ಬೆಳಗಾವಿ- ಕೇರಳ ಸರ್ಕಾರ ಉಗ್ರವಾದಿಗಳಿಗೆ ರಕ್ಷಣೆ ನೀಡುತ್ತಿರುವದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಬಿಜೆಪಿ ಘಟಕ ಮಾರ್ಚ 1 ರಂದು ಪ್ರತಿಭಟಿಸಲು ನಿರ್ಧರಿಸಿದೆ
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಶಾಸಕ ಸಂಜಯ ಪಾಟೀಲ ಎಂಬಿ ಝಿರಲಿ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಭಾಗವಹಿದಿದ್ದರು
ಸಭೆಯಲ್ಲಿ ಮಾತನಾಡಿದ ಆರ್ ಎಸ್ ಎಸ್ ಸಂಘಟಕ ರಾಮಚಂದ್ರ ಎಡಕೆ ಮಾತನಾಡಿ ಕೇರಳ ರಾಜ್ಯದಲ್ಲಿ ಏಳು ದಶಕದಲ್ಲಿ ೨೫೦ ಕ್ಕೂ ಹೆಚ್ಚು ಹಿಂದುತ್ವವಾದಿ ಕಾರ್ಯಕರ್ತರು ಬಲಿಯಾಗಿದ್ದಾರೆ ಕೇರಳದಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದಾಗಿನಿಂದ ಹಿಂಸಾಚಾರ ಹೆಚ್ಚಾಗಿದೆ ಇಲ್ಲಿಯ ಸರ್ಕಾರ ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತಿದ್ದು ಕೇಂದ್ರ ಸರ್ಕಾರ ಕೇರಳ ಸರ್ಕಾರವನ್ನು ವಜಾ ಮಾಡಬೇಕೆಂದು ಒತ್ತಾಯಿಸಿದರು
ಮಾರ್ಚ 1 ರಂದು ಕೇರಳ ಸರ್ಕಾರ ವಜಾ ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ತ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು