Breaking News

ಕೇರಳದ ಲೆಪ್ಟಿಷ್ಠ ಸರ್ಕಾರವನ್ನು ಲೆಫ್ಟ..ರೈಟ್ ತಗೊಳ್ಳಿ

ಬೆಳಗಾವಿ- ಕೇರಳದಲ್ಲಿ ಎಡಪಂಥೀಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ಹೆಚ್ಚಾಗಿದ್ದು ಕೇಂದ್ರ ಸರ್ಕಾರ ಕೂಡಲೇ ಕೇರಳ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಜರುಗಿಸಿ ಕೇರಳದಲ್ಲಿ ಪ್ರೆಸಿಡೆಂಟ ರೂಲ್ ಜಾರಿ ಮಾಡುವಂತೆ ವಿವಿಧ ಹಿಂದು ಸಂಘಟನೆಗಳು ಒತ್ತಾಯಿಸಿವೆ

ಸಂಘ ಪರಿವಾರ ಬಿಜೆಪಿ ಹಾಗು ವಿವಿಧ ಹಿಂದೂ ಸಂಘಟನೆಗಳು ಕೇರಳ ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯಿಸಿ ನಗರದ ಧರ್ಮವೀರ ಸಂಬಾಜಿ ವೃತ್ರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿಯನ್ನು ಹೊರಡಿಸಿದ್ದರು ಪ್ರತಿಭಟನೆಯಲ್ಲಿ ಸಂಸದ ಸುರೇಶ ಅಂಗಡಿ,ವಿಶ್ವನಾಥ ಪಾಟೀಲ ಅಭಯ ಪಾಟೀಲ ಕಿರಣ ಜಾಧವ  ರಾಜು ಜಿಕ್ಕನಗೌಡರ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಭಾಗವಹಿದ್ದರು

ಬೆಳಗಾವಿಯ ವಿಜ್ಞಾನಿ ಹಾಗು ಉದ್ಯಮಿ ದೀಪಕ ಧಡೋತಿ ಮಾತನಾಡಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಅಭಿವೃದ್ಧಿಯತ್ತ ಸಾಗಿದೆ ಭಾರತದ ಸಾಧನೆ ಜಗತ್ತಿನ ಗಮನ ಸೆಳೆದಿದೆ ಆದರೆ ಕೆಲವರು ಹಿಂಸೆಗೆ ಪ್ರೋತ್ಸಾಹ ನೀಡಿ ಭಾರತದದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ದೇಶದ ಐಕ್ಯತೆಗೆ ನಡೆಯುವ ಹೋರಾಟದಲ್ಲಿ ಪ್ರತಿಯೊಬ್ಬ ಯುವಕ ಪಾಲ್ಗೊಳ್ಳ ಬೇಕು ಎಂದು ಕರೆ ನೀಡಿದರು

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *