ 4ರ ಸಂಜೆ 7.30ಕ್ಕೆ ಕೋರ್ ಕಮಿಟಿ ಸಭೆ ಬೆಳಗಾವಿಯಲ್ಲೇ ನಡೆಯಲಿದೆ. ಡಿಸೆಂಬರ್ 5ರ ಬೆಳಗ್ಗೆ 10.30ರಿಂದ ಸಂಜೆ 5ರವರೆಗೆ ಕಾರ್ಯಕಾರಿಣಿ ಸಭೆ ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಭೆಗೆ ಸಿ.ಟಿ.ರವಿ ಸೇರಿದಂತೆ ಹಲವು ಮುಖಂಡರು ಆಗಮಿಸಲಿದ್ದಾರೆ, 140 ಜನರು ನೇರವಾಗಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುತ್ತಾರೆ. ಕೋವಿಡ್ ಹಿನ್ನೆಲೆ ಉಳಿದವರು ವರ್ಚ್ಯುಯಲ್ ಆಗಿ ಭಾಗವಹಿಸುತ್ತಾರೆ, ಕೊರೊನಾ ಕಾರಣಕ್ಕೆ ಕೆಲವರು ಸಭೆಯಲ್ಲಿ ಭಾಗಿಯಾದ್ರೆ ಕೆಲವರು ವರ್ಚ್ಯುಯಲ್ ಆಗಿ ಭಾಗಿ ಆಗುತ್ತಾರೆ. ಗ್ರಾಮ ಪಂಚಾಯತಿ ಚುನಾವಣೆಗೆ ಸಜ್ಜಾಗಲು ಎಲ್ಲ ತರಹದ ಸಿದ್ಧತೆ ಮಾಡಿಕಡಿದ್ದೇವೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಗೆಲ್ಲಲು ರಣತಂತ್ರ ರೂಪಿಸುವ ಬಗ್ಗೆ ಚರ್ಚೆ ಆಗುತ್ತೆ ಎಂದರು.
ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ಲೋಕಸಭಾ ಮಸ್ಕೀ ಸೇರಿದಂತೆ ಉಪಚುನಾವಣೆ ಬಗ್ಗೆ ಚರ್ಚೆ ಆಗುತ್ತದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾನಾ ಹೇಳಿದರು.
ಡಿಸೆಂಬರ್ ಐದರ ಬಂದ್‌ಗೆ ಯಾರೂ ಬೆಂಬಲ ನೀಡ್ತಿಲ್ಲ,ಸಿಎಂ ಬಿಎಸ್‌ವೈ , ಸಿ.ಟಿ.ರವಿ ಸೇರಿ 14 ಜನರು ಕೋರ್ ಕಮಿಟಿ ಯಲ್ಲಿ ಸೇರ್ತಾರೆ, ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂಬ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ವಿಚಾರ, ತಕ್ಷಣ ಸುಪ್ರೀಂಕೋರ್ಟ್ ಗೆ ಮನವಿ ಮಾಡ್ತೇವೆ. ಈಗಾಗಲೇ ಬೆಂಗಳೂರು ಹಾಗೂ ದೆಹಲಿ ವಕೀಲರ ಜೊತೆ ಮಾತನಾಡಿದ್ದೇನೆ, 17 ಶಾಸಕರ ಅನರ್ಹತೆ ಬಗ್ಗೆ ಮೂಲ ಸುಪ್ರೀಂಕೋರ್ಟ್ ಆದೇಶ ಇದೆ, ಅದನ್ನೇ ಇಟ್ಟುಕೊಂಡು ನಾವು ಸುಪ್ರೀಂಕೋರ್ಟ್‌ಗೆ ಮನವಿ ಮಾಡ್ತೀವಿ,ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಹೆಚ್.ವಿಶ್ವನಾಥ ಏನು ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ, ಸಂಪುಟ ಪುನಾರಚನೆ ಮಾಡೋದು ಸಿಎಂ ಪರಮಾಧಿಕಾರ, ಎಲ್ಲಾ ಮಿತ್ರಮಂಡಳಿ ಶಾಸಕರು, ಬಿಜೆಪಿ ಶಾಸಕರು ಸೇರಿ ಸುಪ್ರೀಂಕೋರ್ಟ್ ಗೆ ಮನವಿ ಮಾಡ್ತೇವೆ. ಎಂದರು.