Breaking News

ಬೆಳಗಾವಿ ಮಹಾನಗರ ಬಿಜೆಪಿ ಸಭೆಯಲ್ಲಿ ಗಲಾಟೆ….ಲೀಡರ್ ಗಳು ತರಾಟೆ….!!!!

ಬೆಳಗಾವಿ – ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ಜಿಲ್ಲಾ ಘಟಕದ ಪದಾಧಿಕಾರಿಗಳ ಪುನರಾಯ್ಕೆ ಆಗೋವರೆಗೆ ಸಭೆ ನಡೆಸೋದು ಬೇಡ ಎಂದು ಪಟ್ಟು ಹಿಡಿದು ಗಲಾಟೆ ಮಾಡಿದ ಘಟನೆ ನಡೆಯಿತು

ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಅವರು ಮಾತನಾಡಲು ಆರಂಭಿಸಿದಾಗ ಮದ್ಯಪ್ರವೇಶ ಮಾಡಿ ವೇದಿಕೆ ಹತ್ತಿರ ಬಂದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ,…ನರೇಂದ್ರ ಮೋದಿ ಬಂದಾಗ ಪೋಜು ಕೊಡುವವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುತ್ತಿದೆ ಪಕ್ಷವನ್ನು ಸಂಘಟಿಸಿ ಪಕ್ಷದ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆ ಇಲ್ಲ ಬೆಳಗಾವಿ ಮಹಾನಗರ ಘಟಕವನ್ನು ವಿಸರ್ಜಿಸಿ ಪ್ರಯಾಣಿಕ ಕಾರ್ಯಕರ್ತರಿಗೆ ಸ್ಥಾನಮಾನ ಕೊಡೋವರೆಗೆ ಸಭೆ ನಡೆಸೋದು ಬೇಡ ಎಂದು ಕಾರ್ಯಕರ್ತರು ಪಟ್ಟು ಹಿಡಿದಾಗ ಸಭೆಯಲ್ಲಿ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು

ನಂತರ ಆಕ್ರೋಶಿತ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ ಸಂಸದ ಸುರೇಶ ಅಂಗಡಿ ಕಾರ್ಯಕರ್ತರ ಭಾವನೆಗಳು ನನಗೆ ಅರ್ಥವಾಗಿದೆ ಎಲ್ಲರೂ ಕೂಡಿಕೊಂಡು ಒಂದು ಕಡೆ ಕುಳಿತುಕೊಂಡು ಸಮಸ್ಯೆ ಬಗೆಹರಿಸೋಣ ಈಗ ಮಹಾನಗರ ಪಾಲಿಕೆಯ ಚುನಾವಣೆ ಘೋಷಣೆಯಾಗಲಿದೆ ಇಂತಹ ಸಂಧರ್ಭದಲ್ಲಿ ಗದ್ದಲ ಗಲಾಟೆ ಬೇಡ ಲೋಕಸಭೆ ಚುನಾವಣೆಯೂ ಸಮೀಪಿಸಿದೆ ಕಾರ್ಯಕರ್ತರ ಶ್ರಮದಿಂದಲೇ ಬೆಳಗಾವಿ ಮಹಾನಗರದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ ಕಾರ್ಯಕರ್ತರಿಗೆ ಸ್ಥಾನಮಾನ ನೀಡುವದು ನಮ್ಮ ಜವಾಬ್ದಾರಿ ಎಂದು ಸಂಸದ ಸುರೇಶ ಅಂಗಡಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು
ಸಭೆಯಲ್ಲಿ ಜಿಲ್ಲಾಧ್ಯಕ್ಷ ಹರಕುಣಿ,ಎಂ ಬಿ ಝಿರಲಿ ದೀಪಕ ಜಮಖಂಡಿ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *