Breaking News
Home / Breaking News / ಅನ್ನ ಭಾಗ್ಯದ ಅಕ್ಕಿ ಸಾಗಾಣಿಕೆ,ಪೋಲೀಸರ ದಾಳಿ ಎರಡು ಬುಲೇರೋ ಸಮೇತ ಆರೋಪಿಗಳು ವಶಕ್ಕೆ

ಅನ್ನ ಭಾಗ್ಯದ ಅಕ್ಕಿ ಸಾಗಾಣಿಕೆ,ಪೋಲೀಸರ ದಾಳಿ ಎರಡು ಬುಲೇರೋ ಸಮೇತ ಆರೋಪಿಗಳು ವಶಕ್ಕೆ

ಬೆಳಗಾವಿ-
ಬಿಪಿಎಲ್ ಕಾರ್ಡ್ ದಾರರಿಂದ‌ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ತರುತ್ತಿದ್ದ ಪಡಿತರ ಅಕ್ಕಿಯನ್ನು ಹಿರೇಬಾಗೇವಾಡಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಿಂದ ಬೆಳಗಾವಿ ನಗರಕ್ಕೆ ತರುತ್ತಿದ್ದ ಎರಡು ಬೊಲೆರೋ ವಾಹನಗಳಲ್ಲಿ ಸಾಗಿಸುತ್ತಿದ್ದ 216ಚೀಲ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಬೆಳಗಾವಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಹಲಗಾ ಸಮೀಪದಲ್ಲಿ ಎರಡು ವಾಹನಳನ್ನ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದಾಗ ಅನ್ನ ಭಾಗ್ಯ ಅಕ್ಕಿಯನ್ನ ಕಾಳ‌ಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ. ಈ ಕುರಿತು ಮೂರು ಜನ ಆರೋಪಿಗಳು ಹಾಗೂ ಎರಡು ಬೊಲೆರೋ ವಾಹನ ಜಪ್ತಿ ಮಾಡಿದ್ದು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About BGAdmin

Check Also

ವಿಟಿಯು ಅವ್ಯೆವಹಾರ..ಪ್ರೋಫೆಸರ್ ಯೋಗಾನಂದ ಅರೆಸ್ಟ್

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ (ವಿಟಿಯು)ಲ್ಯಾಬ್ ಸಾಧನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿ ಉಪನ್ಯಾಸಕ …

Leave a Reply

Your email address will not be published. Required fields are marked *