ಬೆಳಗಾವಿ ಜಿಲ್ಲಾ ಬಿಜೆಪಿ ರಾಜಕೀಯದ ಅಳಿಯು, ಉಳಿಯುವಿನ ವರದಿ ಹೈಕಮಾಂಡ್ ಸಲ್ಲಿಸಲಿರುವ ಅರುಣ್ ಸಿಂಗ್!
(ಬೆಳಗಾವಿ ಸುದ್ದಿ ಗ್ರೌಂಡ್ ರಿಪೋರ್ಟ್ )
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಗುಂಪುಗಾರಿಕೆಯಿಂದ ಸೋರಗಿದೆ. ಜಿಲ್ಲೆಯಲ್ಲಿ ಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಎಲ್ಲವೂ ಸರಿಯಲ್ಲ. ಜಾರಕಿಹೊಳಿ, ಕತ್ತಿ ಎರಡು ಪ್ರಭಲ ಗುಂಪುಗಳು ನಡುವೆ ಪೈಪೋಟಿ ಆರಂಭವಾಗಿದೆ. ಜಿಲ್ಲೆಯಲ್ಲಿ ಒಳ ಜಗಳ, ಇದರಿಂದ ಮುಂದಿನ ದಿನದಲ್ಲಿ ಪಕ್ಷದ ಮೇಲೆ ಆಗೋ ಪರಿಣಾಮದ ಮಾಹಿತಿ ಪಡೆಯಲು ಸ್ವತಃ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಪಕ್ಷದ ಎಲ್ಲಾ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಗೆ ವರದಿ ಸಲ್ಲಿಕೆಯಾಗಲಿದೆ. ಅರುಣ್ ಸಿಂಗ್ ಮುಂದೆ ರಮೇಶ ಜಾರಕಿಹೊಳಿ ಪರ, ವಿರುದ್ಧ ದೂರು ನೀಡಲು ಬಣಗಳು ಸಿದ್ಧತೆ ಮಾಡಿಕೊಂಡಿವೆ.
ಬೆಳಗಾವಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಸಂಕಮ್ ಹೋಟೆಲ್ ನಲ್ಲಿ ಬಿಜೆಪಿ ಸಭೆ ನಡೆಯಲಿದೆ. ಸಭೆಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸೇರಿ ಅನೇಕು ನಾಯಕರು ಇರಲಿದ್ದಾರೆ. ಎರಡು ದಿನ ಪಕ್ಷ ಸಂಘಟನೆ, ಮುಂದಿನ ನಡೆಯ ಮಹತ್ವದ ಚಿಂತನ ಮಂಥನ ನಡೆಯಲಿದೆ.
ಪ್ರಮುಖವಾಗಿ ಅರುಣ್ ಸಿಂಗ್ ಮುಂದೆ ರಮೇಶ ಜಾರಕಿಹೊಳಿ ಮಂತ್ರಿ ಮಾಡಬೇಕು, ಬೇಡ ಎಂದು ಪ್ರತ್ಯೇಕ ಮನವಿ ಸಲ್ಲಿಕೆ ಸಾಧ್ಯತೆ ಹೆಚ್ಚಾಗಿದೆ. ರಮೇಶ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ರೆ ಜಿಲ್ಲೆಯಲ್ಲಿ ಆಗುವ ಪರಿಣಾಮ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇನ್ನೂ ರಮೇಶ ಜಾರಕಿಹೊಳಿಯನ್ನು ಮಂತ್ರಿ ಮಾಡಬಾರದು ಎಂದು ಒಂದು ಗುಂಪು ಸಿದ್ಧತೆ ಮಾಡಿಕೊಂಡಿದೆ. ಮಂತ್ರಿ ಮಾಡದಿದ್ದರೆ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಹಳ್ಳ ಹಿಡಿಯಲಿದೆ.ಎಂದು ಅರುಣ್ ಸಿಂಗ್ ಅವರನ್ನು ಮನವರಿಕೆ ಮಾಡಲು ಇನ್ನೊಂದು ಗುಂಪು ರೆಡಿಯಾಗಿದೆ.
ಬಿಜೆಪಿಯ ಲಿಂಗಾಯತ ನಾಯಕರು.ಒಂದಾಗಿದ್ದಾರೆ.ಇನ್ನೊಂದು ಬದಿಯಲ್ಲಿ ಜಾರಕಿಹೊಳಿ ಸಹೋದರರು ಒಂಟಿಯಾಗಿ ಅವರಿಗೆ ಟಕ್ಕರ್ ಕೊಡುತ್ರಿದ್ದಾರೆ.ಜಾರಕಿಹೊಳಿ ಸಹೋದರರು ಒಂಟಿಯಾಗಿದ್ದರು ಸಮಬಲದ ಟಕ್ಕರ್ ಕೊಡುತ್ತಿದ್ದಾರೆ.
ನಾಳೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಬರಲಿದ್ದು ಬೆಳಗಾವಿ ಜಿಲ್ಲೆಯ ಬಣ ರಾಜಕೀಯ,ಮತ್ತು ಒಳ ಜಗಳದ ಕುರಿತು ಬಿಜೆಪಿ ಕಾರ್ಯಕರ್ತರಿಂದ ನಾಯಕರಿಂದ,ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಹಾಲಿ ಶಾಸಕರು,ಮಾಜಿ ಶಾಸಕರು,ಬಿಜೆಪಿ ಪದಾಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಮಾತನಾಡಿ ವ್ಯಯಕ್ತಿಕ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಬಿಜೆಪಿ ಹೈಕಮಾಂಡ್ ಗೆ ವರದಿ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲಿ ನಾಳೆಯಿಂದ ನಡೆಯಲಿರುವ ಎರಡು ದಿನಗಳ ಬಿಜೆಪಿ ಬೈಟಕ್ ರಮೇಶ್ ಜಾರಕಿಹೊಳಿ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದು,ಸಚಿವ ಉಮೇಶ್ ಕತ್ತಿ ಮತ್ತು ಲಕ್ಷ್ಮಣ ಸವದಿ ಅವರ ವ್ಯಯಕ್ತಿಕ ವರ್ಚಸ್ಸು ಎಷ್ಟಿದೆ ಅನ್ನೋದನ್ನು ಈ ಸಭೆ ಬಿಂಬಿಸಲಿದೆ.
ಬೆಳಗಾವಿಯ ಬಿಜೆಪಿ ಬೈಟಕ್ ಮುಗಿದ ಬಳಿಕವೇ ಸಂಪುಟ ವಿಸ್ತರಣೆಯೋ..? ಪುನಾರಚಣೆಯೋ ಅಥವಾ ಯಥಾ ಸ್ಥಿತಿಯಲ್ಲಿ ಸರ್ಕಾರ ಮುಂದು ವರೆಯಲಿದೆಯೋ ಅನ್ನೋದು ಸ್ಪಷ್ಡವಾಗಲಿದೆ.
ರಮೇಶ್ ಜಾರಕಿಹೊಳಿ ಮಂತ್ರಿಯಾದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಇನ್ನಷ್ಟು ಭದ್ರವಾಗಲಿದೆ,ಪಕ್ಷಕ್ಕೆ ಅಗತ್ಯವಿದ್ದಾಗ ದುಡ್ಡು ಖರ್ಚು ಮಾಡ್ತಾರೆ, ಜೊತೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯಲ್ಲಿ ಸುತ್ತಾಡಿ ಪಕ್ಷವನ್ನು ಗೆಲ್ಲಿಸುತ್ತಾರೆ ಎಂದು ಬಿಜೆಪಿಯ ಕಾರ್ತಕರ್ತರೇ ಹೇಳ್ತಾರೆ.ಆದ್ರೆ ಈ ವಿಚಾರವನ್ನು ಅರುಣ್ ಸಿಂಗ್ ಕೇಳ್ತಾರಾ…??? ಎನ್ನುವದನ್ನು ಕಾದು ನೋಡಬೇಕಾಗಿದೆ.