ಬೆಳಗಾವಿ- ಆಕ್ರಮ ಸಂಪತ್ತು ಹೊಂದಿರುವ ಸಚಿವ ರಮೇಶ ಜಾರಕಿಹೊಳಿ,ಲಕ್ಷ್ಮೀ ಹೆಬ್ಬಾಳಕರ ಅವರ ರಾಜಿನಾಮೆ ಗೆ ಒತ್ತಾಯಿಸಿ ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ನೀಡಿರುವ ವಿಷಯವನ್ನು ಮುಂದಿಟ್ಟುಕೊಂಡು ಬೆಜೆಪಿ ನಾಯಕರು ಬೆಳಗಾವಿಯಲ್ಲಿ ಕಾಂಗ್ರೆಸ್ ವಿರುದ್ಧ ಸಮರ ಸಾರಿದರು
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಜನ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು
ರಾಜ್ಯ ಸರ್ಕಾರ ಬ್ರಷ್ಟಾಚಾರದಲ್ಲಿ ತೊಡಗಿರುವ ಮಂತ್ರಿಗಳ ಸಂರಕ್ಷಣೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಬ್ರಷ್ಟಾಚಾರದಲ್ಲಿ ತೊಡಗೆದೆ ಎಂದು ಬಿಜೆಪಿ ಆರೋಪಿಸಿತು
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ನೇತ್ರತ್ವದಲ್ಲಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು
ವಿಧಾನ ಪರಿಷತ್ತಿನ ನಾಯಕ ಈಶ್ವರಪ್ಪ ಮಾತನಾಡಿ ಬ್ರಷ್ಟಾಚಾರದ ವಿರುದ್ದ ಹೋರಾಟ ಆರಂಭವಾಗಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಬ್ರಷ್ಟಾಚಾರ ಹೆಚ್ಚಾಗಿದೆ ದುಡ್ಡು ಕೊಟ್ಟರೆ ಬಡವರಿಗೆ ಒಂದು ಲೋಡ ಮರಳು ಸಿಗುತ್ತಿಲ್ಲ ಲಂಚ ಕೊಟ್ಟರೆ ಮಾತ್ರ ಮರಳು ಸಿಗುತ್ತದೆ ಇಂತಹ ಬ್ರಷ್ಟ ಸರ್ಕಾರ ವನ್ನು ಜೀವನದಲ್ಲಿಯೇ ನೋಡಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು
ಬ್ರಷ್ಟಾಚಾರದಲ್ಲಿ ತೊಡಗಿರುವ ಮಂತ್ರಿಗಳ ರಕ್ಷಣೆ ಮಾಡುವ ಮುಖ್ಯಮಂತ್ರಿ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ ಮಾತನಾಡಿ ಬ್ರಷ್ಟಾಚಾರದ ವಿರುದ್ಧ ಚನ್ನಮ್ಮನ ನಾಡಿನಿಂದ ಬಿಜೆಪಿ ಹೋರಾಟ ಆರಂಭಿಸಿದೆ ಅದಕ್ಕೆ ರಾಯಣ್ಣನ ಸಮುದಾಯದ ಈಶ್ವರಪ್ಪ ಅದರ ನೇತ್ರತ್ವ ವಹಿಸಿದ್ದಾರೆ ಕೊಪ್ಪಳದಲ್ಲಿ ಹಿಡಿ ಮಣ್ಣು ಹಾಕದೇ ೪೦ ಕೋಟಿ ಲೂಟಿ ಮಾಡಲಾಗಿದೆ ಇಂತಹ ಬ್ರಷ್ಟ ಸರ್ಕಾರ ನಾನೆಂದಿಗೂ ನೋಡಿಲ್ಲ ಎಂದು ಕಾಂಗ್ರೆಸ ಸರಕಾರದ ವಿರುದ್ಧ ಕಿಡಿಕಾರಿದರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೋಮಾಜಿ ರಾವ ಕಾಪಸೆ ಆಡಳಿತ ನಡೆಸಿದ್ದಾರೆ ಎಂದು ಆರೋಪಿಸಿದರು
ಸಂಸದ ಸುರೇಶ ಅಂಗಡಿ ಅವರು ಮಾತನಾಡಿ ಕಾಂಗ್ರೆಸ್ ದುರಾಡಳಿತದಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ ಅಧಿಕಾರಿಗಳು ಬ್ರಷ್ಟಾಚಾರದಲ್ಲಿ ತೊಡಗಿದ್ದಾಗ ಅವರ ಮೇಲೆ ಕ್ರಮ ಕೈಗೊಳ್ಳುವ ಮುಖ್ಯಮಂತ್ರಿ ಬ್ರಷ್ಟ ಮಂತ್ರಿಗಳ ವಿರುದ್ದ ಕ್ರಮ ಕೈಗೊಳ್ಳದೇ ಬ್ರಷ್ಟ ಮಂತ್ರಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಮಾಜಿ ಸಚಿವ ಉಮೇಶ ಕತ್ತಿ ಮಾತನಾಡಿ ಡೈರಿ ಹಗರಣದ ಕುರಿತು ಸರಕಾರ ಉತ್ತರ ಕೊಡುತ್ತಿಲ್ಲ ಮುಖ್ಯ ಮಂತ್ರಿಗಳಿಗೆ ನಿಜವಾಗಿಯೂ ಮಾನ ಮರ್ಯಾದೆ ಇದ್ದರೆ ರಾಜಿನಾಮೆ ನೀಡಲಿ ಬ್ರಷ್ಟಾಚಾರದಲ್ಲಿ ತೊಡಗಿರುವ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು